ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಯೊಬ್ಬರನ್ನೂ ಕಳ್ಳರಂತೆ ನೋಡುತ್ತಿರುವ ಪ್ರಧಾನಿ : ರಾಹುಲ್

|
Google Oneindia Kannada News

ನವದೆಹಲಿ, ಅಕ್ಟೋಬರ್ 26: ಎಲ್ಲ ಹಣವು ಕಪ್ಪಲ್ಲ, ಎಲ್ಲ ಕಪ್ಪು ನಗದಲ್ಲ. ಪ್ರಧಾನಿ ಮೋದಿ ತಮ್ಮ ದೊಡ್ಡ ಎದೆ ಹಾಗೂ ಸಣ್ಣ ಹೃದಯದಿಂದ ಅಧಿಕಾರ ಬಳಕೆ ಮಾಡುತ್ತಿದ್ದಾರೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಜಿಎಸ್ ಟಿ ಅಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್: ರಾಹುಲ್ ಗಾಂಧಿ ವಾಗ್ದಾಳಿಜಿಎಸ್ ಟಿ ಅಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್: ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಗುರುವಾರ ಮಾತನಾಡಿದ ಅವರು, ವ್ಯಾಪಾರಸ್ಥರು ವಿಶ್ವಾಸದ ಮನಸ್ಥಿತಿಯಲ್ಲಿ ವ್ಯವಹಾರ ಮಾಡುತ್ತಾರೆ. ಆದರೆ ಈ ಸರಕಾರದ ಮೇಲಿನ ವಿಶ್ವಾಸವೇ ಸತ್ತುಹೋಗಿದೆ. ಪ್ರಧಾನಿಗಳು ಹಾಗೂ ಸರಕಾರ ಪ್ರತಿಯೊಬ್ಬರನ್ನು ಕಳ್ಳರಂತೆ ನೋಡುತ್ತಿದೆ ಎಂದರು.

Rahul Gandhi

ಒಬ್ಬರ ಮಾತನ್ನು ಕೇಳಿಸಿಕೊಳ್ಳುವ ಮೂಲಕ ವಿಶ್ವಾಸವನ್ನು ಬೆಳೆಸಬಹುದು. ಆದರೆ ಇವತ್ತು ಸರಕಾರದ ಯಾರೊಬ್ಬರು ಜನರ ನೋವು- ಸಂಕಷ್ಟವನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ವ್ಯಾಪಾರವು ಮುಳುಗಿಹೋಗುತ್ತಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಟಿವಿ ಚಾನಲ್ ಗಳಿಗೆ ಹೋಗಿ ಎಲ್ಲವೂ ಸರಿಯಾಗಿದೆ ಎಂದು ಹೇಳಿಕೊಂಡು ಬರುತ್ತಿದ್ದಾರೆ ಎಂದು ಟೀಕಿಸಿದರು.

ಪ್ರಧಾನಿಗಳು ಮೇಲಿಂದ ಮೇಲೆ ಹಾರಿಸಿದ ಎರಡು ಗುಂಡು (ಅಪನಗದೀಕರಣ, ಜಿಎಸ್ ಟಿ) ಗುರಿ ತಲುಪಿ, ನೆಲ ಕಚ್ಚುವಂತೆ ಮಾಡಿದವು. ನಮ್ಮ ಆರ್ಥಿಕತೆ ಬುಡಮೇಲಾಯಿತು ಎಂದು ರಾಹುಲ್ ಟೀಕಿಸಿದರು.

ಮುಂದಿನ ಎಲ್ಲಾ ಚುನಾವಣೆಗೆ ರಾಹುಲ್ ನೇತೃತ್ವ : ಖರ್ಗೆಮುಂದಿನ ಎಲ್ಲಾ ಚುನಾವಣೆಗೆ ರಾಹುಲ್ ನೇತೃತ್ವ : ಖರ್ಗೆ

ಇನ್ನು ಜಾಗತಿಕ ಮಟ್ಟದಲ್ಲಿ ಭಾರತವನ್ನು ಅಹಿಂಸಾ ತತ್ವದಲ್ಲಿ ನಂಬಿಕೆಯಿರುವ ದೇಶ ಎಂದು ನಂಬಲಾಗಿದೆ. ಆದರೆ ತಾಜ್ ಮಹಲ್ ನ ಮೂಲದ ಬಗ್ಗೆ ವಿಪರೀತ ಚರ್ಚೆಯಲ್ಲಿ ಮುಳುಗಿರುವ ನಮ್ಮನ್ನು ನೋಡಿ ಈಗ ನಗುವಂತಾಗಿದೆ ಎಂದರು.

ಮದುವೆ ಯಾವಾಗ ಮಾಡಿಕೊಳ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ಅದು ಯಾವಾಗ ಆಗಬೇಕೋ ಆಗ ಆಗುತ್ತದೆ. ನನಗೆ ಗುರಿ ಮುಟ್ಟುವುದರಲ್ಲಿ ಮಾತ್ರ ನಂಬಿಕೆ ಎಂದಿದ್ದಾರೆ.

English summary
PM Narendra Modi and government are convinced every single person is a thief, said by AICC vice president Rahul Gandhi in New Delhi on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X