ಬಿಹಾರ ಚುನಾವಣೆ ಗೆಲ್ಲಲು 'ಗಾಲ್ವಾನ್' ಯೋಧರ ಶೌರ್ಯ ಬಳಸಿದ ಮೋದಿ?
ದೆಹಲಿ, ಜೂನ್ 27: ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯನ್ನು ಗೆಲ್ಲಲು ಭಾರತೀಯ ಸೇನೆಯ ಶೌರ್ಯವನ್ನು ಪ್ರಧಾನಿ ಮೋದಿ ಅವರು ಬಳಸಿಕೊಳ್ಳುತ್ತಿದ್ದಾರೆ ಎಂದು ಶಿವ ಸೇನಾ ಪಕ್ಷ ಆರೋಪಿಸಿದೆ.
Recommended Video

ಚೀನಾ ಮತ್ತು ಭಾರತ ಘರ್ಷಣೆಗೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ್ದ ಮೋದಿ ಕೇವಲ ಒಂದು ಸಮುದಾಯದ ಸೈನಿಕರನ್ನು ಹೊಗಳಿದ್ದರು. ಈ ಮೂಲಕ ಬಿಹಾರ್ ಚುನಾವಣೆಯಲ್ಲಿ ಓಲೈಕೆ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಶಿವಸೇನಾ ದೂರಿದೆ.
ಜೂನ್ 14 ರಂದು ಲಡಾಖ್‌ನ ಗಾಲ್ವಾನ್ ಕಣಿವೆ ಗಡಿ ಪ್ರದೇಶದಲ್ಲಿ ನಡೆದ ಭಾರತ-ಚೀನಾ ಸೈನಿಕರ ಮುಖಾಮುಖಿಯಲ್ಲಿ ಭಾರತದ 20 ಯೋಧರ ಪ್ರಾಣ ಕಳೆದುಕೊಂಡಿದ್ದರು. ಈ ಪೈಕಿ ಐದು ಯೋಧರು ಬಿಹಾರ, ನಾಲ್ಕು ಯೋಧರು ಪಂಜಾಬ್, ಇಬ್ಬರು ಝಾರ್ಖಂಡ್ ಯೋಧರು ಒಳಗೊಂಡಿದ್ದರು.

ಈ ಘಟನೆ ಬಗ್ಗೆ ಪ್ರತಿಕ್ರಿಯಿಸುವ ವೇಳೆ ನರೇಂದ್ರ ಮೋದಿ ವಿಶೇಷವಾಗಿ ಬಿಹಾರ್ ಯೋಧರನ್ನು ಉಲ್ಲೇಖಿಸಿದ್ದರು. ಲಡಾಖ್ ಘಟನೆಯಲ್ಲಿ ನಿರ್ದಿಷ್ಟ ಸೇನೆ ರೆಜಿಮೆಂಟ್‌ನ ಪಾತ್ರವನ್ನು ಉಲ್ಲೇಖಿಸಿದ ಮೋದಿ 'ಜಾತಿ ಮತ್ತು ಪ್ರಾದೇಶಿಕತೆ'ಯನ್ನು ಎತ್ತಿ ತೋರಿಸಿದ್ದಾರೆ ಎಂದು ಶಿವಸೇನಾ ಟೀಕಿಸಿದೆ.
ಅಂದು ಮೋದಿ ಏನು ಹೇಳಿದ್ದರು?
ಗರಿಬ್ ಕಲ್ಯಾಣ್ ರೋಜರ್ ಅಭಿಯಾನ್ ಯೋಜನೆ ಉದ್ಘಾಟನೆ ಮಾಡಿದ್ದ ಮೋದಿ ''ಲಡಾಖ್‌ನಲ್ಲಿ ಪ್ರಾಣ ತ್ಯಾಗ ಮಾಡಿದ ನಮ್ಮ ಧೈರ್ಯಶಾಲಿಗಳ ಬಗ್ಗೆ ದೇಶ ಹೆಮ್ಮೆ ಪಡುತ್ತದೆ. ಇಂದು ನಾನು ಬಿಹಾರದ ಜನರೊಂದಿಗೆ ಮಾತನಾಡುವಾಗ, ಪ್ರತಿ ಬಿಹಾರಿಯು ಬಿಹಾರ ರೆಜಿಮೆಂಟ್‌ನ ಶೌರ್ಯದ ಬಗ್ಗೆ ಹೆಮ್ಮೆಪಡುತ್ತದೆ ಎಂದು ನಾನು ಹೇಳುತ್ತೇನೆ. ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಧೈರ್ಯಶಾಲಿಗಳಿಗೆ ನಾನು ಗೌರವ ಸಲ್ಲಿಸುತ್ತೇನೆ'' ಎಂದಿದ್ದರು.
ಈ ವಿಷಯ ಕುರಿತಾಗಿ ಶಿವಸೇನಾ ಪಕ್ಷದ ದೈನಂದಿನ ಮುಖವಾಣಿ ವರದಿ ಪ್ರಕಟ ಮಾಡಿದ್ದು ''ದೇಶವು ತನ್ನ ಗಡಿಯಲ್ಲಿ ಬಿಕ್ಕಟ್ಟನ್ನು ಎದುರಿಸಿದಾಗ, ಮಹರ್, ಮರಾಠಾ, ರಜಪೂತ್, ಸಿಖ್, ಗೂರ್ಖಾ, ಡೋಗ್ರಾ ರೆಜಿಮೆಂಟ್‌ಗಳು ಸುಮ್ಮನೆ ಕುಳಿತು ಗಡಿಯಲ್ಲಿ ತಂಬಾಕು ಬೆರೆಸಿ ಅಥವಾ ಅಗಿಯುತ್ತಿದ್ದವು? ಮೋದಿ ಅವರ ಇಂತಹ ರಾಜಕೀಯ ಕೊರೊನಾ ವೈರಸ್‌ಗಿಂತ ಅಪಾಯ'' ಎಂದು ಹೇಳಿತ್ತು.
ಈ ವರ್ಷದ ಅಂತ್ಯದಲ್ಲಿ ಬಿಹಾರ್ ಚುನಾವಣೆ ನಡೆಯಲಿದೆ.
-
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ












Click it and Unblock the Notifications