ಅಗತ್ಯವಿರುವಾಗಲೇ ಪ್ರಧಾನಿ ಮೋದಿ ಕಾಣಿಸುತ್ತಿಲ್ಲ: ರಾಹುಲ್ ಗಾಂಧಿ

ನವದೆಹಲಿ, ಮೇ 17: ಅಗತ್ಯವಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಕಾಣಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಕೋವಿಡ್ 19 ನಿರ್ವಹಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ, ದೇಶದ ಜನರಿಗೆ ಪ್ರಧಾನಿ ಅಗತ್ಯವಿದೆ ಈಗಲೇ ಕಾಣಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಪಿಎಂ ಕೇರ್ಸ್ ಫಂಡ್ ಮೂಲಕ ನೀಡಲಾದ ವೆಂಟಿಲೇಟರ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ರಾಜಸ್ಥಾನ, ಮಹಾರಾಷ್ಟ್ರ, ಪಂಜಾಬ್ ರಾಜ್ಯಗಳು ದೂರಿವೆ.

Rahul Gandhi

ಕೇಂದ್ರ ಸರ್ಕಾರ ಜನರ ಪರವಾಗಿಲ್ಲ, ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ, ಪಿಎಂ ಕೇರ್ಸ್ ಫಂಡ್ ಮೂಲಕ ವೆಂಟಿಲೇಟರ್‌ಗಳ ಕಾರ್ಯನಿರ್ವಹಣೆಟ ಮತ್ತು ಪ್ರಧಾನಿ ಅವರ ಕಾರ್ಯವೈಖರಿಯನ್ನು ಹೋಲಿಕೆ ಮಾಡಿದ್ದಾರೆ.

ಇತರರ ಸೇವೆಯಲ್ಲಿ ತೊಗಿರುವ ಈ ಹೀರೋಗಳಿಗೆ ಧನ್ಯವಾದಗಳು, ಕಷ್ಟದ ಕಾಲದಲ್ಲಿ ಭಾರತೀಯರು ಯಾವ ರೀತಿ ನೆರವು ನೀಡುತ್ತಾರೆ ಎನ್ನುವುದನ್ನು ಇವರು ಜಗತ್ತಿಗೆ ತೋರಿಸಿದ್ದಾರೆ ಎಂದು ಹೇಳಿದರು.

ಪಿಎಂ ಕೇರ್ಸ್ ಮೂಲಕ ನೀಡಲಾದ ವೆಂಟಿಲೇಟರ್‌ಗಳು ಮತ್ತು ಸ್ವಯಂ ಪ್ರಧಾನಿ ಅವರ ನಡುವೆ ಸಾಮಾನ್ಯ ಹೋಲಿಕೆಗಳಿವೆ, ಸುಳ್ಳು ಪ್ರಚಾರ ಮಾಡುವುದು, ತಮ್ಮ ಕೆಲಸವನ್ನು ಸಮರ್ಪಕವಾಗಿ ಮಾಡದಿರುವುದು, ತಮಗೆ ಅಗತ್ಯವಿದ್ದಾಗ ಮಾತ್ರ ಕಾಣಿಸಿಕೊಳ್ಳುವುದು ಎಂದು ಟೀಕಿಸಿದ್ದಾರೆ. ಅಷ್ಟೇ ಅಲ್ಲದೆ ಕೊರೊನಾ ಬಿಕ್ಕಟ್ಟಿನಲ್ಲಿ ಜನರಿಗೆ ನರವಾಗುತ್ತಿರುವವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+