• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಫೇಲ್ ಡೀಲ್: ರಿಲಯನ್ಸ್ ಜತೆ ನಡೆದಿರುವುದು ಸಣ್ಣ ಒಪ್ಪಂದವಷ್ಟೇ

|

ನವದೆಹಲಿ, ಅಕ್ಟೋಬರ್ 12: ರಫೇಲ್ ಒಪ್ಪಂದದ ವಿವಾದ ಭುಗಿಲೇಳುತ್ತಿರುವಾಗಲೇ ಯುದ್ಧ ವಿಮಾನ ತಯಾರಿಯ ಅವಕಾಶ ಪಡೆದಿರುವ ಫ್ರಾನ್ಸ್‌ನ ಡಸಾಲ್ಟ್ ಸಂಸ್ಥೆ ಒಪ್ಪಂದದ ಪರವಾದ ಹೇಳಿಕೆ ನೀಡಿದೆ.

ಭಾರತದ ತನ್ನ ಪಾಲುದಾರ ಕಂಪೆನಿ ರಿಲಯನ್ಸ್‌ ಡಿಫೆನ್ಸ್ ಜತೆ ಮಾಡಿಕೊಂಡಿರುವುದು ಸಣ್ಣ ಒಪ್ಪಂದವಷ್ಟೇ. ಹೆಚ್ಚೂ ಕಡಿಮೆ ಶೇ 10ರಷ್ಟು ಪಾಲು ಮಾತ್ರ ರಿಲಯನ್ಸ್‌ನೊಂದಿಗೆ ಪಾಲುದಾರಿಕೆ ಇರುತ್ತದೆ. ಅದರ ಮೊತ್ತ ಹೆಚ್ಚೆಂದರೆ ನಾಲ್ಕು ಬಿಲಿಯನ್ ಯುರೋಗಳು ಎಂದು ಡಸಾಲ್ಟ್ ಏವಿಯೇಷನ್‌ನ ಸಿಇಒ ಎರಿಕ್ ಟ್ರಾಪ್ಪೀರ್ ಹೇಳಿದ್ದಾರೆ.

ನಾವು ಭಾರತದ ಸುಮಾರು 100 ಸಂಸ್ಥೆಗಳ ಜತೆಗೆ ಮಾತುಕತೆ ನಡೆಸುತ್ತಿದ್ದೇವೆ. ಅವುಗಳಲ್ಲಿ ಸುಮಾರು 30 ಕಂಪೆನಿಗಳ ಜತೆಗೆ ಪಾಲುದಾರಿಕೆಯನ್ನು ಖಚಿತಗೊಳಿಸಿದ್ದೇವೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ರಫೇಲ್: ರಿಲಯನ್ಸ್ ಜತೆ ಒಪ್ಪಂದ ಮಾಡಿಕೊಳ್ಳದೆ ಬೇರೆ ಆಯ್ಕೆಯೇ ಇರಲಿಲ್ಲ!

ರಿಲಯನ್ಸ್ ಡಿಫೆನ್ಸ್ ಸಂಸ್ಥೆಯನ್ನು ಪಾಲುದಾರ ಸಂಸ್ಥೆಯನ್ನಾಗಿ ಆಯ್ಕೆ ಮಾಡಿಕೊಂಡಿರುವುದು ತನ್ನದೇ ನಿರ್ಧಾರ. ತಮ್ಮ ಮೇಲೆ ಯಾವುದೇ ಒತ್ತಡ ಇರಲಿಲ್ಲ ಎಂದು ಡಸಾಲ್ಟ್ ಕಂಪೆನಿ ಸ್ಪಷ್ಟೀಕರಣ ನೀಡಿದೆ.

ಡಸಾಲ್ಟ್ ಏವಿಯೇಷನ್‌ಗೆ ರಿಲಯನ್ಸ್ ಹೊರುತಾಗಿ ಬೇರೆ ಕಂಪೆನಿಯನ್ನು ಆಯ್ಕೆ ಮಾಡಲು ಅವಕಾಶವನ್ನೇ ನೀಡಿರಲಿಲ್ಲ ಎಂದು ಫ್ರೆಂಚ್ ಮಾಧ್ಯಮವೊಂದರ ವರದಿ ಹೇಳಿತ್ತು. ಅದನ್ನು ಕಂಪೆನಿ ಅಲ್ಲಗಳೆದಿದೆ.

ಆಫ್‌ಸೆಟ್ಸ್ ಎಂದರೆ ಏನು?

ಆಫ್‌ಸೆಟ್ಸ್ ಎಂದರೆ ಏನು?

ರಫೇಲ್ ಒಪ್ಪಂದದಲ್ಲಿನ 'ಆಫ್‌ಸೆಟ್ಸ್' (ಬಿಡಿ ಭಾಗಗಳ ತಯಾರಿಕೆ) ಪರಿಕಲ್ಪನೆಗೆ ವಿವರಣೆ ನೀಡಿರುವ ಎರಿಕ್, ಇಂಗ್ಲಿಷ್‌ನ 'ಆಫ್‌ಸೆಟ್' ಪದವನ್ನು ಫ್ರೆಂಚ್ ಭಾಷೆಯಲ್ಲಿ 'ಪರಿಹಾರ' ಅಥವಾ 'ಸಮಾನ ಸ್ಥಾನಮಾನದ ವ್ಯಕ್ತಿ/ಸಂಸ್ಥೆ' ಎಂದು ಪರಿಗಣಿಸಲಾಗುತ್ತದೆ. ನಾವು ಸಹಿಹಾಕಿರುವ ಒಪ್ಪಂದವನ್ನು 'ಆಫ್‌ಸೆಟ್ ಕಾಂಟ್ರ್ಯಾಕ್ಟ್' ಎಂದು ಕರೆಯಲಾಗಿದೆ. ಉದ್ಯೋಗಿಗಳು ಮತ್ತು ವ್ಯಾಪಾರಿ ಒಕ್ಕೂಟಗಳ ಜತೆಗೆ ವ್ಯವಹಾರ ನಡೆಸುವಾಗ ಡಸಾಲ್ಟ್ ಏವಿಯೇಷನ್ 'ಆಫ್‌ಸೆಟ್ ಭಾದ್ಯತಾ ಒಪ್ಪಂದ' ಅಥವಾ 'ಪರಿಹಾರ ಭಾದ್ಯತಾ ಒಪ್ಪಂದ' ಎಂದೇ ಬಳಕೆ ಮಾಡುತ್ತದೆ ಎಂದಿದ್ದಾರೆ.

ರಫೇಲ್ ಡೀಲ್: ವರಸೆ ಬದಲಾಯಿಸಿ, ಭಾರತದ ಬೆಂಬಲಕ್ಕೆ ನಿಂತ ಡಸಾಲ್ಟ್!

ಎಲ್ಲವೂ ಕಾನೂನುಬದ್ಧ

ಎಲ್ಲವೂ ಕಾನೂನುಬದ್ಧ

ಆಫ್‌ಸೆಟ್ಸ್ ಒಪ್ಪಂದಕ್ಕೆ ಸಹಿ ಹಾಕುವುದು ಭಾರತದ ರಕ್ಷಣಾ ಖರೀದಿ ಪ್ರಕ್ರಿಯೆಯ ಕಾನೂನು ಹೇರಿರುವ ನಿಯಮವಾಗಿದೆ. ಅದೇ ಕಾನೂನಿನ ಪ್ರಕಾರ ಪಾಲುದಾರರ ಆಯ್ಕೆಯ ವಿಚಾರವು ನಮಗೆ ಸೇರಿರುತ್ತದೆ.

ಈ ನಿಯಮಗಳ ಅಡಿಯಲ್ಲಿ ರಿಲಯನ್ಸ್ ಡಿಫೆನ್ಸ್ ಸಹಭಾಗಿತ್ವದಲ್ಲಿ ನಾಗಪುರದಲ್ಲಿ ಘಟಕ ಸ್ಥಾಪಿಸಲು ಡಸಾಲ್ಟ್ ಏವಿಯೇಷನ್ ನಿರ್ಧರಿಸಿದೆ. ಈ ಪಾಲುದಾರಿಕೆಯು ಒಟ್ಟಾರೆ ಒಪ್ಪಂದದ ಸುಮಾರು ಶೇ 10ರಷ್ಟು ಪಾಲನ್ನು ಹೊಂದಿದೆ. ನಾವು ಭಾರತದ ಇನ್ನೂ ನೂರು ಕಂಪೆನಿಗಳ ಜತೆಗೆ ಮಾತುಕತೆ ನಡೆಸುತ್ತಿದ್ದೇವೆ. ಅವುಗಳಲ್ಲಿ 30 ಕಂಪೆನಿಗಳ ಜತೆಗಿನ ಪಾಲುದಾರಿಕೆ ಈಗಾಗಲೇ ಅಂತಿಮಗೊಂಡಿದೆ ಎಂದು ವಿವರಣೆ ನೀಡಿದ್ದಾರೆ.

ಅಧಿಕಾರಿಯ ಆಕ್ಷೇಪದ ನಡುವೆಯೇ 36 ರಫೇಲ್ ಖರೀದಿ ಒಪ್ಪಂದಕ್ಕೆ ಸಹಿ

ಎಚ್‌ಎಎಲ್ ಏಕಿಲ್ಲ? ರಿಲಯನ್ಸ್ ಏಕೆ?

ಎಚ್‌ಎಎಲ್ ಏಕಿಲ್ಲ? ರಿಲಯನ್ಸ್ ಏಕೆ?

ಡಿಆರ್‌ಎಎಲ್ (ಡಸಾಲ್ಟ್ ರಿಲಯನ್ಸ್ ಏರೋಸ್ಪೇಸ್ ಲಿಮಿಟೆಡ್) ಮೂಲಕ ಭಾರತದಲ್ಲಿ ದೀರ್ಘಕಾಲ ಅಸ್ತಿತ್ವದಲ್ಲಿ ಇರುವಂತಹ ಘಟಕ ಸ್ಥಾಪನೆಗೆ ಡಸಾಲ್ಟ್ ಏವಿಯೇಷನ್ ನಿರ್ಧರಿಸಿದೆ. ಈ ಜಂಟಿ ಪಾಲುದಾರಿಕೆಯು ರಫೇಲ್ ಮತ್ತು ಫಾಲ್ಕನ್ 2000 ವಿಮಾನಗಳ ಭಾಗಗಳನ್ನು ತಯಾರಿಸಲಿವೆ. ನಾಗಪುರದಲ್ಲಿ ಭೂಮಿಯ ಲಭ್ಯತೆ ಇರುವುದರಿಂದ ಮತ್ತು ಅದಕ್ಕೆ ವಿಮಾನ ನಿಲ್ದಾಣದ ರನ್‌ವೇನಿಂದ ನೇರ ಸಂಪರ್ಕ ಇರುವುದರಿಂದ ಅದನ್ನು ಆಯ್ದುಕೊಳ್ಳಲಾಯಿತು.

ರಫೇಲ್ ಡೀಲ್: ಮೋದಿ ಬೆಂಬಲಕ್ಕೆ ನಿಂತ ಫ್ರೆಂಚ್ ಅಧ್ಯಕ್ಷ

ಘಟನೆ ವಿಷಾದನೀಯ

ಘಟನೆ ವಿಷಾದನೀಯ

ಈ ವಿವಾದಗಳು ವಿಷಾದನೀಯ. ಆದರೆ ನಾವು ತಾಳ್ಮೆಯಿಂದಿದ್ದೇವೆ. ವಿಚಾರಗಳು ವೇಗವಾಗಿ ಸಾಗುತ್ತಿವೆ. 2017ರ ಫೆಬ್ರುವರಿ 10ರಂದು ಡಿಆರ್‌ಎಎಲ್ ಅನ್ನು ಸೃಷ್ಟಿಸಿದೆವು. 2017ರ ಅಕ್ಟೋಬರ್ 27ರಂದು ಘಟಕ ಯೋಜನೆಗೆ ಅಧಿಕೃತ ಚಾಲನೆ ದೊರಕಿತು ಎಂದು ತಿಳಿಸಿದ್ದಾರೆ.

English summary
Dassault Aviation has clarified that the joint venture with Reliance Defence on Rafale deal is just around 10% and they are in talks with about 100 Indian firms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X