ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಮಂತ್ರಿ ಸಂಗ್ರಹಾಲಯ ಪ್ರವೇಶಿಸಲು ಟೀಕೆಟ್ ಖರೀದಿಸಿದ ಪ್ರಧಾನಿ ಮೋದಿ

|
Google Oneindia Kannada News

ನವದೆಹಲಿ, ಏಪ್ರಿಲ್ 14 : ಸ್ವಾತಂತ್ರ್ಯ ಬಂದ ನಂತರ ದೇಶಕ್ಕಾಗಿ ಸೇವೆ ಸಲ್ಲಿಸಿದ ಎಲ್ಲಾ ಪ್ರಧಾನಿಗಳನ್ನ ಸ್ಮರಿಸಲು ನಿರ್ಮಿಸಲಾಗಿರುವ "ಪ್ರಧಾನಮಂತ್ರಿ ಸಂಗ್ರಾಹಾಲಯ"ವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ದೆಹಲಿಯ ತೀನ್ ಮೂರ್ತಿ ಹೌಸ್‌ನಲ್ಲಿ ಉದ್ಘಾಟನೆ ಮಾಡಿದ್ದಾರೆ. ಬಳಿಕ ಮ್ಯೂಸಿಯಂ ಪ್ರವೇಶಿಸಲು ತಮ್ಮ ಮೊದಲ ಟಿಕೆಟ್‌ ಅನ್ನು ಸ್ವತಃ ಪ್ರಧಾನಿ ಮೋದಿ ಹಣ ನೀಡಿ ಖರೀದಿಸಿದರು.

ದೇಶಕ್ಕಾಗಿ ಕೊಡುಗೆ ನೀಡಿದ ಎಲ್ಲಾ ಪ್ರಧಾನಮಂತ್ರಿಗಳ ಗೌರವಾರ್ಥವಾಗಿ ಈ ವಸ್ತು ಸಂಗ್ರಾಹಾಲಯವನ್ನು ನಿರ್ಮಿಸಲಾಗಿದೆ. ಈ ಮ್ಯೂಸಿಯಂನಲ್ಲಿ ಸ್ವಾತಂತ್ರ್ಯ ಬಂದ ನಂತರ ಪ್ರಧಾನಿಗಳಾಗಿ ದೇಶ ಸೇವೆ ಮಾಡಿದ ಎಲ್ಲಾ ಪ್ರಧಾನಮಂತ್ರಿಗಳ ಜೀವನ ಹಾಗೂ ಅವರ ಕೊಡುಗೆಗಳ ಸಂಗ್ರಹವನ್ನು ಮಾಡಲಾಗಿದೆ. ಇನ್ನು ಈ ಪ್ರಧಾನ ಮಂತ್ರಿ ಸಂಗ್ರಹಾಲಯವು ಸಿದ್ದಾಂತ ಅಥವಾ ಅಧಿಕಾರವಧಿಯನ್ನು ಲೆಕ್ಕಿಸದೇ ಸ್ವಾತಂತ್ರ್ಯದ ನಂತರ ಭಾರತದ ಪ್ರತಿಯೊಬ್ಬ ಪ್ರಧಾನಿಗೆ ಸಲ್ಲಿಸುವ ಗೌರವವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆಂದು ಪ್ರಧಾನ ಮಂತ್ರಿ ಹೇಳಿದ್ದಾರೆ.

ಈ ವಸ್ತು ಸಂಗ್ರಹಾಲಯದಲ್ಲಿ 43 ಗ್ಯಾಲರಿಗಳು ಇದ್ದು, ಇದರಲ್ಲಿ ಸ್ವಾತಂತ್ರ್ಯ ಮತ್ತು ಸಂವಿಧಾನದ ರಚನೆಯನ್ನು ಪ್ರದರ್ಶಿಸಲಾಗುತ್ತದೆ. ಅಲ್ಲದೆ ಈ ಸಂಗ್ರಹಾಲಯವು ಪ್ರಧಾನಿ ಮಂತ್ರಿಗಳು ಪ್ರಜಾಪ್ರಭುತ್ವ ನಿರ್ಮಾಣದ ಸಮಯದಲ್ಲಿ ಸವಾಲುಗಳನ್ನು ಹಿಮ್ಮೆಟ್ಟಿ ದೇಶ ಕಟ್ಟಲು ಶ್ರಮಿಸಿದ ಕಥೆಯನ್ನು ಸಹ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ.

PM Narendra Modi inaugurates Pradhanmantri Sangrahalaya

ಈ ವಸ್ತು ಸಂಗ್ರಹಾಲಯವು ಎಲ್ಲಾ ಭಾರತೀಯ ಪ್ರಧಾನ ಮಂತ್ರಿಗಳ ನಾಯಕತ್ವ, ದೂರದೃಷ್ಟಿ ಮತ್ತು ಸಾಧನೆಗಳ ಬಗ್ಗೆ ಯುವ ಪೀಳಿಗೆಯನ್ನು ಜಾಗೃತಗೊಳಿಸುವ ಮತ್ತು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಪ್ರಧಾನಮಂತ್ರಿ ಸಂಗ್ರಹಾಲಯವನ್ನು ಬ್ಲಾಕ್ 1 ಮತ್ತು ಬ್ಲಾಕ್ 2 ಎಂದು ಗುರುತಿಸಲಾಗುತ್ತದೆ. ಬ್ಲಾಕ್‌ 1 ನಲ್ಲಿ ಭಾರತದ ಮೊದಲ ಪ್ರಧಾನಮಂತ್ರಿ ಜವಹರ್ ಲಾಲ್ ನೆಹರು ಅವರು ಜೀವನ ಮತ್ತು ಕೊಡುಗೆಗಳನ್ನ ಆಧುನಿಕ ತಂತ್ರಜ್ಞಾನ ಬಳಸಿ ವಿವರಿಸಲಾಗಿದೆ. ಅಲ್ಲದೆ ನೆಹರು ಅವರಿಗೆ ಪ್ರಧಾನಿಯಾಗಿದ್ದಾಗ ಅವರಿಗೆ ವಿಶ್ವದಾದ್ಯಂತ ಹಲವು ಊಡುಗೊರೆಗಳು ಬಂದಿದ್ದವು. ಅದ್ಯಾವುದನ್ನು ಪ್ರದರ್ಶನ ಮಾಡಿರಲಿಲ್ಲ. ಆದೀಗ ಈ ವಸ್ತು ಸಂಗ್ರಹಾಲಯದಲ್ಲಿ ನೆಹರು ಅವರ ಎಲ್ಲಾ ಊಡುಗೊರೆಗಳು ಪ್ರದರ್ಶನಗೊಳ್ಳಲಿದೆ ಅಂತ ಪ್ರಧಾನಿ ಕಚೇರಿ ತಿಳಿಸಿದೆ.

PM Narendra Modi inaugurates Pradhanmantri Sangrahalaya

ಇನ್ನು ಸಂಗ್ರಹಾಲಯದ ಕಟ್ಟಡದ ವಿನ್ಯಾಸ ಭಾರತದ ಅಭಿವೃದ್ಧಿಯ ಬೆಳವಣಿಗೆಯ ಕತೆಗಳಿಂದ ಸ್ಫೂರ್ತಿ ಪಡೆದಿದೆ. ಪ್ರಧಾನಮಂತ್ರಿ ಸಂಗ್ರಹಾಲಯದ ವೇಳೆ ಯಾವುದೇ ಮರವನ್ನು ಕಡಿಯಲಾಗಿಲ್ಲ ಅಥವಾ ಕಸಿ ಮಾಡಲಾಗಿಲ್ಲ. ಸಂಗ್ರಹಾಲಯಕ್ಕೊಂದು ಲಾಂಛನವಿದ್ದು, ರಾಷ್ಟ್ರ ಮತ್ತು ಪ್ರಜಾಪ್ರಭುತ್ವವನ್ನು ಸಂಕೇತಿಸುವ ಧರ್ಮ ಚಕ್ರವನ್ನು ಭಾರತೀಯ ನಾಗರಿಕರು ಹಿಡಿದಿರುವಂತಿದೆ.

English summary
Prime Minister Narendra Modi on Thursday inaugurated Pradhanmantri Sangrahalaya a museum dedicated to country's Prime Ministers since Independence. He also paid for the first ticket of the 'Pradhanmantri Sangrahalaya'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X