ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ನಿ ವಿಯೋಗ

ನವದೆಹಲಿ, ಆಗಸ್ಟ್ 18: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪತ್ನಿ ಶುಭ್ರಾ ಮುಖರ್ಜಿ ಅವರು ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ.

ಶುಭ್ರಾ ಮುಖರ್ಜಿ (Suvra Mukherjee) ಅವರು ಕೆಲಕಾಲದಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಆಗಸ್ಟ್ 7ರಂದು ಶುಭ್ರಾ ಅವರನ್ನು ದೆಹೆಲಿಯ ಮಿಲಿಟರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ತೀವ್ರ ನಿಗಾ ಘಟಕದಲ್ಲಿದ್ದ ಶುಭ್ರಾ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ 10.51 ಕ್ಕೆ ನಿಧನರಾಗಿದ್ದಾರೆ.

President Pranab Mukherjee's Wife Suvra Mukherjee Passes Away

ಶುಭ್ರಾ ಮುಖರ್ಜಿ ಅವರು ಬಾಂಗ್ಲಾದೇಶ ಮೂಲದ ನರ್ಹಾಲ್ ಜಿಲ್ಲೆಯವರಾಗಿದು, ಶೇಖ್ ಹಸೀನಾ ಅವರ ಊರಿನವರಾಗಿದ್ದಾರೆ.

ರಾಷ್ಟ್ರಪತಿ ಭವನದ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಶುಭ್ರಾ ಮುಖರ್ಜಿ ಅವರನಿಧನ ವಾರ್ತೆಯನ್ನು ಪ್ರಕಟಿಸಲಾಗಿದೆ.

ಪ್ರಥಮ ಪ್ರಜೆಯ ದಾಂಪತ್ಯ: ಪ್ರತಿ ನಿತ್ಯ ಪ್ರಣಬ್ ಮುಖರ್ಜಿ ಅವರು ಸ್ನಾನವಾದ ಮೇಲೆ ಪತ್ನಿಯ ಬಳಿ ತೆರಳಿ ಆಕೆಯ ಹಣೆಯನ್ನು ಮುಟ್ಟಿ ಕೆಲ ಮಂತ್ರಪಠಿಸುತ್ತಾರೆ. ಕಳೆದ 55ಕ್ಕೂ ಅಧಿಕ ವರ್ಷಗಳಿಂದ ಪ್ರತಿನಿತ್ಯ ಈ ಕ್ರಮವನ್ನು ಅನುಸರಿಸಿ ಪತ್ನಿಯ ಆಯುರ್ ಆರೋಗ್ಯಕ್ಕಾಗಿ ಪ್ರಣಬ್ ಅವರು ಪ್ರಾರ್ಥಿಸುತ್ತಿದ್ದರು.

ಪತಿಗಾಗಿ ಶುಭ್ರಾ ಅವರು ಆಲೂ ಪಾಸ್ತೋ ಹಾಗೂ ಜಿಂಗೆ ಪಾಸ್ತೋ ತಯಾರಿಸುತ್ತಿದ್ದರು. ಆದರೆ, ಅನಾರೋಗ್ಯದ ಕಾರಣ ಪ್ರಣಬ್ ಅವರಿಗೆ ಕಾಲಕಾಲಕ್ಕೆ ಆಹಾರ ಉಪಚಾರ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಶುಭ್ರಾ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ರಾಜಕೀಯದಿಂದ ಲಕ್ಷ ಅಡಿ ದೂರ ಇರಲು ಬಯಸುತ್ತಿದ್ದ ಶುಭ್ರಾ ಅವರು ರಾಷ್ಟ್ರಪತಿ ಭವನಕ್ಕೆ ಮೊದಲ ಬಾರಿಗೆ ತೆರಳುವ ಸಂದರ್ಭದಲ್ಲಿ ಜೋಪಾನ ಮಾಡಿದ್ದು ಅವರ ತಾಂಪುರ-ಹಾರ್ಮೋನಿಯಂ ಪೆಟ್ಟಿಗೆಯನ್ನು ಮಾತ್ರ ಎಂದು ಕಂಡವರು ಹೇಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+