ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ 'ದುರ್ಘಟನೆ': ದಿಗ್ವಿಜಯ್ ಸಿಂಗ್ ಟ್ವೀಟ್ ಗೆ ಮಂಗಳಾರತಿ

|
Google Oneindia Kannada News

ನವದೆಹಲಿ, ಮಾರ್ಚ್ 05: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರಿದ್ದ ವಾಹನದ ಮೇಲೆ ನಡೆದ ಉಗ್ರದಾಳಿ 'ಆಕಸ್ಮಿಕ' ಎಂಬಂತೆ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಮತ್ತೊಮ್ಮೆ ವಿವಾದವನ್ನು ಆಮಂತ್ರಿಸಿದ್ದಾರೆ.

'ಸರ್ಜಿಕಲ್ ಸ್ಟ್ರೈಕ್ ಸಾಕ್ಷಿ ಕೇಳಿದರೆ ವಿಮಾನದಲ್ಲಿ ಒಯ್ದು ಪಾಕಿಸ್ತಾನದಲ್ಲಿ ಎಸೆಯಬೇಕು''ಸರ್ಜಿಕಲ್ ಸ್ಟ್ರೈಕ್ ಸಾಕ್ಷಿ ಕೇಳಿದರೆ ವಿಮಾನದಲ್ಲಿ ಒಯ್ದು ಪಾಕಿಸ್ತಾನದಲ್ಲಿ ಎಸೆಯಬೇಕು'

"ಪುಲ್ವಾಮಾ 'ದುರ್ಘಟನೆ'ಯ ನಂತರ ನಡೆದ ನಮ್ಮ ವಾಯುಸೇನೆ ನಡೆಸಿದ ಏರ್ ಸ್ಟ್ರೈಕ್ ಬಗ್ಗೆ ವಿದೇಶಿ ಮಾಧ್ಯಮಗಳೂ ಅನುಮಾನ ವ್ಯಕ್ತಪಡಿಸಿವೆ. ಅಷ್ಟೇ ಅಲ್ಲ, ಭಾರತ ಸರ್ಕಾರದ ವಿಶ್ವಾಸಾರ್ಹತೆಯ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ" ಎಂದು ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದರು.

ರಮ್ಯಾ, ಮೋದಿಯನ್ನು ನಂಬುವುದಿಲ್ಲವಂತೆ: ರಮ್ಯಾ, ಮೋದಿಯನ್ನು ನಂಬುವುದಿಲ್ಲವಂತೆ: "ಕತ್ತೆ ಬಾಲ ಕುದುರೆ ಜುಟ್ಟು" ಅಂದ್ರು ಟ್ವಿಟ್ಟಿಗರು

ಪುಲ್ವಾಮಾ ಉಗ್ರದಾಳಿಯನ್ನು, 'ಉಗ್ರದಾಳಿ' ಎಂದು ಕರೆಯಲು ಮುಜುಗರ ಆಗುವುದೇನೋ ಎಂಬಂತೆ, 'ದುರ್ಘಟನೆ' ಎಂಬ ಪದಪ್ರಯೋಗ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.

Pulwama terror attack as an accident: Digvijay Singh

ಫೆಬ್ರವರಿ 14 ರಂದು ನಲವತ್ತಕ್ಕೂ ಹೆಚ್ಚು ಭಾರತೀಯ ಯೋಧರನ್ನು ಬಲಿತೆಗೆದುಕೊಂಡ ಉಗ್ರದಾಳಿಯ ನಂತರ, ಭಾರತೀಯ ವಾಯುಸೇನೆ ಪಾಕಿಸ್ತಾನದ ಬಾಲಕೋಟ್ ನಲ್ಲಿರುವ ಉಗ್ರನೆಲೆಯ ಮೇಲೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಸಾಕಷ್ಟು ಭಯೋತ್ಪಾದಕರು ಸತ್ತಿದ್ದಾರೆ ಎನ್ನಲಾಗುತ್ತಿದ್ದರೂ, ದಿಗ್ವಿಜಯ ಸಿಂಗ್ ಅವರು ಏರ್ ಸ್ಟ್ರೈಕ್ ಗೆ ಸಾಕ್ಷಿ ನೀಡಿ ಎಂದೂ ಹೇಳುವ ಮೂಲಕ ದೇಶಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದರು.

English summary
Congress leader, Digvija singh refers Pulwama terror attack as an accident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X