ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಸುದ್ದಿಗೆ ಬಂದ ನ್ಯಾಯಾಂಗ: ಸಿಜೆಐ ಅಧಿಕಾರ ಪ್ರಶ್ನಿಸಿ ಪಿಐಎಲ್

|
Google Oneindia Kannada News

ನವದೆಹಲಿ, ಏಪ್ರಿಲ್ 7: ಪ್ರಕರಣಗಳನ್ನು ಇತರೆ ನ್ಯಾಯಮೂರ್ತಿಗಳಿಗೆ ಹಂಚುವಾಗ ಇರುವ ಮಾನದಂಡ ಮತ್ತು ಈ ಹಂಚಿಕೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಇರುವ ಆಡಳಿತಾತ್ಮಕ ಅಧಿಕಾರದ ಕುರಿತು ಸ್ಪಷ್ಟನೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಹಿರಿಯ ವಕೀಲ ಶಾಂತಿ ಭೂಷಣ್ ಅವರ ಪರವಾಗಿ ಅವರ ಮಗ ಪ್ರಶಾಂತ್ ಭೂಷಣ್ ಈ ಅರ್ಜಿ ಸಲ್ಲಿಸಿದ್ದು, ಕಳೆದ ಜನವರಿಯಲ್ಲಿ ನ್ಯಾಯಾಂಗ ವ್ಯವಸ್ಥೆಯ ವಿರುದ್ದಧ ಬಂಡಾಯವೆದ್ದಿದ್ದ ನಾಲ್ವರು ನ್ಯಾಯಮೂರ್ತಿಗಳ ಪ್ರಕರಣವನ್ನು ಇದು ನೆನೆಪಿಸಿದೆ.

ಬಂಡಾಯವೆದ್ದಿದ್ದ ಜಡ್ಜ್ ಗಳಿಗೆ ಸೆಡ್ಡು ಹೊಡೆದ ದೀಪಕ್ ಮಿಶ್ರಾ!ಬಂಡಾಯವೆದ್ದಿದ್ದ ಜಡ್ಜ್ ಗಳಿಗೆ ಸೆಡ್ಡು ಹೊಡೆದ ದೀಪಕ್ ಮಿಶ್ರಾ!

PIL in Supreme Court on CJI’s power

ಮುಖ್ಯ ನ್ಯಾಯಮೂರ್ತಿಗಳು ಪ್ರಕರಣಗಳನ್ನು ಹಂಚುವಾಗ ತಾರತಮ್ಯ ಮಾಡುವಂತಿಲ್ಲ, ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಇರುವ ಘನತೆಯನ್ನು ಕಾಯ್ದುಕೊಳ್ಳಬೇಕಿದೆ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣಗಳ ಹಂಚಿಕೆಯ ವಿಷಯದಲ್ಲಿ ಪರಮಾಧಿಕಾರ ಪಡದೆದಿದ್ದಾರೆ ಎಂಬಂತಿಲ್ಲ. ಈ ಕುರಿತು ಅವರೂ ಪ್ರಶ್ನಾರ್ಹರು ಎಂದು ಶಾಂತಿ ಭೂಷಣ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಪದೇ ಪದೇ ಸಂಭವಿಸುತ್ತಿರುವ ಇಂಥ ಅಹಿತಕರ ಬೆಳವಣಿಗೆಗಳು ಇರಿಸುಮುರಿಸುಂಟುಮಾಡಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಕುರಿತು ಹಲವು ಹಿರಿಯ ವಕೀಲರಲ್ಲಿ ಅಸಮಾಧಾನವಿದೆ ಎಂಬ ವದಂತಿಗೆ ಇದು ಇಂಬು ನೀಡಿದೆ.

English summary
Senior advocate and former law minister Shanti Bhushan on April 6th approached the Supreme Court challenging the power of the Chief Justice of India as the “master of roster” to allocate work to different benches of the court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X