ರಾಷ್ಟ್ರಪತಿ ಚುನಾವಣೆ: ಮುಗಿಯದ ವಿಪಕ್ಷಗಳ ಗೊಂದಲ
ನವದೆಹಲಿ, ಜೂನ್ 21: ಎನ್ ಡಿಎ ರಾಮ್ ನಾಥ್ ಕೋವಿಂದ್ ಅವರನ್ನು ತನ್ನ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸುತ್ತಿದ್ದಂತೆಯೆ ಇಡಿ ದೇಶಕ್ಕೂ ಅಚ್ಚರಿಯಾಗಿತ್ತು. ಯಾರೂ ನಿರೀಕ್ಷಿಸದ, ಹೆಚ್ಚೇನು ಪರಿಚಿತವೂ ಅಲ್ಲದ ಹೆಸರನ್ನು ಬಿಜೆಪಿ ಸೂಚಿಸಿಸದ್ದೇ ಈ ಅಚ್ಚರಿಗೆ ಕಾರಣ. ಹೀಗಿರುವಾಗ ವಿಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಘೋಷಿಸಲು ಈಗಲೂ ಹಿಂದೆ ಮುಂದೆ ನೋಡುತ್ತಿವೆ. ಅದಕ್ಕೆ ಕಾರಣ ವಿಪಕ್ಷಗಳಲ್ಲೇ ಒಗ್ಗಟ್ಟಿಲ್ಲದಿರುವುದು.
ಕೋವಿಂದ್ ಅವರನ್ನು ನಾವು ಬೆಂಬಲಿಸುವುದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಹೇಳಿರುವುದರಿಂದ ವಿಪಕ್ಷಗಳು ಮತ್ತಷ್ಟು ಕಸಿವಿಸಿ ಅನುಭವಿಸುತ್ತಿವೆ.

ಈ ನಡುವೆ, ಬಿಹಾರ ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೋವಿಂದ್ ಅವರು, ದೇಶದಾದ್ಯಂತ ಪ್ರವಾಸ ಕೈಗೊಳ್ಳಲಿದ್ದು, ವಿವಿಧ ಪಕ್ಷದ ನಾಯಕರನ್ನು ಭೇಟಿಯಾಗಿ ತಮ್ಮನ್ನು ಬೆಂಬಲಿಸಲು ಮನವಿ ಮಾಡಿಕೊಳ್ಳಲಿದ್ದಾರೆ.












Click it and Unblock the Notifications