• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಬೆಚೇಂದ್ರ ಮೋದಿ' ಎಂದು ಪ್ರಧಾನಿ ಮೋದಿಯ ಕಾಲೆಳೆದ ರಾಹುಲ್ ಗಾಂಧಿ

|

ನವದೆಹಲಿ, ಅಕ್ಟೋಬರ್ 17: ರಾಜ್ಯಗಳು ಮುನ್ನಡೆಸುತ್ತಿರುವ ಕಂಪನಿಗಳನ್ನು ಖಾಸಗೀಕರಣಗೊಳಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡರು.

"ಬೆಚೇಂದ್ರ ಮೋದಿ ದೇಶದ ಸಾರ್ವಜನಿಕ ವಿಭಾಗ(PSU)ಗಳನ್ನು ತಮ್ಮ ಸೂಟ್ ಬೂಟ್ ಗೆಳೆಯರಿಗೆ ದಾನ ಮಾಡಿದ್ದಾರೆ. ಅದನ್ನು ಕಟ್ಟಲು ಎಷ್ಟೋ ಜನ ಹಲವು ವರ್ಷಗಳಿಂದ ಪರಿಶ್ರಮ ಪಟ್ಟಿದ್ದಾರೆ. ಈಗ ಅದನ್ನು ಖಾಸಗೀಕರಣಗೊಳಿಸಿದ್ದು, ಲಕ್ಷಾಂತರ ಕಾರ್ಮಿಕರಿಗೆ ಭಯ, ಅಭದ್ರತೆ ಹುಟ್ಟಿಸಿದೆ. ಆ ಎಲ್ಲ ಕಾರ್ಮಿಕರಿಗೆ ಹೆಗಲು ಕೊಟ್ಟು ನಾನು ನಿಂತಿದ್ದೇನೆ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಜೇಬುಗಳ್ಳರಂತೆ ಗಮನ ಬೇರೆಡೆ ಸೆಳೆಯುವ ಮೋದಿ: ರಾಹುಲ್ ಟೀಕೆ

ಮಂಗಳವಾರವಷ್ಟೇ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಲೌಡ್ ಸ್ಪೀಕರ್ ಎಂದು ರಾಹುಲ್ ಗಾಂಧಿ ಕರೆದಿದ್ದರು. ಹರ್ಯಾಣ ಮತ್ತು ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ, ನರೇಂದ್ರ ಮೋದಿ ಅವರ ಮೇಲೆ ಹರಿಹಾಯ್ದರು.

"ಬಿಜೆಪಿ ಸರ್ಕಾರದ ಶ್ರೀಮಂತ ಪರ ಆಡಳಿತದಿಂದಲೇ ಭಾರತೀಯ ಆರ್ಥಿಕತೆ ಮಕಾಡೆ ಮಲಗಿದೆ. ಬಡವರ ಬಳಿ ಹಣವಿದ್ದರೆ ಅವರು ಕೊಂಡುಕೊಳ್ಳುತ್ತಾರೆ. ಆಗ ಬೇಡಿಕೆ ಹೆಚ್ಚುತ್ತದೆ. ಆಗ ಆರ್ಥಿಕತೆಯೂ ಸುಧಾರಿಸುತ್ತದೆ. ಇಲ್ಲವೆಂದರೆ ಹೀಗೇ ಆಗುತ್ತದೆ" ಎಂದು ರಾಹುಲ್ ಗಾಂಧಿ ಹೇಳಿದರು.

English summary
Congress leader Rahul Gandhi Calls PM Narendra Modi as Bechendra Modi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X