ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಸರ್ಕಾರಕ್ಕೆ ನೇರವಾಗಿ ಲಸಿಕೆ ಮಾರುವುದಿಲ್ಲ ಎಂದ ವಿದೇಶಿ ಕಂಪನಿ

|
Google Oneindia Kannada News

ನವದೆಹಲಿ, ಮೇ 24: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವುದಕ್ಕೆ ಲಸಿಕೆ ವಿತರಣೆಯೊಂದೇ ಸೂಕ್ತ ಮಾರ್ಗ ಎನ್ನುವುದನ್ನು ಈಗಾಗಲೇ ಕಂಡುಕೊಳ್ಳಲಾಗಿದೆ. ಕೇಂದ್ರ ಸರ್ಕಾರವು ಲಸಿಕೆ ವಿತರಣೆಯಲ್ಲಿ ತಾರತಮ್ಯ ಎಸಗುತ್ತಿದ್ದು, ಲಸಿಕೆ ಕೊರತೆ ಸೃಷ್ಟಿಯಾಗಿದೆ.

ವಿದೇಶಗಳಿಂದ ನೇರವಾಗಿ ಲಸಿಕೆ ಆಮದು ಮಾಡಿಕೊಳ್ಳುವ ಮೂಲಕ ಕೊವಿಡ್-19 ಲಸಿಕೆ ಕೊರತೆ ನಿವಾರಿಸಲು ಮುಂದಾದ ದೆಹಲಿ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಯುನೈಟೆಡ್ ಸ್ಟೇಟ್ಸ್ ಮೂಲದ ಫೈಜರ್ ಮತ್ತು ಮಾಡರ್ನಾ ಕಂಪನಿಗಳು ನೇರವಾಗಿ ರಾಜ್ಯ ಸರ್ಕಾರಕ್ಕೆ ಲಸಿಕೆ ರಫ್ತು ಮಾಡಲು ತಿರಸ್ಕರಿಸಿವೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ಕೊರೊನಾವೈರಸ್ ಕಾಲದಲ್ಲಿ ಕೈ ಚೆಲ್ಲಿದರಾ ಪ್ರಧಾನಮಂತ್ರಿ ಮೋದಿ!?ಕೊರೊನಾವೈರಸ್ ಕಾಲದಲ್ಲಿ ಕೈ ಚೆಲ್ಲಿದರಾ ಪ್ರಧಾನಮಂತ್ರಿ ಮೋದಿ!?

ನಾವು ಫೈಜರ್ ಮತ್ತು ಮಾಡರ್ನಾ ಕಂಪನಿಗಳ ಜೊತೆ ಕೊರೊನಾವೈರಸ್ ಲಸಿಕೆಗೆ ಸಂಬಂಧಿಸಿದಂತೆ ಪ್ರಸ್ತಾಪಿಸಿದ್ದೆವು. ಆದರೆ ಎರಡೂ ಲಸಿಕೆ ಉತ್ಪಾದಕ ಕಂಪನಿಗಳು ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು, ನೇರವಾಗಿ ಕೇಂದ್ರ ಸರ್ಕಾರದ ಜೊತೆಗೆ ವಹಿವಾಟು ನಡೆಸುವುದಾಗಿ ಹೇಳುತ್ತಿವೆ ಎಂದು ಕೇಜ್ರಿವಾಲ್ ಸ್ಪಷ್ಟಪಡಿಸಿದರು.

 Pfizer, Moderna Companies Refused To Sell Vaccines Directly To Delhi Govt, Says CM Kejriwal

ದೆಹಲಿ ಸರ್ಕಾರಕ್ಕೆ ಕೇಂದ್ರ ನೀಡಿರುವ ಲಸಿಕೆ ಎಷ್ಟು?:

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹರಡುವಿಕೆ ವೇಗಕ್ಕೆ ಕಡಿವಾಣ ಹಾಕಲು ದೆಹಲಿಯಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಿಸಬೇಕಿದೆ. ಕೇಂದ್ರ ಸರ್ಕಾರವು ಅಗತ್ಯಕ್ಕೆ ತಕ್ಕಂತೆ ಕೊವಿಡ್-19 ಲಸಿಕೆಯನ್ನು ನೀಡುತ್ತಿಲ್ಲ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು 80 ಲಕ್ಷ ಕೊವಿಡ್-19 ಲಸಿಕೆಯ ಅಗತ್ಯವಿದೆ. ಆದರೆ ಕಳೆದ ಮೇ ತಿಂಗಳಿನಲ್ಲಿ ಕೇಂದ್ರ ಸರ್ಕಾರದಿಂದ 16 ಲಕ್ಷ ಡೋಸ್ ಲಸಿಕೆ ನೀಡಲಾಗಿದ್ದು, ಜೂನ್ ತಿಂಗಳಿಗಾಗಿ ಕೇವಲ 8 ಲಕ್ಷ ಡೋಸ್ ಲಸಿಕೆಯನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ಪಂಜಾಬ್ ಸರ್ಕಾರದ ಪ್ರಯತ್ನ ವಿಫಲ:

ಕೇಂದ್ರ ಸರ್ಕಾರದ ಎದುರಿಗೆ ಅಂಗಲಾಚುವ ಬದಲು ವಿದೇಶಿ ಕಂಪನಿಗಳಿಂದ ನೇರವಾಗಿ ರಾಜ್ಯಕ್ಕೆ ಕೊರೊನಾವೈರಸ್ ಲಸಿಕೆಯನ್ನು ಆಮದು ಮಾಡಿಕೊಳ್ಳುವ ನಿಟ್ಟಿನಲ್ಲಿ ಪಂಜಾಬ್ ಸರ್ಕಾರ ಹೆಜ್ಜೆ ಇಟ್ಟಿತ್ತು. ಮಾಡರ್ನಾ, ಫೈಜರ್, ಸ್ಪುಟ್ನಿಕ್-ವಿ, ಜಾನ್ಸನ್ ಆಂಡ್ ಜಾನ್ಸನ್ ಕಂಪನಿಗಳ ಜೊತೆಗೆ ಕೊವಿಡ್-19 ಲಸಿಕೆಯನ್ನು ಖರೀದಿಸುವ ಕುರಿತು ಪಂಜಾಬ್ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ಈ ಪೈಕಿ ಮಾಡರ್ನಾ ಕಂಪನಿಯು ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿದೆ. ವಿದೇಶಿ ಕಂಪನಿಯು ರಾಜ್ಯ ಸರ್ಕಾರಗಳ ಜೊತೆಗೆ ಯಾವುದೇ ರೀತಿ ವ್ಯವಹಾರ ಮತ್ತು ಒಪ್ಪಂದವನ್ನು ಇಟ್ಟುಕೊಳ್ಳುವುದಿಲ್ಲ. ಕೇಂದ್ರ ಸರ್ಕಾರದ ಜೊತೆಗೆ ನೇರವಾಗಿ ವ್ಯವಹಿಸುವುದಾಗಿ ಕಂಪನಿ ತಿಳಿಸಿದೆ.

English summary
Pfizer, Moderna Companies Refused To Sell Vaccines Directly To Delhi Govt, Says CM Arvind Kejriwal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X