• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕ ಹಿಂದಿಕ್ಕಿದ ಭಾರತ: ಪ್ರಧಾನಿ ಕಾಲೆಳೆದ ರಾಹುಲ್ ಗಾಂಧಿ

|

ದೆಹಲಿ, ಆಗಸ್ಟ್ 04: ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಪ್ರಕರಣಗಳು ಉಲ್ಬಣವಾಗುತ್ತಿದೆ ಹೊರತು ಸದ್ಯಕ್ಕೆ ಕಡಿಮೆಯಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಜಗತ್ತಿನ ಇತರೆ ದೇಶಗಳಿಗೆ ಹೋಲಿಸಿಕೊಂಡರೆ ಭಾರತದಲ್ಲಿ ಈಗ ಅತಿ ಹೆಚ್ಚು ಹೊಸ ಕೇಸ್ ವರದಿಯಾಗುತ್ತಿದೆ.

   Ram Janmabhoomi ಪೂಜೆಯಲ್ಲಿ ನಾಳೆ ಯಾರೆಲ್ಲಾ ಇರಲಿದ್ದಾರೆ ಗೊತ್ತಾ | Oneindia Kannada

   ಇದೇ ಮೊದಲ ಬಾರಿಗೆ ಅಮೆರಿಕ ಹಾಗೂ ಬ್ರೆಜಿಲ್ ದೇಶಗಳನ್ನು ಹಿಂದಿಕ್ಕಿ ದಿನವೊಂದರಲ್ಲಿ ಭಾರತ ಹೆಚ್ಚು ಕೊವಿಡ್ ಪ್ರಕರಣಗಳನ್ನು ದಾಖಲು ಮಾಡಿದೆ.

   ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ರಾತ್ರಿ ತಮ್ಮ ಟ್ವಿಟ್ಟರ್ ಖಾತೆಯಿಂದ ಕೇಂದ್ರ ಸರ್ಕಾರದ ಕಾಲೆಳೆದಿದ್ದಾರೆ. ನರೇಂದ್ರ ಮೋದಿ ಅವರು ಕಳೆದ ವಾರದಲ್ಲಿ ಹೇಳಿದ್ದ ಮಾತನ್ನು ಸ್ಮರಿಸಿಕೊಂಡಿದ್ದಾರೆ.

   ''ಸೂಕ್ತ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಂಡ ಪರಿಣಾಮ ಇತರೆ ದೇಶಗಳಿಂತ ಭಾರತ ಉತ್ತಮ ಸ್ಥಿತಿಯಲ್ಲಿದೆ'' ಎಂದು ಪ್ರಧಾನಿ ಮೋದಿ ಈ ಹಿಂದೆಯೊಮ್ಮೆ ಹೇಳಿದ್ದರು. ಈಗ ಅಮೆರಿಕ ಮತ್ತು ಬ್ರೆಜಿಲ್ ಹಿಂದಿಕ್ಕಿರುವ ಭಾರತ ಹೊಸ ಪ್ರಕರಣಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ತಲುಪಿದೆ.

   'ಸೂಕ್ತ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಇತರೆ ದೇಶಗಳಿಂತ ಭಾರತ ಉತ್ತಮ ಸ್ಥಿತಿಯಲ್ಲಿದೆ' ಎಂಬ ಹೇಳಿಕೆಯನ್ನು ಸ್ಮರಿಸಿ, ಅತಿ ಹೆಚ್ಚು ಸೋಂಕು ಪತ್ತೆಯಾಗುತ್ತಿದೆ, ಇದು ಉತ್ತಮ ಸ್ಥಿತಿ ಎಂದು ರಾಹುಲ್ ಕಿಡಿಕಾರಿದ್ದಾರೆ.

   ಆಗಸ್ಟ್ 2 ರಂದು ಭಾರತದಲ್ಲಿ 52,972 ಮಂದಿಗೆ ಕೊರೊನಾ ವೈರಸ್ ತಗುಲಿತ್ತು. ಆ ದಿನ ಅಮೆರಿಕದಲ್ಲಿ 49,038 ಮಂದಿಗೆ ಕೊರೊನಾ ದೃಢವಾಗಿತ್ತು. ಆಗಸ್ಟ್ 2ರಂದು ಬ್ರೆಜಿಲ್‌ನಲ್ಲಿ 24,081 ಪ್ರಕರಣ ಮಾತ್ರ ದಾಖಲಾಗಿತ್ತು.

   English summary
   Congress leader Rahul gandhi again attack on central govt over its handling COVID 19 crisis. now, india become most top in the daily basis coronavirus cases.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X