ಜಯಂತಿ ನಟರಾಜನ್ ವಿವಾದ: ಮೊದಲ ಬಾರಿ ಬಾಯ್ಬಿಟ್ಟ ರಾಹುಲ್

ನವದೆಹಲಿ, ಫೆ 4: ಜಯಂತಿ ನಟರಾಜನ್ ವಿವಾದ ಮತ್ತು ರಾಜೀನಾಮೆಯ ನಂತರ ಮೌನಕ್ಕೆ ಶರಣಾಗಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೊದಲ ಬಾರಿಗೆ ಈ ವಿಷಯದ ಮೇಲೆ ಹೇಳಿಕೆಯನ್ನು ನೀಡಿದ್ದಾರೆ.

ನನ್ನ ಅಣತಿಯಂತೇ ಜಯಂತಿ ನಟರಾಜನ್ ಕಾರ್ಯ ನಿರ್ವಹಿಸಿದ್ದಾರೆ. ಅರಣ್ಯ, ಪರಿಸರ ಮತ್ತು ಆದಿವಾಸಿಗಳಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಿ ಎಂದು ನಾನೇ ಪರಿಸರ ಸಚಿವಾಲಯಕ್ಕೆ ತಿಳಿಸಿದ್ದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಬುಧವಾರ (ಫೆ 4) ದೆಹಲಿಯ ಜಹಾಂಗೀರ್ ಪುರಿಯಲ್ಲಿ ಭಾರೀ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್, ಹಿಂದಿನಿಂದಲೂ ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗದವರ ಪರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದೇನೆ. ಮುಂದೆಯೂ ಯಾವುದೇ ಭಯವಿಲ್ಲದೇ ಇದನ್ನು ಮುಂದುವರಿಸಿಕೊಂಡು ಹೋಗುತ್ತೇನೆಂದಿದ್ದಾರೆ. (ಕಾಂಗ್ರೆಸ್ಸಿಗೆ ಜಯಂತಿ ನಟರಾಜನ್ ಗುಡ್ ಬೈ)

ಜಯಂತಿ ನಟರಾಜನ್ ವಿವಾದವನ್ನು ದೆಹಲಿ ಚುನಾವಣೆಗೆ ಸರಿಯಾಗಿ ಬಿಜೆಪಿ ಮತದಾರ ಮುಂದಿಟ್ಟಿದೆ ಎಂದು ವ್ಯಂಗ್ಯವಾಡಿದ ರಾಹುಲ್, ದೆಹಲಿಯ ಜನತೆ ಇದನ್ನೆಲ್ಲಾ ಅರ್ಥ ಮಾಡಿಕೊಳ್ಳುತ್ತಾರೆ ಎಂದಿದ್ದಾರೆ.

ಜನವರಿ 30ರಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪಕ್ಷದ ವಿರುದ್ಧ ಕಿಡಿಕಾರಿ ಪಕ್ಷದ ಹಿರಿಯ ನಾಯಕಿ ಜಯಂತಿ ನಟರಾಜನ್ ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದರು.

ಒಡಿಶಾದಲ್ಲಿ ವೇದಾಂತ ಸಂಸ್ಥೆ ಗಣಿಗಾರಿಕೆ ವಿಷಯದಲ್ಲಿ ರಾಹುಲ್ ಗಾಂಧಿ ಅವರು ಮೂಗು ತೂರಿಸಿದರು. ಸುಮಾರು 30,000 ಕೋಟಿ ರು ಪ್ರಾಜೆಕ್ಟ್ ಕೈತಪ್ಪುತ್ತಿದೆ ಎಂದು ನನ್ನ ಸಹದ್ಯೋಗಿಗಳು ಒತ್ತಡ ಹೇರಿದ್ದರು.

ಅದರೆ, ನಾನು ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಕ್ಲಿಯರೆನ್ಸ್ ಪ್ರಮಾಣ ಪತ್ರ ನೀಡಿರಲಿಲ್ಲ. ವಿನಾಕಾರಣ ನನ್ನನ್ನು ರಾಹುಲ್ ವಿರುದ್ಧ ಎತ್ತಿ ಕಟ್ಟಲಾಯಿತು ಎಂದು ಜಯಂತಿ ನಟರಾಜನ್ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತ ಪಡಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. (ಜಯಂತಿ ರಾಜೀನಾಮೆಯ ರಹಸ್ಯವೇನು)

ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ದ ರಾಹುಲ್ ಮುಂದುವರಿದ ವಾಗ್ದಾಳಿ.

ಜನರ ಕನಸಿನ ಜೊತೆ ಮೋದಿ ಆಟ

ಜನರ ಕನಸಿನ ಜೊತೆ ಮೋದಿ ಆಟ

ಸಾರ್ವಜನಿಕರ ಕನಸಿನ ಜೊತೆ ಬಿಜೆಪಿ ಆಟವಾಡುತ್ತಿದೆ. ಚುನಾವಣೆಯ ವೇಳೆ ನೀಡಿದ್ದ ಒಂದೇ ಒಂದು ಭರವಸೆಯನ್ನು ಮೋದಿ ಸರಕಾರಕ್ಕೆ ಇದುವರೆಗೂ ಪೂರೈಸಲು ಸಾಧ್ಯವಾಗಲಿಲ್ಲ. ಬರೀ ಮಾತನಾಡುತ್ತಿದ್ದರೆ, ಕೆಲಸ ಮಾಡುವುದು ಯಾವಾಗ ಎಂದು ಮೋದಿ ವಿರುದ್ದ ರಾಹುಲ್ ಕಿಡಿಕಾರಿದ್ದಾರೆ. ಯಾರಿಗೂ ತೊಂದರೆಯಾಗದಂತೆ ಕೆಲಸ ನಿರ್ವಹಿಸುವಂತೆ ನಾನೇ ಜಯಂತಿ ನಟರಾಜನ್ ಅವರಿಗೆ ಸೂಚಿಸಿದ್ದೆ ಎಂದು ರಾಹುಲ್ ಪುನರುಚ್ಚಿಸಿದ್ದಾರೆ.

ಕ್ರಿಮಿನಲ್ ಸದಸ್ಯರ ಬಗ್ಗೆ ಏನಾಯಿತು?

ಕ್ರಿಮಿನಲ್ ಹಿನ್ನಲೆಯುಳ್ಳವರಿಗೆ ರಾಜಕೀಯ ಪ್ರವೇಶಕ್ಕೆ ನಿರ್ಬಂಧಿಸ ಬೇಕೆನ್ನುವ ಬಿಜೆಪಿ, ದೆಹಲಿ ಚುನಾವಣೆಯಲ್ಲಿ ಮಾಡಿದ್ದೇನು? ಇಪ್ಪತ್ತಕ್ಕೂ ಹೆಚ್ಚು ಕ್ರಿಮಿನಲ್ ಹಿನ್ನಲೆಯುಳ್ಳ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡಿದೆ - ರಾಹುಲ್ ಗಾಂಧಿ

ಭ್ರಷ್ಟಾಚಾರ ನಿರ್ಮೂಲನೆಯಾಗಿದೆಯಾ?

ಭ್ರಷ್ಟಾಚಾರ ನಿರ್ಮೂಲನೆಯಾಗಿದೆಯಾ?

ದೇಶದಲ್ಲಿ ಎಲ್ಲೂ ಭ್ರಷ್ಟಾಚಾರ ನಡೆಯುತ್ತಿಲ್ಲವೇ? ಮೋದಿ ಅವರ 2-4 ಉದ್ಯಮಿ ಗೆಳೆಯರು ಸೌಲಭ್ಯಗಳನ್ನು ಪಡೆಯುತ್ತಿಲ್ಲವೇ? ಆಮ್ ಆದ್ಮಿ ಪಕ್ಷ ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ, ಧರಣಿ ನಡೆಸುತ್ತಿಲ್ಲ - ರಾಹುಲ್ ಗಾಂಧಿ ಪ್ರಶ್ನೆ.

ಭರವಸೆ ನೀಡುವುದು ಸುಲಭ

ಭರವಸೆ ನೀಡುವುದು ಸುಲಭ ಅದನ್ನು ಜಾರಿಗೆ ತರುವುದು ಕಷ್ಟ. ಒಬ್ಬರಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಹಿಂದೇನೂ ಹೇಳಿದ್ದೆ. ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತದೆ - ರಾಹುಲ್ ಗಾಂಧಿ.

ಮೋದಿ ಸರಕಾರದ ಗುಪ್ತ ನಡೆಯೇನು?

ಅಮೆರಿಕಾ ಸರಕಾರಕ್ಕೆ ಮೋದಿ ಸರಕಾರ ನೀಡಿದ ಗುಪ್ತ ಭರವಸೆ ಏನು ಎಂದು ಜನರಿಗೆ ತಿಳಿಯಬೇಕು. ಮೇಕ್ ಇನ್ ಇಂಡಿಯಾ ಎಂದು ಮಾತನಾಡುವ ಮೋದಿ, ಗಣರಾಜ್ಯೋತ್ಸವ ದಿನದಂದು ಹತ್ತು ಲಕ್ಷ ರೂಪಾಯಿ ಬೆಲೆಬಾಳುವ ಸೂಟ್ ಧರಿಸುತ್ತಾರೆ. ಅದು ಕೂಡಾ ಹೊರ ದೇಶದ್ದು - ರಾಹುಲ್ ಲೇವಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+