ಸಿಎಎ ವಿರುದ್ಧ ಪ್ರತಿಭಟನೆಗೆ ಪಿಎಫ್‌ಐ ಹಣ ಬಳಕೆ: ಇಡಿ ತನಿಖೆ

ನವದೆಹಲಿ, ಜನವರಿ 28: 'ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಗೆ ಪಿಎಫ್‌ಐ ಸಂಘಟನೆ ಹಣ ಒದಗಿಸಿತ್ತು' ಎಂದು ಜಾರಿ ನಿರ್ದೇಶನಾಲಯ (ಇಡಿ) ಹೇಳಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದೆ.

ಪೌರತ್ವ ಕಾಯ್ದೆಯ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆದಿದ್ದರು. ಹಲವೆಡೆ ಪ್ರತಿಭಟನೆಗಳು ಹಿಂಸಾತ್ಮಕ ರೂಪ ತಳೆದಿದ್ದವು. ಈ ಪ್ರತಿಭಟನೆಗಳಿಗೂ ಪಿಎಫ್‌ಐ ಸಂಘಟನೆಗೂ ಹಣಕಾಸು ಸಂಬಂಧ ಇದೆ ಎಂದು ಇಡಿ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಪೌರತ್ವ ಮಸೂದೆಗೆ ಸಂಸತ್‌ನಲ್ಲಿ ಅನುಮೋದನೆ ಸಿಕ್ಕ ಬಳಿಕ ಉತ್ತರ ಪ್ರದೇಶದಲ್ಲಿ ಹಲವು ಬ್ಯಾಂಕ್‌ ಖಾತೆಗಳಿಗೆ 120 ಕೋಟಿ ಹಣ ವರ್ಗಾವಣೆ ಆಗಿದೆ ಎಂದು ಇಡಿ ಹೇಳಿದೆ. ಈ ಬಗ್ಗೆ ಗೃಹ ಇಲಾಖೆಗೆ ಪತ್ರವೊಂದನ್ನು ಇಡಿ ರವಾನಿಸಿದೆ.

PFI Funded Anti CAA Protests: ED

ಮಸೂದೆ ಅಂಗೀಕಾರದ ನಂತರ 37 ಖಾತೆಗಳು ಪಿಎಫ್‌ಐ ಸಂಘಟನೆ ಹಾಗೂ ಅದರ ಸಹೋದರ ಸಂಸ್ಥೆಗಳು ಹಾಗೂ ಪಿಎಫ್‌ಐ ಸಂಬಂಧಿತ ವ್ಯಕ್ತಿಗಳ ಹೆಸರಿನಲ್ಲಿ ತೆರೆಯಲಾಗಿದೆ ಎಂದು ಇಡಿ ಹೇಳಿದೆ.

120 ಕೋಟಿ ಹಣವನ್ನು 73 ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದ್ದು, ಕೆಲವೇ ದಿನಗಳಲ್ಲಿ ಈ ಎಲ್ಲಾ ಬ್ಯಾಂಕ್‌ ಖಾತೆಗಳಿಂದ ಬಹುಪಾಲ ಹಣವನ್ನು ಖರ್ಚು ಮಾಡಲಾಗಿದೆ ಎಂದು ಇಡಿ ತನ್ನ ವರದಿಯಲ್ಲಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+