ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

65 ಗಂಟೆಗಳಲ್ಲಿ 25 ಮೀಟಿಂಗ್, 8 ರಾಷ್ಟ್ರ ನಾಯಕರ ಜೊತೆ ಮೋದಿ ಮಾತುಕತೆ

|
Google Oneindia Kannada News

ನವದೆಹಲಿ, ಮೇ 2 : ಪ್ರಧಾನಿ ನರೇಂದ್ರ ಮೋದಿ ಈ ವರ್ಷ ತಮ್ಮ ಮೊದಲ ವಿದೇಶಿ ಪ್ರವಾಸವನ್ನು ಕೈಗೊಂಡಿದ್ದು, ಇಂದಿನಿಂದ ಮೂರು ದಿನಗಳ ಕಾಲ ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್‌ಗೆ ಭೇಟಿ ನೀಡಲಿದ್ದಾರೆ. ಈ ಭೇಟಿ ಸಮಯದಲ್ಲಿ ಸುಮಾರು 65 ಗಂಟೆಗಳ ಕಾಲ 25 ಸಭೆಗಳಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ ಎಂದು ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.

ಪ್ರಧಾನಿ ಮೋದಿ 7 ದೇಶಗಳ ಎಂಟು ವಿಶ್ವ ನಾಯಕರೊಂದಿಗೆ ದ್ವಿಪಕ್ಷಿಯ ಮತ್ತು ಬಹುಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಜೊತೆಗೆ 50 ಜಾಗತಿಕ ವ್ಯಾಪಾರಸ್ಥರೊಂದಿಗೆ ಸಂವಾದ ಕೂಡ ನಡೆಸಲಿದ್ದಾರೆ. ಬಳಿಕ ಭಾರತೀಯ ಸಮುದಾಯದ ಸಾವಿರಾರು ಸದಸ್ಯರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಈಗಾಗಲೇ ಪ್ರಧಾನಿ ಮೋದಿ ಬರ್ಲಿನ್ ತಲುಪಿದ್ದು, ಮಧ್ಯಾಹ್ನ ಜರ್ಮನಿ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಮಧ್ಯಾಹ್ನ 3.30 ಕ್ಕೆ ಜರ್ಮನಿಯ ಚಾನ್ಸಲರ್‌ ಓಲಾಫ್‌ ಸ್ಕೋಲ್ ಅವರೊಂದಿಗೆ 6 ನೇ ಭಾರತ-ಜರ್ಮನಿ ಅಂತರ್‌ ಸರ್ಕಾರಿ ಸಮಾಲೋಚನೆಯಲ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ತಮ್ಮ ಪೂರ್ವಾಧಿಕಾರಿ ಏಂಜೆಲಾ ಮಾರ್ಕೆಲ್‌ರಿಂದ ಉನ್ನತ ಕಚೇರಿಯ ಅಧಿಕಾರ ವಹಿಸಿಕೊಂಡ ಚಾನ್ಸೆಲರ್‌ ಸ್ಕೋಲ್ಜ್ ಅವರೊಂದಿಗೆ ಇದು ಮೋದಿಯವವರ ಮೊದಲ ಸಭೆಯಾಗಿದೆ.

PM Modis Europe Visit: 65 hours, 25 meetings & 8 World leaders in PM Modis trip

2021 ರಲ್ಲಿ ಭಾರತ ಮತ್ತು ಜರ್ಮನಿ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70 ವರ್ಷಗಳ ಸ್ಮರಣಾರ್ಥವಾಗಿ ಮತ್ತು 2000 ರಿಂದ ಕಾರ್ಯತಂತ್ರದ ಪಾಲುದಾರರಾಗಿದ್ದಾರೆ. ಈ ಭೇಟಿಯು ವಿಶಾಲ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಮತ್ತು ತೀವ್ರಗೊಳಿಸಲು ಮತ್ತು ಪ್ರಾದೇಶಿಕ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಎರಡು ಸರ್ಕಾರಗಳಿಗೆ ಉತ್ತಮ ಅವಕಾಶವಾಗಿದೆ.

ನಾಳೆ ಡೆನ್ಮಾರ್ಕ್‌ಗೆ ಪ್ರಯಾಣಿಸುವ ಪ್ರಧಾನಿ ಮೋದಿ ಡೆನ್ಮಾರ್ಕ್‌ನ ಪ್ರಧಾನ ಮಂತ್ರಿ ಮೆಟ್ಟೆ ಫ್ರೆಡೆರಿಕ್ಸೆನ್‌ ಅವರ ಜೊತೆ 2ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಭೇಟಿ ವೇಳೆ ಉಭಯ ದೇಶದ ನಾಯಕರು ದ್ವಿಪಕ್ಷೀಯ ಅಂಶಗಳ ಕುರಿತಾಗಿ ಮಾತುಕತೆ ನಡೆಸಲಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಭಾರತ-ಡೆನ್ಮಾರ್ಕ್ ವ್ಯಾಪಾರ ವೇದಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮತ್ತು ಭಾರತೀಯ ವಲಸಿಗರನ್ನ ಉದ್ದೇಶಿಸಿ ಮಾತನಾಡಲಿದ್ದಾರೆ.

PM Modis Europe Visit: 65 hours, 25 meetings & 8 World leaders in PM Modis trip

ಇದೇ ವೇಳೆ 2ನೇ ಭಾರತ ನಾರ್ಡಿಕ್ ಶೃಂಗಸಭೆಯ ಸಮಯದಲ್ಲಿ ಪ್ರಧಾನ ಮಂತ್ರಿ ಇತರ ನಾರ್ಡಿಕ್ ನಾಯಕರೊಂದಿಗೆ ಸಂವಾದ ನಡೆಸಲಿದ್ದಾರೆ. ಐಸ್‌ಲ್ಯಾಂಡ್ ಪ್ರಧಾನಿ ಕ್ಯಾಟ್ರಿನ್ ಜಾಕೋಬ್ಸ್‌ಡಾಟ್ಟಿರ್, ನಾರ್ವೆಯ ಪ್ರಧಾನಿ ಜೊನಾಸ್‌ ಗಹರ್ ಸ್ಟೋರ್, ಸ್ಪೀಡನ್‌ನ ಪ್ರಧಾನಿ ಮ್ಯಾಗ್ಡಲೀನಾ ಅಂಡರ್ಸನ್‌ ಮತ್ತು ಫಿನ್‌ಲ್ಯಾಡ್‌ನ ಪ್ರಧಾನಿ ಸನ್ನಾಮರಿನ್‌ ಜೊತೆ ಮಾತುಕತೆ ನಡೆಸಲಿದ್ದಾರೆ. ಈ ಮಾತುಕತೆಯಲ್ಲಿ ಕೊರೊನಾ ನಂತರದ ಆರ್ಥಿಕ ಚೇತರಿಕೆ, ಹವಮಾನ ಬದಲಾವಣೆ, ನಾವಿನ್ಯತೆ ಮತ್ತು ತಂತ್ರಜ್ಞಾನ ನವೀಕರಿಸಬಹುದಾದ ಇಂಧನ, ಜಾಗತಿಕ ಭದ್ರತೆ ಕುರಿತು ಚರ್ಚೆ ನಡೆಸಲಿದ್ದಾರೆ.

English summary
PM Narendra Modi's Europe Visit: 65 hours, 25 meetings & 8 World leaders in PM Modi's trip. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X