• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಲಸೆ ಕಾರ್ಮಿಕರಿಗೆ ಕೇವಲ ಆಹಾರ ಧಾನ್ಯಗಳನ್ನು ಕೊಟ್ಟರೆ ಸಾಲದು:ರಘುರಾಮ್ ರಾಜನ್

|

ನವದೆಹಲಿ, ಮೇ 22: 'ವಲಸೆ ಕಾರ್ಮಿಕರಿಗೆ ತರಕಾರಿ, ಅಡುಗೆ ಎಣ್ಣೆ, ವಸತಿಗಾಗಿ ಹಣದ ಅಗತ್ಯವಿದೆ. ಕೇವಲ ಆಹಾರ ಧಾನ್ಯಗಳನ್ನು ನೀಡಿದರೆ ಸಾಲದು' ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ.

   ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಂ ರಾಜನ್ ಮೋದಿ ಬಗ್ಗೆ ಹೇಳಿದ್ದೇನು ? | Oneindia Kannada

   ಸರ್ಕಾರವು ಉಚಿತವಾಗಿ ಆಹಾರ ಧಾನ್ಯಗಳನ್ನು ಕಾರ್ಮಿಕರಿಗೆ ನೀಡುತ್ತಿದೆ. ಆದರೆ ಅವರು ಮನೆಯ ಬಾಡಿಗೆ ಕಟ್ಟಬೇಕು, ಹಾಲು ಕೊಳ್ಳಬೇಕು, ತರಕಾರಿ, ಅಡುಗೆ ಎಣ್ಣೆ ಕೊಳ್ಳಬೇಕು ಇದಕ್ಕೆಲ್ಲ ಹಣ ಬೇಡವೇ ಎಂದು ಪ್ರಶ್ನಿಸಿದ್ದಾರೆ.

   ಸಾಲಗಾರರಿಗೆ ಸಿಹಿಸುದ್ದಿ: ಇಎಂಐ ಪಾವತಿಗೆ ಮೂರು ತಿಂಗಳ ವಿನಾಯಿತಿಸಾಲಗಾರರಿಗೆ ಸಿಹಿಸುದ್ದಿ: ಇಎಂಐ ಪಾವತಿಗೆ ಮೂರು ತಿಂಗಳ ವಿನಾಯಿತಿ

   ಇಡೀ ವಿಶ್ವವೇ ಆರ್ಥಿಕ ತುರ್ತು ಪರಿಸ್ಥಿತಿ ಎದುರಿಸುತ್ತಿದೆ. ಭಾರತದಲ್ಲಿ ಹಲವು ವರ್ಷಗಳಿಂದ ಆರ್ಥಿಕ ತೊಂದರೆ ಇದೆ.ಇದರಿಂದಾಗಿ ಆರ್ಥಿಕತೆಯಲ್ಲಿ ಸುಧಾರಣೆ ಕಾಣುತ್ತಿಲ್ಲ. ನಮ್ಮ ಹಣಕಾಸಿನ ಕೊರತೆಯೂ ಹೆಚ್ಚಾಗಿದೆ.

   ಕೊರೊನಾ ಆರ್ಥಿಕ ಬಿಕ್ಕಟ್ಟು ಎದುರಾಗುವ ಮುನ್ನ ಹಣಕಾಸು ವಲಯವು ತೀವ್ರ ಸಂಕಷ್ಟದಲ್ಲಿತ್ತು. ಇದಕ್ಕೆ ಮರು ರಚನೆ, ಮರು ಬಂಡವಾಳೀಕರಣ ಅಗತ್ಯವಿದೆ. ಆರ್ಥಿಕತೆ ಸೋರುವಿಕೆಯನ್ನು ತಡೆಗಟ್ಟಬೇಕು ಎಂದರು.

   ಜನಧನ ಖಾತೆಯಿಂದ ಆಗುವ ಲಾಭವೇನು?

   ಜನಧನ ಖಾತೆಯಿಂದ ಆಗುವ ಲಾಭವೇನು?

   ಸರ್ಕಾರವು ಜನರಿಗೆ 5 ಕೆಜಿಯಷ್ಟು ಆಹಾರ ಧಾನ್ಯವನ್ನು ನೀಡುತ್ತಿದೆ. ಮೂರು ತಿಂಗಳುಗಳ ಕಾಲ ಬಡ ಮಹಿಳೆಯರ ಜನಧನ ಖಾತೆಗೆ ತಲಾ 500 ರೂ. ಜಮಾವಣೆ ಮಾಡಲಾಗುತ್ತಿದೆ. ಮಾರ್ಚ್ 25ರಂದು ಲಾಕ್‌ಡೌನ್ ಘೋಷಣೆಯಾದ ಬಳಿಕ ಆರ್ಥಿಕ ಚಟುವಟಿಕೆಗಳು ಕಡಿಮೆಯಾಗಿ ಆರ್ಥಿಕತೆ ನೆಲಕಚ್ಚಿತು ಎಂದು ರಾಜನ್ ಹೇಳಿದ್ದಾರೆ.

   ಕಾರ್ಮಿಕರಿಗೆ ಹಣ ಬೇಕು

   ಕಾರ್ಮಿಕರಿಗೆ ಹಣ ಬೇಕು

   ಸರ್ಕಾರವು ಉಚಿತವಾಗಿ ಆಹಾರ ಧಾನ್ಯಗಳನ್ನು ವಲಸೆ ಕಾರ್ಮಿಕರಿಗೆ ನಿಡಿದರೂ ಕೂಡ ಅವರಿಗೆ ಹಣವೂ ಮುಖ್ಯವಾಗಿದೆ. ಕಳೆದ ಎರಡು ತಿಂಗಳಿನಿಂದ ಕೆಲಸವಿಲ್ಲ, ಮನೆ ಬಾಡಿಗೆ ನೀಡಬೇಕು, ಮನೆಯಲ್ಲಿ ಮಕ್ಕಳಿರುತ್ತಾರೆ ಹಾಲು ಬೇಕೇಬೇಕು, ತರಕಾರಿಗಳು ಬೇಕು ಇದೆಲ್ಲ ಖರೀದಿಗೆ ಹಣ ಬೇಕೇಬೇಕಾಗಿದೆ.

   ಸರ್ಕಾರವು ಆರ್ಥಿಕ ತಜ್ಞರನ್ನು ಭೇಟಿ ಮಾಡಬೇಕು

   ಸರ್ಕಾರವು ಆರ್ಥಿಕ ತಜ್ಞರನ್ನು ಭೇಟಿ ಮಾಡಬೇಕು

   ಆರ್ಥಿಕತೆಯಲ್ಲಿ ಕುಸಿತ ಕಾಣುತ್ತಿದೆ. ಸರ್ಕಾರವು ಪಕ್ಷಬೇಧ ಮಾಡದೆ, ಆರ್ಥಿಕ ತಜ್ಞರನ್ನು ಭೇಟಿಯಾಗಬೇಕಿದೆ. ಕೇವಲ ಕೊರೊನಾ ವೈರಸ್ ತಂದೊಡ್ಡಿರುವ ಆರ್ಥಿಕ ಸಮಸ್ಯೆಗಳು ಮಾತ್ರವಲ್ಲದೆ ಮುಂದಿನ ನಾಲ್ಕೈದು ವರ್ಷಕ್ಕೆ ಆರ್ಥಿಕತೆಯನ್ನು ಬಲ ಪಡಿಸಲು ಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಬೇಕು. ಒಂದೊಮ್ಮೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಅಪಾಯ ಕಾದಿದೆ ಎಂದು ಎಚ್ಚರಿಸಿದ್ದಾರೆ.

   ಆರ್ಥಿಕತೆ ಕುಸಿದಿದೆ ಎನ್ನುವುದನ್ನು ಒಪ್ಪಿಕೊಳ್ಳಿ

   ಆರ್ಥಿಕತೆ ಕುಸಿದಿದೆ ಎನ್ನುವುದನ್ನು ಒಪ್ಪಿಕೊಳ್ಳಿ

   ಆರ್ಥಿಕತೆ ಕುಸಿಯುತ್ತಿದೆ ಎಂಬುದನ್ನು ಮೊದಲು ಒಪ್ಪಿಕೊಳ್ಳಿ, ಬಳಿಕ ಅದರ ವಿರುದ್ಧ ಹೋರಾಡಿ, ದೇಶದಲ್ಲಿ ಸಾಕಷ್ಟು ಮಂದಿ ಬುದ್ಧಿವಂತ ಆರ್ಥಿಕ ತಜ್ಞರಿದ್ದಾರೆ ಖಂಡಿತವಾಗಿಯೂ ಒಂದು ಉಪಾಯವನ್ನು ಸೂಚಿಸುತ್ತಾರೆ.

   ಆರ್ಥಿಕತೆಯನ್ನು ಚೇತರಿಸಿಕೊಳ್ಳುವಂತೆ ಮಾಡಬೇಕು

   ಆರ್ಥಿಕತೆಯನ್ನು ಚೇತರಿಸಿಕೊಳ್ಳುವಂತೆ ಮಾಡಬೇಕು

   ಆರ್ಥಿಕತೆ ಚೇತರಿಕೆ ಕಾರ್ಯವು ನಿರ್ಮಾಣ ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವುದು ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಬಲವಾಗಿ ಮುಂದಾಗುವುದಾಗಿದೆ. ಆರ್ಥಿಕತೆ ಮತ್ತು ಜನರ ಹಣಕಾಸಿನ ಸಮಸ್ಯೆಯನ್ನು ಬಗೆಹರಿಸಲು ತೆಗೆದುಕೊಳ್ಳುವ ಕ್ರಮದಿಂದ ರೇಟಿಂಗ್ ಏಜೆನ್ಸಿಗಳು ಏನು ಮಾಡುತ್ತವೆ ಎಂಬುದರ ಕುರಿತು ಸರ್ಕಾರ ಚಿಂತಿಸಬಾರದು. ಹಸಿವು ಎನ್ನುವುದು ಸಧ್ಯಕ್ಕೆ ದೂರ ಮಾಡಬೇಕಾದ ಬಹುದೊಡ್ಡ ಸಮಸ್ಯೆಯಾಗಿದೆ.

   English summary
   Former RBI Governor Raghuram Rajan has said that package gives free foodgrains but migrant workers, rendered jobless by lockdown, need money to buy milk, vegetables and cooking oil and pay rent. The world is facing the greatest economic emergency and almost any resource is inadequate.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X