ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಳಿಗಾಲಕ್ಕೂ ಮುನ್ನ ದೆಹಲಿಯಲ್ಲಿ ವಾಯುಮಾಲಿನ್ಯ: ಗಾಳಿಯ ಗುಣಮಟ್ಟ ತಿಳಿಯಿರಿ

|
Google Oneindia Kannada News

ನವದೆಹಲಿ ಸೆಪ್ಟೆಂಬರ್ 20: ಚಳಿಗಾಲದಲ್ಲಿ ದೆಹಲಿಯಲ್ಲಿ ವಾಯುಮಾಲಿನ್ಯವು ಸಾಮಾನ್ಯವಾಗಿ ಹೆಚ್ಚಾಗುತ್ತದೆ. ದೆಹಲಿಗೆ ಇನ್ನೂ ಚಳಿ ಆವರಿಸಿಲ್ಲ. ಅದಾಗಲೇ ರಾಜಧಾನಿಯ ಗಾಳಿಯು ವಿಷಕಾರಿಯಾಗಲು ಪ್ರಾರಂಭಿಸಿದೆ. ಸೆಪ್ಟೆಂಬರ್‌ನ ಮಧ್ಯ ವಾರದಲ್ಲಿ ಉತ್ತಮ ಗಾಳಿಯ ಗುಣಮಟ್ಟವನ್ನು ನೋಡಲಾಗಿತ್ತು. ಆದರೆ ಸೋಮವಾರ ಅನೇಕ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವು ಹದಗೆಟ್ಟಿದೆ. ದೆಹಲಿಯ ಆನಂದ್ ವಿಹಾರ್‌ನಲ್ಲಿನ ವಾಯು ಗುಣಮಟ್ಟ ಅತ್ಯಂತ ಕೆಳಮಟ್ಟದಲ್ಲಿದೆ. ಅಂದರೆ ವಾಯು ಗುಣಮಟ್ಟ ಸೂಚ್ಯಂಕವು ತೀವ್ರ ಕೆಳಮಟ್ಟದ ವರ್ಗವನ್ನು ತಲುಪಿದೆ. ದೆಹಲಿಯ ಕೆಲವು ಭಾಗಗಳಲ್ಲಿ ಸಣ್ಣ ಮಳೆಯ ಹೊರತಾಗಿಯೂ ಮಬ್ಬು ಮಬ್ಬಾದ ವಾತಾವರಣ ಮತ್ತು ಕಲುಷಿತ ಗಾಳಿಯಿಂದ ಕೂಡಿದೆ.

ಗಾಳಿಯ ಗುಣಮಟ್ಟವನ್ನು ಈ ರೀತಿ ಪರಿಗಣಿಸಲಾಗುತ್ತದೆ- ಸೊನ್ನೆ ಮತ್ತು 50 ರ ನಡುವಿನ (AQI) ಸೂಚ್ಯಂಕವನ್ನು 'ಉತ್ತಮ' ಎಂದು ಪರಿಗಣಿಸಲಾಗುತ್ತದೆ, 51 ಮತ್ತು 100 ನಡುವಿನ (AQI) ಸೂಚ್ಯಂಕವನ್ನು 'ತೃಪ್ತಿಕರ' ಎನ್ನಲಾದರೆ, 101 ಮತ್ತು 200 ನಡುವಿನ (AQI) ಸೂಚ್ಯಂಕವನ್ನು 'ಮಧ್ಯಮ' ಎಂದು ಪರಿಗಣಿಸಲಾಗುತ್ತದೆ. ಇನ್ನೂ 201 ಮತ್ತು 300 'ಕಳಪೆ' ಹಾಗೂ 301 ಮತ್ತು 400 ನಡುವಿನ (AQI) ಸೂಚ್ಯಂಕವನ್ನು 'ಅತ್ಯಂತ ಕಳಪೆ' ವರ್ಗ ಮತ್ತು 401- 500 ನಡುವಿನ (AQI) ಸೂಚ್ಯಂಕವನ್ನು 'ತೀವ್ರ' ಎಂದು ಪರಿಗಣಿಸಲಾಗುತ್ತದೆ. ದೆಹಲಿಯ ಹಲವು ಪ್ರದೇಶಗಳಲ್ಲಿ ಸೂಚ್ಯಾಂಕ 400 ದಾಟಿದೆ.

ದೆಹಲಿಯನ್ನು ಆವರಿಸಿದ ವಿಷಪೂರಿತ ಗಾಳಿ

ದೆಹಲಿಯನ್ನು ಆವರಿಸಿದ ವಿಷಪೂರಿತ ಗಾಳಿ

ದೆಹಲಿಯ ವಾಯು ಗುಣಮಟ್ಟ (ಏರ್ ಕ್ವಾಲಿಟಿ ಇಂಡೆಕ್ಸ್) ಸೋಮವಾರದಂದು 'ಮಧ್ಯಮ' ವರ್ಗದಿಂದ ಕಳಪೆ ವರ್ಗಕ್ಕೆ ಸ್ಥಳಾಂತರಗೊಂಡಿದೆ. ಏರ್ ಕ್ವಾಲಿಟಿ ಇಂಡೆಕ್ಸ್ (AQI) ಅನ್ನು 0 ರಿಂದ 500 ರ ಪ್ರಮಾಣದಲ್ಲಿ ಅಳೆಯಲಾಗುತ್ತದೆ. 0-200 ನಡುವಿನ ಗಾಳಿಯ ಗುಣಮಟ್ಟವನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಕಳೆದ ಕೆಲವು ದಿನಗಳಲ್ಲಿ, ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು ಈ ವರ್ಗದಲ್ಲಿತ್ತು. ಆದರೆ ಸೋಮವಾರ ಸಂಜೆ 5 ಗಂಟೆಗೆ ಆನಂದ್ ವಿಹಾರ್‌ನಲ್ಲಿ ಎಕ್ಯೂಐ 'ತೀವ್ರ' ಮಟ್ಟದಲ್ಲಿ ಅಂದರೆ 405 ರಷ್ಟು ದಾಖಲಾಗಿದೆ. ಇನ್ನೂ ದ್ವಾರಕಾದಲ್ಲಿ 215, ಐಟಿಒದಲ್ಲಿ 209, ಮುಂಡ್ಕಾದಲ್ಲಿ 215 ಮತ್ತು ರೋಹಿಣಿಯಲ್ಲಿ 201 ಎಕ್ಯೂಐ 'ಕಳಪೆ' ವಿಭಾಗದಲ್ಲಿದೆ.

ಸೋಮವಾರ ದೆಹಲಿಯಲ್ಲಿ ಹೆಚ್ಚಾದ ವಾಯುಮಾಲಿನ್ಯ

ಸೋಮವಾರ ದೆಹಲಿಯಲ್ಲಿ ಹೆಚ್ಚಾದ ವಾಯುಮಾಲಿನ್ಯ

ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಗಾಳಿಯ ಗುಣಮಟ್ಟ ಕಳಪೆಯಾಗಲು ಪ್ರಾರಂಭಿಸಿತು. ಹವಾಮಾನ ವಿಶ್ಲೇಷಕರ ಪ್ರಕಾರ, ದೆಹಲಿಯ ಹವಾಮಾನ ಪರಿಸ್ಥಿತಿಗಳು ಕಡಿಮೆ ವೇಗದ ವೃತ್ತಾಕಾರದ ಗಾಳಿ ಮಾಲಿನ್ಯವನ್ನು ಚಲಿಸುವಂತೆ ಮಾಡುವುದಿಲ್ಲ. ಹೆಚ್ಚಿನ ತೇವಾಂಶ ಮತ್ತು ಶಾಂತ ಗಾಳಿಯು ಮಾಲಿನ್ಯಕಾರಕ ಶೇಖರಣೆಗೆ ಕಾರಣವಾಗುತ್ತದೆ. ಇದು ಅನೇಕ ಪ್ರದೇಶಗಳಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟಕ್ಕೆ ಕಾರಣವಾಗುತ್ತದೆ.

ದೆಹಲಿ ತಾಪಮಾನದಲ್ಲಿ ಇಳಿಕೆ

ದೆಹಲಿ ತಾಪಮಾನದಲ್ಲಿ ಇಳಿಕೆ

ದೆಹಲಿಯ ಗರಿಷ್ಠ ತಾಪಮಾನದಲ್ಲೂ ಕೊಂಚ ಇಳಿಕೆಯಾಗಿದೆ. ಸಫ್ದರ್‌ಜಂಗ್‌ನಲ್ಲಿರುವ ಮೂಲ ಹವಾಮಾನ ಕೇಂದ್ರವು ದೆಹಲಿಯಲ್ಲಿ ಸೋಮವಾರ ಗರಿಷ್ಠ ತಾಪಮಾನ 33.7 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ. ಇದು ಋತುವಿನ ಸರಾಸರಿಗಿಂತ ಕಡಿಮೆಯಾಗಿದೆ. ಇದು ಭಾನುವಾರ 34.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

ದೆಹಲಿಯಲ್ಲಿ ತೇವಾಂಶದ ಅಂಶ ಹೆಚ್ಚಳ

ದೆಹಲಿಯಲ್ಲಿ ತೇವಾಂಶದ ಅಂಶ ಹೆಚ್ಚಳ

ದೆಹಲಿಯಲ್ಲಿ ಇನ್ನೆರಡು ಮೂರು ದಿನಗಳಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅದೇ ಸಮಯದಲ್ಲಿ, ಮುನ್ಸೂಚನಾ ಸಂಸ್ಥೆ ಸ್ಕೈಮೆಟ್ ಉಪಾಧ್ಯಕ್ಷ (ಹವಾಮಾನ ಬದಲಾವಣೆ) ಮಹೇಶ್ ಪಲಾವತ್, "ದೆಹಲಿಯಲ್ಲಿ ಗಾಳಿಯಲ್ಲಿ ತೇವಾಂಶದ ಅಂಶವು ತುಂಬಾ ಹೆಚ್ಚಾಗಿದೆ. ಮಾಲಿನ್ಯಕಾರಕಗಳ ಪ್ರಸರಣ ಶಾಂತ ಗಾಳಿ ಹೆಚ್ಚಾಗುತ್ತಿದೆ. ಈ ಎಲ್ಲಾ ಅಂಶಗಳು ಮಬ್ಬುಗೆ ಕಾರಣವಾಗುತ್ತವೆ. ಈಶಾನ್ಯ ಮತ್ತು ವಾಯುವ್ಯ ಉತ್ತರ ಪ್ರದೇಶದ ಮೇಲೆ ಕಡಿಮೆ ಒತ್ತಡದ ಪ್ರದೇಶವೂ ಮುಂದುವರಿದಿದೆ. ಹೀಗಾಗಿ ಮುಂದಿನ ಎರಡು ಮೂರು ದಿನಗಳ ಕಾಲ ಜಿಲ್ಲೆಯ ಹಲವೆಡೆ ತುಂತುರು ಮಳೆಯಾಗುವ ಸಾಧ್ಯತೆ ಇದೆ.

English summary
Ahead of winter, toxic air in Delhi has crossed the index of 400 in many areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X