Get Updates
Get notified of breaking news, exclusive insights, and must-see stories!

ಕೊಟ್ಟ ಮಾತಿನಂತೆ ನಡೆದುಕೊಂಡ ಮೋದಿ: ಪಿವಿ ಸಿಂಧು ಜೊತೆ ಐಸ್‌ಕ್ರೀಂ ಸವಿದ ಪ್ರಧಾನಿ

ನವದೆಹಲಿ, ಆಗಸ್ಟ್ 16: ಟೋಕಿಯೋ ಒಲಿಂಪಿಕ್ಸ್​ 2020 ಕ್ರೀಡಾಕೂಟದಿಂದ ವಾಪಸ್ ಬಂದ ಬಳಿಕ ನಿಮ್ಮ ಜೊತೆ ಐಸ್​ ಕ್ರೀಂ ತಿನ್ನುವುದಾಗಿ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧುಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತು ಕೊಟ್ಟಿದ್ದರು.

ಟೋಕಿಯೋ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪಿ.ವಿ. ಸಿಂಧು ಕಂಚಿನ ಪದಕ ಗೆದ್ದು ಭಾರತಕ್ಕೆ ಬಂದಿದ್ದರು. ಈ ಮೊದಲು ಮಾತು ಕೊಟ್ಟಂತೆ ಪಿ.ವಿ. ಸಿಂಧು ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಐಸ್​ ಕ್ರೀಂ ಸೇವಿಸಿದ್ದಾರೆ.

75ನೇ ಸ್ವಾತಂತ್ರ್ಯ ದಿನಾಚರಣೆ (ಭಾನುವಾರ)ಯಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳಿಗೆ ಔತಣಕೂಟ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಪಿ.ವಿ. ಸಿಂಧು ಜೊತೆಗೆ ಐಸ್​ಕ್ರೀಂ ಸವೆದಿದ್ದಾರೆ.

 ವಿಡಿಯೋ ಕಾನ್ಫರೆನ್ಸ್​ ನಡೆಸಿ ಪ್ರೋತ್ಸಾಹ ತುಂಬಿದ್ದರು

ವಿಡಿಯೋ ಕಾನ್ಫರೆನ್ಸ್​ ನಡೆಸಿ ಪ್ರೋತ್ಸಾಹ ತುಂಬಿದ್ದರು

ಒಲಿಂಪಿಕ್ಸ್​ ಆರಂಭಕ್ಕೂ ಮೊದಲು ಕ್ರೀಡಾಪಟುಗಳನ್ನು ಹುರಿದುಂಬಿಸಲು ಟೋಕಿಯೋಗೆ ತೆರಳುವ ಮೊದಲು ಪ್ರಧಾನಿ ನರೇಂದ್ರ ಮೋದಿ ಭಾರತದ ಕ್ರೀಡಾಪಟುಗಳ ಜೊತೆ ವಿಡಿಯೋ ಕಾನ್ಫರೆನ್ಸ್​ ನಡೆಸಿ ಪ್ರೋತ್ಸಾಹ ತುಂಬಿದ್ದರು. ಆಗ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಬಳಿ ಅವರ ಡಯೆಟ್ ಬಗ್ಗೆ ಕೇಳಿದ್ದರು.

ಈ ವೇಳೆ ತನ್ನ ಡಯಟ್ ಬಗ್ಗೆ ಮಾಹಿತಿ ನೀಡಿದ್ದ ಪಿ.ವಿ. ಸಿಂಧು, ಕಠಿಣ ಅಭ್ಯಾಸ, ಡಯಟ್ ಕಾರಣ ನಾನು ನನ್ನ ಇಷ್ಟದ ಐಸ್‌ಕ್ರೀಂ ತಿನ್ನುತ್ತಿಲ್ಲ. ಐಸ್‌ಕ್ರೀಂ ತಿನ್ನುವುದನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದರು. ಅದನ್ನು ಕೇಳಿದ್ದ ಪ್ರಧಾನಿ ನರೇಂದ್ರ ಮೋದಿ, ಒಲಿಂಪಿಕ್ಸ್​ನಿಂದ ಮರಳಿದ ಬಳಿಕ ನಾವಿಬ್ಬರೂ ಒಟ್ಟಿಗೆ ಕೂತು ಐಸ್​ಕ್ರೀಂ ತಿನ್ನೋಣ ಎಂದಿದ್ದರು.
 ನೀರಜ್ ಚೋಪ್ರಾ ಜೊತೆ ವಿಶೇಷ ಮಾತುಕತೆ

ನೀರಜ್ ಚೋಪ್ರಾ ಜೊತೆ ವಿಶೇಷ ಮಾತುಕತೆ

ಆ ಮಾತನ್ನು ಉಳಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ನಿವಾಸದಲ್ಲಿ ಪಿ.ವಿ. ಸಿಂಧು ಜೊತೆಗೆ ಐಸ್​ಕ್ರೀಂ ತಿಂದಿದ್ದಾರೆ. ದಾಖಲೆಯ ಸತತ ಎರಡು ಬಾರಿ ಒಲಿಂಪಿಕ್ಸ್​ ಪದಕ ಪಡೆದಿರುವ ಪಿ.ವಿ. ಸಿಂಧು ಪ್ರಧಾನಿಯೊಂದಿಗೆ ಐಸ್​ಕ್ರೀಂ ಸೇವಿಸಿರುವ ಫೋಟೋ ಈಗ ಭಾರೀ ವೈರಲ್ ಆಗುತ್ತಿದೆ.

ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದ ಪ್ರಧಾನಿ ನರೇಂದ್ರ ಮೋದಿ, ದೇಶದ ಗೌರವ ಹೆಚ್ಚಿಸಿದ್ದಕ್ಕೆ ವೈಯಕ್ತಿಕವಾಗಿ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಚಿನ್ನದ ಪದಕ ವಿಜೇತರಾದ ನೀರಜ್ ಚೋಪ್ರಾ ಜೊತೆ ವಿಶೇಷ ಮಾತುಕತೆ ನಡೆಸಿದರು. ಹಾಗೆಯೇ ನೀರಜ್ ಚೋಪ್ರಾರ ಇಷ್ಟದ ಆಹಾರ ಚೂರ್ಮಾ ಮಾಡಿಸಿ, ಡಯೆಟ್ ವೇಳೆ ಪಿ.ವಿ. ಸಿಂಧು ಮಿಸ್ ಮಾಡಿಕೊಂಡಿದ್ದ ಐಸ್​ಕ್ರೀಂ ತರಿಸಿ ಅವರೊಂದಿಗೆ ಊಟ ಮಾಡಿದ್ದಾರೆ.

 ಮುಂದಿನ ಪೀಳಿಗೆಗೆ ಸ್ಫೂರ್ತಿ ತುಂಬಿದ್ದಾರೆ

ಮುಂದಿನ ಪೀಳಿಗೆಗೆ ಸ್ಫೂರ್ತಿ ತುಂಬಿದ್ದಾರೆ

"ನಮ್ಮ ದೇಶಕ್ಕೆ ಹೆಮ್ಮೆ ತಂದಿರುವ ಒಲಿಂಪಿಕ್ಸ್ ಅಥ್ಲೀಟ್​ಗಳು ಇಂದು ನಮ್ಮೊಂದಿಗೆ ಇದ್ದಾರೆ. ಒಂದು ಕಾಲದಲ್ಲಿ ಕ್ರೀಡೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಯಾವಾಗಲೂ ಆಟವಾಡುತ್ತಿದ್ದರೆ ಅದು ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತದೆ ಎಂದು ಪೋಷಕರು ಸದಾ ಬೈಯುತ್ತಿದ್ದರು. ಆದರೆ ಈಗ ಕ್ರೀಡೆ ಮತ್ತು ಫಿಟ್​ನೆಸ್ ಬಗ್ಗೆ ಜನರ ಅಭಿಪ್ರಾಯಗಳು ಬದಲಾಗಿವೆ. ಆ ಕಾರಣದಿಂದಲೇ ಭಾರತ ಈ ಬಾರಿ ಒಲಿಂಪಿಕ್ಸ್​ನಲ್ಲಿ ದೊಡ್ಡ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಕ್ರೀಡಾಪಟುಗಳು ಪದಕ ಗೆದ್ದು ನಮ್ಮ ಹೃದಯ ಗೆದ್ದಿದ್ದು ಮಾತ್ರವಲ್ಲದೆ, ಮುಂದಿನ ಪೀಳಿಗೆಗೆ ಸ್ಫೂರ್ತಿ ತುಂಬಿದ್ದಾರೆ," ಎಂದು ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

 ಐಸ್‌ಕ್ರೀಂ ಆಫರ್ ನೀಡಿದ್ದ ಮಂಗಳೂರಿನ ಪಬ್ಬಾಸ್

ಐಸ್‌ಕ್ರೀಂ ಆಫರ್ ನೀಡಿದ್ದ ಮಂಗಳೂರಿನ ಪಬ್ಬಾಸ್

ಟೋಕಿಯೋ ಒಲಿಂಪಿಕ್ಸ್ 2020ರ ಕಂಚಿನ ಪದಕ ವಿಜೇತೆ, ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಜೊತೆ ಐಸ್ ಕ್ರೀಂ ತಿನ್ನಲು ದಿ ಬೆಸ್ಟ್ ಐಸ್ ಕ್ರೀಂ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪಬ್ಬಾಸ್ ಟ್ವೀಟ್ ಮಾಡಿತ್ತು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಟ್ವೀಟ್ ಮಾಡಿದ್ದ ಪಬ್ಬಾಸ್ ಐಡಿಯಲ್ ಐಸ್ ಕ್ರೀಂ ಕೆಫೆ, ""ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಜೊತೆ ತಿನ್ನಲು ವೋಕಲ್ ಫಾರ್ ಲೋಕಲ್ ಮತ್ತು ಆತ್ಮ ನಿರ್ಭರ ಭಾರತ್ ಅಡಿಯಲ್ಲಿ ದಿ ಬೆಸ್ಟ್ ಐಸ್ ಕ್ರೀಂ ನೀಡುವುದಾಗಿ,'' ಪಬ್ಬಾಸ್ ಟ್ವೀಟ್‌ನಲ್ಲಿ ಹೇಳಿಕೊಂಡಿತ್ತು.

Recommended Video

    ತಾಲಿಬಾನಿಗಳ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ಜನ | Oneindia Kannada
     ಕಂಚಿನ ಪದಕ ಗೆದ್ದ ಪಿ.ವಿ. ಸಿಂಧು

    ಕಂಚಿನ ಪದಕ ಗೆದ್ದ ಪಿ.ವಿ. ಸಿಂಧು

    ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಭಾರತಕ್ಕೆ ಎರಡನೇ ಪದಕ ಗೆದ್ದು ಕೊಟ್ಟಿದ್ದಾರೆ. ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು.

    ಭಾನುವಾರ (ಆಗಸ್ಟ್ 1) ನಡೆದ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಎದುರಾಳಿ ಚೀನಾ ದೇಶದ ಆಟಗಾರ್ತಿ ಹಿ ಬಿಂಗ್ ಜಿಯಾವೋ ವಿರುದ್ಧ ಭಾರತದ ಪಿ.ವಿ. ಸಿಂಧು 21-13, 21-15ರ ಅಂತರದಿಂದ ಗೆಲುವು ತನ್ನದಾಗಿಸಿಕೊಂಡಿದ್ದರು. ಇದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಪಿ.ವಿ.ಸಿಂಧು ಸತತ ಎರಡು ಬಾರಿ ಪದಕ ಗೆದ್ದ ದಾಖಲೆ ನಿರ್ಮಿಸಿದರು.ಮೊದಲ ಸೆಟ್‌ನಲ್ಲಿ ಭಾರತೀಯ ನಾರಿ ಪಿ.ವಿ. ಸಿಂಧು ಸುಲಭವಾಗಿ ಜಯ ಸಾಧಿಸಿದಳು. ನಂತರ ದ್ವಿತೀಯ ಸೆಟ್‌ನಲ್ಲಿ ಚೀನಾದ ಹಿ ಬಿಂಗ್ ಜಿಯಾವೋ ಕೊಂಚ ಪೈಪೋಟಿ ನೀಡಿದರೂ, ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಪಾರುಪತ್ಯ ಸಾಧಿಸಿ, ಕಂಚಿನ ಪದಕ ತನ್ನದಾಗಿಸಿಕೊಂಡರು.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+