• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ಕಾರ್ಯಕರ್ತರಿಗೆ ಐದು ಸಲಹೆ ನೀಡಿದ ಪ್ರಧಾನಿ ನರೇಂದ್ರ ಮೋದಿ

|

ನವದೆಹಲಿ, ಮಾರ್ಚ್ 6: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಿಜೆಪಿ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಬಿಜೆಪಿ ಕಾರ್ಯಕರ್ತರಿಗೆ ಐದು ಸಲಹೆಗಳನ್ನು ನೀಡಿದ್ದಾರೆ.

ದೇಶದಲ್ಲಿ ಕೊರೊನಾ ತುರ್ತುಸ್ಥಿತಿ ಇರುವುದರಿಂದ ಬಿಜೆಪಿ ಕಾರ್ಯಕರ್ತರು ಏನು ಮಾಡಬೇಕೆಂದು ಮೋದಿ ಸಲಹೆ ನೀಡಿದ್ದಾರೆ.

1) ಕೊರೊನಾ ಸೋಂಕು ಹರಡುವುದನ್ನು ತಡೆಯಲು ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ ಇದೆ. ಈ ಸನ್ನಿವೇಶದಲ್ಲಿ ಬಡವರಿಗೆ, ನಿರ್ಗತಿಕರಿಗೆ ಆಹಾರ ಪದಾರ್ಥಗಳನ್ನು ತಲುಪಿಸಲು ಬಿಜೆಪಿ ಕಾರ್ಯಕರ್ತರು ಶ್ರಮಿಸಬೇಕು

2) ಮಾಸ್ಕ್ ಧರಿಸಿ, ಮಾಸ್ಕ್ ಧರಿಸಲು ಜನರಿಗೆ ಪ್ರೇರಿಪಿಸಿ. ಮಾಸ್ಕ್ ಧರಿಸದೇ ಮನೆಯಿಂದ ಹೊರಗೆ ಬರಬೇಡಿ

3) ಕೊರೊನಾ ತಡೆಗಟ್ಟಲು ಸ್ಥಾಪಿಸಲಾಗಿರುವ ಪ್ರಧಾನಮಂತ್ರಿ ಕೇರ್ ನಿಧಿಗೆ ಬಿಜೆಪಿ ಕಾರ್ಯಕರ್ತರು ಕೈಲಾದಷ್ಟು ಸಹಾಯಧನ ನೀಡಬೇಕು, ಪ್ರತಿಯೊಬ್ಬ ಕಾರ್ಯಕರ್ತನು ನಲವತ್ತು ಜನರಿಂದ ನಿಧಿ ಕೊಡಿಸಬೇಕು

4) ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೌರಕಾರ್ಮಿಕರು, ಅಧಿಕಾರಿಗಳು, ಮಾಧ್ಯಮದವರು, ಅಂಚೆಯವರಿಗೆ ಧನ್ಯವಾದ ಪತ್ರ ಸಲ್ಲಿಸಬೇಕು

5) ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನು ಆರೋಗ್ಯ ಸೇತು ಮೊಬೈಲ್ ಆ್ಯಪ್ ಅಳವಡಿಸಿಕೊಳ್ಳಬೇಕು

English summary
PM Narendra Modi Call To BJP Workers to Fight Against Coronavirus, Modi 5 suggestion to BJP Workers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X