'ಬಡವರ ಅಕ್ಕಿ ಶ್ರೀಮಂತರ ಕೈ ತೊಳೆಯುವ ಸ್ಯಾನಿಟೈಸರ್ ಆಗುತ್ತಿದೆ'

ನವದೆಹಲಿ, ಏಪ್ರಿಲ್ 21: ಕೊರೊನಾ ತಡೆಯಲು ಸ್ಯಾನಿಟೈಸರ್ ಬಳಕೆ ಹೆಚ್ಚಾಗಿದೆ. ಇದರ ಉತ್ಪಾದನೆಯೂ ಹೆಚ್ಚಾಗಿದೆ.

ಭಾರತೀಯ ಆಹಾರ ನಿಗಮದಲ್ಲಿ (FCI) ಹೆಚ್ಚುವರಿಯಾಗಿ ಉಳಿದ ಅಕ್ಕಿಯನ್ನು ಮಿಥೆನಾಲ್ ಆಗಿ ಪರಿವರ್ತಿಸಿ ಸ್ಯಾನಿಟೈಸರ್ ತಯಾರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂಬ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ವರದಿಯನ್ನು ತಮ್ಮ ಟ್ವಿಟ್‌ನಲ್ಲಿ ಲಗತ್ತಿಸಿರುವ ಅವರು, 'ಬಡವರ ಅಕ್ಕಿಯನ್ನು ಶ್ರೀಮಂತರ ಕೈ ತೊಳೆಯಲು ಕೇಂದ್ರ ಸರ್ಕಾರ ಕಳಿಸುತ್ತಿದೆ ನೋಡಿ' ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Poor Rice Using For Rich Peoples Sanitizer: Congress Leader Rahul Gandhi Tweet

ದೇಶದಲ್ಲಿ ಬಡವರು ಹಸಿವಿನಿಂದ ಬಳಲುತ್ತಿರುವಾಗ ಸ್ಯಾನಿಟೈಸರ್ ಬಳಕೆಗೆ ಬಡವರ ಅಕ್ಕಿಯನ್ನು ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡುತ್ತಿದೆ. ದೇಶದ ಬಡವರು ಯಾವಾಗ ಎಚ್ಚೆತ್ತುಕೊಳ್ಳುತ್ತಿರಾ? ನೀವು ಹಸಿವಿನಿಂದ ಬಳಲುತ್ತಿರುವಾಗ ಶ್ರೀಮಂತರ ಕೈಯನ್ನು ಸ್ವಚ್ಛಗೊಳಿಸುವಲ್ಲಿ ಕೇಂದ್ರ ಸರ್ಕಾರ ಮಗ್ನವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+