ಸಮೀಕ್ಷೆ: ದೆಹಲಿಯಲ್ಲಿ ಗದ್ದುಗೆ ಯಾರಿಗೂ ಸುಲಭದ ಮಾತಲ್ಲ

ನವದೆಹಲಿ, ಅ 31: ಚುನಾವಣಾಪೂರ್ವ ಸಮೀಕ್ಷೆಯ ಪ್ರಕಾರ ದೇಶದ ರಾಜಧಾನಿ ದೆಹಲಿಯಲ್ಲಿ ಹದಿನೈದು ವರ್ಷಗಳಿಂದ ಅಧಿಕಾರದ ರುಚಿ ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟ.. ಕಷ್ಟ.

ಹಾಗಂತ ಮತ್ತೊಂದು ರಾಷ್ಟೀಯ ಪಕ್ಷ ಬಿಜೆಪಿ ಗದ್ದೆಗೇರುತ್ತದೆ ಎನ್ನುವ ಹಾಗಿಲ್ಲ. ಅಲ್ಲಿ ಏನಿದ್ದರೂ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವೇ ನಿರ್ಣಾಯಕ. ಹೌದು, ಸಮೀಕ್ಷೆಯ ಪ್ರಕಾರ ಅಲ್ಲಿ ಅತಂತ್ರ ವಿಧಾನಸಭೆ. ಕೇಜ್ರಿವಾಲ್ ಇಸ್ ಕಿಂಗ್ ಮೇಕರ್.

ಸಿಎನ್ಎನ್ - ಐಬಿಎನ್- ದಿ ವೀಕ್ - ಸಿಎಸ್ಡಿಎಸ್ ನಡೆಸಿದ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷ ಎರಡೂ ರಾಷ್ಟೀಯ ಪಕ್ಷಗಳ ವೋಟ್ ಬ್ಯಾಂಕಿಗೆ ಭರ್ಜರಿಯಾಗಿಯೇ ಕೈಹಾಕಲಿದೆ.

Pre Poll survey Delhi: Hung assembly in Delhi and AAP

ಬೆಲೆ ಏರಿಕೆ, ಹದಿನೈದು ವರ್ಷ ಅಧಿಕಾರದಲ್ಲಿದ್ದರೂ ಅಷ್ಟೇನೂ ಪ್ರಗತಿ ಕಾಣದೇ ಇರುವುದು ಶೀಲಾ ದೀಕ್ಷಿತ್ ನೇತೃತ್ವದ ಕಾಂಗ್ರೆಸ್ ಪಕ್ಷ ಹಿನ್ನಡೆ ಅನುಭವಿಸಲು ಪ್ರಮುಖ ಕಾರಣ.

2008ರ ಚುನಾವಣೆಗೆ ಹೋಲಿಸಿದರೆ ಬಿಜೆಪಿಯ ಸ್ಥಿತಿ ಗಣನೀಯವಾಗಿ ಸುಧಾರಿಸಿದರೂ ಅಧಿಕಾರಕ್ಕೆ ಬರುವಷ್ಟು ಸೀಟು ಸಿಗುವುದು ಕಷ್ಟ ಎನ್ನುವುದು ಸಮೀಕ್ಷೆಯ ಪ್ರಮುಖ ಅಂಶಗಳಲ್ಲೊಂದು.

ಪ್ರಮುಖವಾಗಿ ಯುವ ಸಮುದಾಯ ಆಮ್ ಆದ್ಮಿ ಪಕ್ಷದ ಪರವಾಗಿ ನಿಂತಿದ್ದಾರೆ ಮತ್ತು ಅರವಿಂದ್ ಕೇಜ್ರಿವಾಲ್ ಅವರೇ ಮುಖ್ಯಮಂತ್ರಿಯಾಗಲು ಅರ್ಹರೆಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಸಮೀಕ್ಷೆಯ ಹೈಲೈಟ್ಸ್ ಹೀಗಿದೆ:
(ಆವರಣದಲ್ಲಿ ಹಾಲಿ ಅಸೆಂಬ್ಲಿಯಲ್ಲಿ ಪಕ್ಷಗಳ ಬಲಾಬಲ)

ಒಟ್ಟು ಸ್ಥಾನಗಳು - 70
ಕಾಂಗ್ರೆಸ್ : 19 - 25 (43)
ಬಿಜಿಪಿ : 22-28 ( 23)
ಆಮ್ ಆದ್ಮಿ : 19-25 (0)
ಇತರರು : 0-2 (4)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+