ಮೋದಿ ಸಂಪುಟ: ಹೊಸ ರೂಪದಲ್ಲಿ ಸಚಿವರ ಪಟ್ಟಿ
ನವದೆಹಲಿ, ಮೇ 27: ದೇಶದ ನೂತನ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗತಾನೆ ತಮ್ಮ ನೂತಹನ ಮಂತ್ರಿಮಂಡಲದ ಸದಸ್ಯರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಇದು ಅಧಿಕೃತ. ಏಕೆಂದರೆ ಈ ಹಿಂದೆ ಮಾಧ್ಯಮಗಳು ತನ್ನ ಊಹಾ ಸಾಮರ್ಥ್ಯದ ಮೇಲೆ ಎಲ್ಲಾ ಸಚಿವರಿಗೂ ಖಾತೆಗಳನ್ನು ಹಂಚಿದ್ದವು.
ಪ್ರಧಾನಿ ನರೇಂದ್ರ ಮೋದಿ: ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಅಣುಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆ, ಎಲ್ಲಾ ಪ್ರಮುಖ ವಿಷಯಗಳು ಮತ್ತು ಇತರೆ ಸಚಿವರಿಗೆ ಹಂಚಿಕೆಯಾಗದ ಖಾತೆಗಳು

| CABINET MINISTERS | ||
| 1 | ರಾಜನಾಥ್ ಸಿಂಗ್ | ಗೃಹ ಖಾತೆ |
| 2 | ಸುಷ್ವಾ ಸ್ವರಾಜ್ | ವಿದೇಶಾಂಗ ವ್ಯವಹಾರ ಖಾತೆ ಮತ್ತು ಸಾಗರೋತ್ತರ ಭಾರತೀಯರ ವ್ಯವಹಾರಗಳು |
| 3 | ಅರುಣ್ ಜೇಟ್ಲಿ | ರಕ್ಷಣಾ ಖಾತೆ, ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳು |
| 4 | ವೆಂಕಯ್ಯ ನಾಯ್ಡು | ನಗರಾಭಿವೃದ್ಧಿ, ವಸತಿ ಗ್ರಾಮೀಣ ಬಡತನ ನಿರ್ಮೂಲನೆ ಮತ್ತು ಸಂಸದೀಯ ವ್ಯವಹಾರ ಖಾತೆ |
| 5 | ನಿತಿನ್ ಗಡ್ಕರಿ | ರಸ್ತೆ ಸಾರಿಗೆ, ಹೆದ್ದಾರಿ ಮತ್ತು ಹಡಗು ಖಾತೆ |
| 6 | ಡಿವಿ ಸದಾನಂದ ಗೌಡ | ರೈಲ್ವೆ ಖಾತೆ |
| 7 | ಉಮಾ ಭಾರತಿ | ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾನದಿ ಪುನರುತ್ಥಾನ |
| 8 | ಡಾ. ನಜ್ಮಾ ಹೆಫ್ತುಲ್ಲಾ | ಅಲ್ಪಸಂಖ್ಯಾತ ವ್ಯವಹಾರಗಳು |
| 9 | ಗೋಪಿನಾಥ್ ಮುಂಡೆ | ಗ್ರಾಮೀಣಾಭಿವೃದ್ಧಿ ಖಾತೆ, ಪಂಚಾಯತ್ ರಾಜ್, ಕುಡಿಯುವ ನೀರು ಮತ್ತು ನಿರ್ಮಲೀಕರಣ |
| 10 | ರಾಮ್ ವಿಲಾಸ್ ಪಾಸ್ವಾನ್ | ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು |
| 11 | ಕಲ್‌ರಾಜ್ ಮಿಶ್ರಾ | ಕಿರಿಯ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು |
| 12 | ಮನೇಕಾ ಗಾಂಧಿ | ಮಹಿಳಾ ಮತ್ತು ಮಕ್ಕಳ ಖಾತೆ |
| 13 | ಅನಂತಕುಮಾರ್ | ರಾಸಾಯನಿಕ ಮತ್ತು ರಸಗೊಬ್ಬರ ಖಾತೆ |
| 14 | ರವಿಶಂಕರ್ ಪ್ರಸಾದ್ | ದೂರಸಂಪರ್ಕ, ಮಾಹಿತಿ ತಂತ್ರಜ್ಞಾನ, ಕಾನೂನು ವ್ಯವಸ್ಥೆ ಮತ್ತು ನ್ಯಾಯಾಂಗ |
| 15 | ಅಶೋಕ್ ಗಜಪತಿ ರಾಜು | ನಾಗರಿಕ ವಿಮಾನಯಾನ ಖಾತೆ |
| 16 | ಅನಂತ್ ಗೀತೆ | ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಸಂಸ್ಥೆಗಳ ಖಾತೆ |
| 17 | ಹರ್ಸಿಮ್ರತ್ ಕೌರ್ ಬಾದಲ್ | ಆಹಾರ ಸಂಸ್ಕರಣೆ ಖಾತೆ |
| 18 | ನರೇಂದ್ರ ಸಿಂಗ್ ತೊಮರ್ | ಗಣಿ, ಉಕ್ಕು, ಕಾರ್ಮಿಕ ಮತ್ತು ಉದ್ಯೋಗ ಖಾತೆ |
| 19 | ಜುವಾಲ್ ಒರಂ | ಬುಡಕಟ್ಟು ವ್ಯವಹಾರ ಖಾತೆ |
| 20 | ರಾಧಾ ಮೋಹನ್ ಸಿಂಗ್ | ಕೃಷಿ ಖಾತೆ |
| 21 | ಥಾವರ್ ಸಿಂಗ್ ಗೆಹ್ಲೋಟ್ | ಸಾಮಾಜಿಕ ನ್ಯಾಯ |
| 22 | ಸ್ಮೃತಿ ಇರಾನಿ | ಮಾನವ ಸಂಪನ್ಮೂಲ ಖಾತೆ |
| 23 | ಡಾ. ಹರ್ಷವರ್ಧನ್ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ |
| MINISTERS OF STATE | ಖಾತೆ | |
| 1 | ಜನರಲ್ ವಿಕೆ ಸಿಂಗ್ | ಈಶಾನ್ಯ ಪ್ರದೇಶ ಅಭಿವೃದ್ಧಿ (ಸ್ವತಂತ್ರ ಖಾತೆ), ವಿದೇಶಾಂಗ ವ್ಯವಹಾರ ಮತ್ತು ಸಾಗರೋತ್ತರ ಭಾರತೀಯರ ವ್ಯವಹಾರಗಳು |
| 2 | ಇಂದರಜೀತ್ ಸಿಂಗ್ ರಾವ್ | ಯೋಜನಾ ಆಯೋಗ (ಸ್ವತಂತ್ರ ಖಾತೆ), ಅಂಕಿ-ಸಂಖ್ಯೆ, ಯೋಜನೆ ಅನುಷ್ಠಾಣ (ಸ್ವತಂತ್ರ ಖಾತೆ), ರಕ್ಷಣೆ |
| 3 | ಸಂತೋಷ್ ಕುಮಾರ್ ಗಂಗಾವರ್ | ಜವಳಿ (ಸ್ವತಂತ್ರ ಖಾತೆ), ಸಂಪುಟ ವ್ಯವಹಾರ, ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ನದಿ ಪುನರುತ್ಥಾನ |
| 4 | ಶ್ರೀಪಾದ್ ಯಸ್ಸೋ ನಾಯಕ್ | ಸಂಸ್ಕೃತಿ (ಸ್ವತಂತ್ರ ಖಾತೆ) ಮತ್ತು ಪ್ರವಾಸೋದ್ಯಮ (ಸ್ವತಂತ್ರ ಖಾತೆ) |
| 5 | ಧರ್ಮೇಂದ್ರ ಪ್ರಧಾನ್ | ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ (ಸ್ವತಂತ್ರ ಖಾತೆ) |
| 6 | ಸರಬಾನಂದ್ ಸೋನೋವಾಲ್ | ಕುಶಲ ಅಭಿವೃದ್ಧಿ, ಉದ್ಯಮಾಭಿವೃದ್ಧಿ. ಯುವಜನತೆ ಮತ್ತು ಕ್ರೀಡಾ ಖಾತೆ (ಸ್ವತಂತ್ರ ಖಾತೆ) |
| 7 | ಪ್ರಕಾಶ್ ಜಾವೇಡ್ಕರ್ | ವಾರ್ತಾ ಮತ್ತು ಪ್ರಸಾರ ಖಾತೆ (ಸ್ವತಂತ್ರ ಖಾತೆ), ಪರಿಸರ, ಅರಣ್ಯ, ಹವಾಮಾನ ಬದಲಾವಣೆ (ಸ್ವತಂತ್ರ ಖಾತೆ) |
| 8 | ಪಿಯೂಶ್ ಗೋಯಲ್ | ಕಲ್ಲಿದ್ದಲು ಮತ್ತು ಇಂಧನ ಖಾತೆ, ನವೀಕೃತ ಇಂಧನ ಮೂಲಗಳು (ಸ್ವತಂತ್ರ ಖಾತೆ) |
| 9 | ಡಾ. ಜಿತೇಂದ್ರ ಸಿಂಗ್ | ವಿಜ್ಞಾನ ಮತ್ತು ತಂತ್ರಜ್ಞಾನ (ಸ್ವತಂತ್ರ), ಭೂ ವಿಜ್ಞಾನಗಳು, ಪ್ರಧಾನಿ ಕಚೇರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಅಣುಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆ |
| 10 | ನಿರ್ಮಲಾ ಸೀತಾರಾಮನ್ | ವಾಣಿಜ್ಯ ಮತ್ತು ಕೈಗಾರಿಕೆ (ಸ್ವತಂತ್ರ), ಹಣಕಾಸು, ಕಾರ್ಪೊರೇಟ್ ವ್ಯವಹಾರಗಳು |
| 11 | ಜಿಎಂ ಸಿದ್ದೇಶ್ವರ್ | ನಾಗರಿಕ ವಿಮಾನಯಾನ ಖಾತೆ |
| 12 | ಮನೋಜ್ ಸಿನ್ಹಾ | ರೈಲ್ವೆ |
| 13 | ನಿಹಾಲ್ ಚಂದ್ | ರಾಸಾಯನಿಕ ಮತ್ತು ರಸಗೊಬ್ಬರ ಖಾತೆ |
| 14 | ಉಪೇಂದ್ರ ಕುಶ್ವಾಹ | ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕುಡಿಯುವ ನೀರು ಮತ್ತು ನಿರ್ಮಲೀಕರಣ |
| 15 | ಪಿ ರಾಧಾಕೃಷ್ಣನ್ | ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಸಂಸ್ಥೆಗಳ ಖಾತೆ |
| 16 | ಕಿರಣ್ ರಿಜಿಜು | ಗೃಹ ಖಾತೆ |
| 17 | ಕೃಷ್ಣನ್ ಪಾಲ್ | ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಹಡಗು ಖಾತೆ |
| 18 | ಡಾ.ಸಂಜೀವ್ ಕುಮಾರ್ ಬಾಲಿಯಾ | ಕೃಷಿ, ಆಹಾರ ಸಂಸ್ಕರಣೆ ಕೈಗಾರಿಕೆ |
| 19 | ರಾವ್ ಸಾಹೇಬ್ ದನ್ವೆ | ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು |
| 20 | ಮನಸುಖ್ ಭಾಯ್ ಧಾಂಜಿಭಾಯ್ ವಾಸವಾ | ಬುಡಕಟ್ಟು ಇಲಾಖೆ |
| 21 | ವಿಷ್ಣು ದೇವ್ ಸಾಯಿ | ಗಣಿ, ಉಕ್ಕು, ಕಾರ್ಮಿಕ ಮತ್ತು ಉದ್ಯೋಗ |
| 22 | ಸುದರ್ಶನ್ ಭಗತ್ | ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ |












Click it and Unblock the Notifications