ವಯನಾಡಲ್ಲಿ ರಾಹುಲ್ ಸೋಲಿಗೆ ಪಣತೊಟ್ಟ ಎಡಪಕ್ಷ, ರೋಚಕತೆಯತ್ತ ಕಣ
ನವದೆಹಲಿ, ಏಪ್ರಿಲ್ 01: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬೇರೆಲ್ಲ ರಾಜ್ಯಗಳನ್ನು ಬಿಟ್ಟು ಕೇರಳದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಎಡಪಕ್ಷಗಳಲ್ಲಿ ಭಾರೀ ಬೇಸರವನ್ನುಂಟು ಮಾಡದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಹಲವು ಸಂಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್ ನೊಂದಿಗೆ ನಿಂತಿದ್ದ ಎಡಪಕ್ಷಗಳಿಗೆ ಇದು ನುಂಗಲಾರದ ತುತ್ತಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಿಪಿಎಂ ಮುಖಂಡ ಪ್ರಕಾಶ್ ಕಾರಟ್, "ಕಾಂಗ್ರೆಸ್ ನ ಮೊದಲ ಆದ್ಯತೆ ಬಿಜೆಪಿ ವಿರುದ್ಧ ಹೋರಾಡುವುದು ಮತ್ತು ಬಿಜೆಪಿಯನ್ನು ಸೋಲಿಸುವುದು ಎಂದಾಗಿದ್ದರೆ ಕೇರಳದಲ್ಲಿ ರಾಹುಲ್ ಗಾಂಧಿ ಚುನಾವಣೆಗೆ ನಿಲ್ಲುವ ಅಗತ್ಯವೇನಿತ್ತು?" ಎಂಡು ಕಾರಟ್ ಪ್ರಶ್ನಿಸಿದ್ದಾರೆ.

"ಕಾಂಗ್ರೆಸ್ ನ ಉದ್ದೇಶ ಎಡಪಕ್ಷಗಳ ವಿರುದ್ಧ ಹೋರಾಡುವುದೇ ಹೊರತು ಬಿಜೆಪಿ ವಿರುದ್ಧವಲ್ಲ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ನಾವು ರಾಹುಲ್ ಗಾಂಧಿಯವರು ಯಾವುದೇ ಕಾರಣಕ್ಕೂ ವಯನಾಡಿನಿಂದ ಗೆಲ್ಲುವುದಕ್ಕೆ ಬಿಡುವುದಿಲ್ಲ, ಅವರನ್ನು ಸೋಲಿಸಿಯೇ ಸೋಲಿಸುತ್ತೇವೆ" ಎಂದು ಕಾರಟ್ ಹೇಳಿದ್ದಾರೆ.
ಉತ್ತರ ಪ್ರದೇಶದ ಅಮೇಥಿ ಮಾತ್ರವಲ್ಲದೆ, ಕೇರಳದ ವಯನಾಡಿನಿಂದಲೂ ರಾಹುಲ್ ಗಾಂಧಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ದಕ್ಷಿಣ ಭಾರತಕ್ಕೂ ಹೆಚ್ಚಿನ ಒತ್ತು ನೀಡುವ ಇದ್ದೇಶದಿಂದ ರಾಹುಲ್ ಗಾಂಧಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.












Click it and Unblock the Notifications