• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಳೆದ ವಾರವೇ ನಡೆದಿತ್ತು ಮೋದಿ-ಊರ್ಜಿತ್ ಪಟೇಲ್ ಭೇಟಿ!

|

ನವದೆಹಲಿ, ನವೆಂಬರ್ 13: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಸರ್ಕಾರದ ನಡುವೆ ನಡೆಯುತ್ತಿರುವ ಶೀತಲ ಯುದ್ಧದ ತರುವಾಯ ಕಳೆದ ವಾರವೇ ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಭೇಟಿಯಾಗಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ಪಿಟಿಐ ಸುದ್ದಿ ಸಂಸ್ಥೆ ಹೊರಹಾಕಿದೆ.

ನ.9 ಶುಕ್ರವಾರದಂದು ಊರ್ಜಿತ್ ಪಟೆಲ್ ಅವರನ್ನು ನರೇಂದ್ರ ಮೋದಿ ಭೇಟಿಯಾಗಿದ್ದು, ಸರ್ಕಾರ ಮತ್ತು ಆರ್ಬಿಐ ನಡುವಿನ ಹೊಂದಾಣಿಕೆಯ ಕೊರತೆಯ ವಿವಾದದ ಬಗ್ಗೆ ಚರ್ಚೆ ನಡೆದಿರಬಹುದು ಎಂದು ಊಹಿಸಲಾಗಿದೆ.

ಆರ್‌ ಬಿಐ ಗವರ್ನರ್ ಹುದ್ದೆಗೆ ನ. 19ರಂದು ಊರ್ಜಿತ್ ಪಟೇಲ್ ರಾಜೀನಾಮೆ?

ಮುಂದಿನ ಸೋಮವಾರ ಆರ್ ಬಿಐ ಬೋರ್ಡ್ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ವಿತ್ತ ಸಚಿವ ಪಿ.ಚಿದಂಬಂರಂ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ಹಿಂದೆಂದೂ ಬಳಸದ ಆರ್ ಬಿಐ ಕಾಯ್ದೆಯ ಸೆಕ್ಷನ್ 7 ಈಗಿನ ಸರಕಾರಕ್ಕೆ ಏಕೆ?

ಆರ್ ಬಿಐ ನ ಎಲ್ಲಾ ಕೆಲಸ ಕಾರ್ಯಗಳಲ್ಲೂ ಸರ್ಕಾರ ಮೂಗು ತೂರಿಸುತ್ತಿದೆ ಎಂದು ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ದೂರಿದ ನಂತರ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಆರ್ಬಿಐ ಗುರಿಯಾಗಿತ್ತು. ಈ ಕಾರಣಕ್ಕಾಗಿಯೇ ಊರ್ಜಿತ್ ಪಟೇಲ್ ತಲೆದಂಡವಾದರೂ ಅಚ್ಚರಿಯಿಲ್ಲ ಎನ್ನಲಾಗಿತ್ತು. ಆದರೆ ಈ ನಡುವೆ ಮೋದಿ ಮತ್ತು ಪಟೇಲ್ ಭೇಟಿ ಹೊಸ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

English summary
PTI news agency reported that, Prime minister Narendra Modi met RBI governor Urjit Patel in last week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X