ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಗೆ ಸಿಕ್ಕ ಪ್ರಶಸ್ತಿ ವಾಪಸ್ ಮಾಡಿ ಎಂದ ಶಶಿ ತರೂರ್

|
Google Oneindia Kannada News

ನವದೆಹಲಿ, ಜನವರಿ 17: ಅತ್ಯುತ್ತಮ ನಾಯಕತ್ವಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಡಮಾಡಲಾದ ಮೊಟ್ಟ ಮೊದಲ ಫಿಲಿಪ್ ಕೊಟ್ಲರ್ ಪ್ರೆಸಿಡೆನ್ಶಿಯಲ್ ಪ್ರಶಸ್ತಿಯನ್ನು ಹಿಂದಿರುಗಿಸುವಂತೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಒತ್ತಾಯಿಸಿದ್ದಾರೆ.

ಮೋದಿಗೆ ಕೊಟ್ಲರ್ ಪ್ರಶಸ್ತಿ, ಪ್ರಧಾನಿಯ ಕಾಲೆಳೆದ ರಾಹುಲ್ ಗಾಂಧಿ ಮೋದಿಗೆ ಕೊಟ್ಲರ್ ಪ್ರಶಸ್ತಿ, ಪ್ರಧಾನಿಯ ಕಾಲೆಳೆದ ರಾಹುಲ್ ಗಾಂಧಿ

ಈ ಪ್ರಶಸ್ತಿಯನ್ನು ತೆಗೆದುಕೊಳ್ಳುವುದು ದೇಶಕ್ಕೆ ಮಾಡುವ ಅವಮಾನ. ಇದೊಂದು ನಕಲಿ ಪ್ರಶಸ್ತಿ. ಇದನ್ನು ಪ್ರಧಾನಿ ಸಚಿವಾಲಯ ವಾಪಸ್ ಮಾಡುಬೇಕು ಎಂದು ತರೂರ್ ಹೇಳಿದ್ದಾರೆ.

ಗುಪ್ತ್ 'ಪ್ರಶಸ್ತಿ' ಪಡೆದ ಮೋದಿಜೀಗೆ ಅಭಿನಂದನೆ, ರಾಹುಲ್ ಗಾಂಧಿ ಗುಪ್ತ್ 'ಪ್ರಶಸ್ತಿ' ಪಡೆದ ಮೋದಿಜೀಗೆ ಅಭಿನಂದನೆ, ರಾಹುಲ್ ಗಾಂಧಿ

''People, profit and planet" ಎಂಬುದನ್ನು ಆದ್ಯತೆಯನ್ನಾಗಿ ಹೊಂದಿರುವ ಈ ಪ್ರಶಸ್ತಿಯನ್ನು ಈ ಮೂರು ಅಂಶಗಳಿಗೆ ವ್ಯಕ್ತಿ ನೀಡಿದ ಕೊಡುಗೆಯನ್ನು ಪರಿಗಣಿಸಿ ನೀಡಲಾಗುತ್ತದೆ. ಅಂತೆಯೇ ಈ ಬಾರಿ ಪ್ರಧಾನಿ ನರೇಂದ್ರ ಮೊದಿ ಅವರು ದೇಶದ ಆರ್ಥಿಕ, ಸಾಮಾಜಿಕ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಾಗಿ ಹಗಲಿರುಳೂ ಶ್ರಮಿಸುತ್ತಿರುವುದರಿಂದ ಈ ಪ್ರಶಸ್ತಿ ನೀಡಿದ್ದೇವೆ ಎಂದು ಫಿಲಿಪ್ ಕೊಟ್ಲರ್ ಅವರೇ ಟ್ವೀಟ್ ಮಾಡಿದ್ದರು.

PMO should return Philip Kotlar award: Shashi Taroor

'ವಿಶ್ವಪ್ರಸಿದ್ಧ ಕೊಟ್ಲರ್ ಪ್ರೆಸಿಡೆನ್ಷಿಯಲ್ ಪ್ರಶಸ್ತಿ ಪಡೆದ ನಮ್ಮ ಪ್ರಧಾನಿಗೆ ಅಭಿನಂದನೆಗಳು. ಈ ಪ್ರಶಸ್ತಿ ಎಷ್ಟು ಪ್ರಸಿದ್ಧ ಎಂದರೆ ಇದಕ್ಕೆ ಜ್ಯೂರಿಗಳಿಲ್ಲ, ಇದನ್ನು ಇದುವರೆಗೂ ಯಾರಿಗೂ ಕೊಟ್ಟಿರಲಿಲ್ಲ! ಅಷ್ಟೇ ಅಲ್ಲ, ಈ ಕಾರ್ಯಕ್ರಮದ ಪಾಲುದಾರರು ಪತಂಜಲಿ ಮತ್ತು ರಿಪಬ್ಲಿಕ್ ಟಿವಿ' ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದರು .

English summary
Congress leader and former union minister Shashi Taroor said, PM Narendra Modi should return Philip Kotlar award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X