ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್‌ ಬೆಲೆ ಮತ್ತೆ 1.63 ರೂ. ಏರಿಕೆ

|
Google Oneindia Kannada News

petrol
ನವದೆಹಲಿ, ಸೆ.14 : ಪೆಟ್ರೋಲ್‌ ಬೆಲೆಯನ್ನು ಇಳಿಸಲಾಗುತ್ತದೆ ಎಂದು ಹೇಳಿದ್ದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಲೀಟರ್ 1.63 ರೂ. ಏರಿಕೆ ಮಾಡುವ ಮೂಲಕ ಜನರಿಗೆ ಶಾಕ್ ನೀಡಿವೆ. ಆದರೆ, ಆದರೆ ಮಾಸಾಂತ್ಯದ ವೇಳೆ ದರ ಇಳಿಕೆ ಮಾಡುವುದಾಗಿ ಭರವಸೆ ನೀಡಿವೆ.

ಪೆಟ್ರೋಲ್ ಬೆಲೆ 1.63 ರೂ. ಏರಿಕೆಯಾಗಿದ್ದು, ಶುಕ್ರವಾರ ಮಧ್ಯರಾತ್ರಿಯಿಂದ ನೂತನ ದರ ಜಾರಿಗೆ ಬರಲಿದೆ. ಬೆಲೆ ಏರಿಕೆ ಪ್ರಮಾಣವು 1.63 ರೂ. ಆದರೂ ರಾಜ್ಯಗಳ ತೆರಿಗೆ ಸೇರಿದಂತೆ ಹೆಚ್ಚಳದ ಪ್ರಮಾಣದ ಒಟ್ಟು ಮೊತ್ತ ಸುಮಾರು 2 ರೂ. ಆಗಲಿದೆ.

ಇದರಿಂದಾಗಿ ಜೂನ್‌ ತಿಂಗಳ ನಂತರ ಒಟ್ಟಾರೆ 7 ಬಾರಿ ಪೆಟ್ರೋಲ್ ಬೆಲೆ ಏರಿಕೆ ಯಾದಂತಾಗಿದೆ. ಜೂನ್‌ನಲ್ಲಿ ಸುಮಾರು 69 ರೂ. ಇದ್ದ ಪೆಟ್ರೋಲ್‌ ದರ, ಈ ಏರಿಕೆಯಿಂದಾಗಿ ಸುಮಾರು 85 ರೂ. ಸನಿಹಕ್ಕೆ ಬಂದಂತಾಗಿದ್ದು ಸುಮಾರು 4 ತಿಂಗಳಲ್ಲಿ 16 ರೂ. ಏರಿದಂತಾಗಿದೆ.

ರೂಪಾಯಿ ಮೌಲ್ಯ ಈ ತಿಂಗಳು ಭಾರಿ ಪ್ರಮಾಣದಲ್ಲಿ ಕುಸಿದ ಕಾರಣ ಬೆಲೆ ಏರಿಸುವುದು ಅನಿವಾರ್ಯವಾಗಿತ್ತು ಎಂದು ತೈಲ ಕಂಪನಿಗಳು ಹೇಳಿವೆ. ಈಗ ರೂಪಾಯಿ ಮೌಲ್ಯ ಸುಧಾರಿಸಿದ್ದು, ಇದರ ಲಾಭದಿಂದ ತಿಂಗಳ ಅಂತ್ಯಕ್ಕೆ ಬೆಲೆಯನ್ನು ಇಳಿಸಲಾಗುವುದು ಎಂದು ಇಂಡಿಯನ್‌ ಆಯಿಲ್‌ ಅಧಿಕಾರಿಗಳು ಹೇಳಿದ್ದಾರೆ.

ರೂಪಾಯಿ ಅಪಮೌಲ್ಯ ಮತ್ತು ಕಚ್ಚಾ ತೈಲಬೆಲೆ ಅಂತಾರಾಷ್ಟ್ರೀಯ ಪೇಟೆಯಲ್ಲಿ ಏರಿದ್ದರಿಂದ ಕಳೆದ ಮಾಸಾಂತ್ಯಕ್ಕಷ್ಟೇ ಬೆಲೆಯು 2.35 ರೂ. ಏರಿಕೆಯಾಗಿತ್ತು. ಆದರೆ ಈಗ ಕಚ್ಚಾತೈಲ ಬೆಲೆ ಮೊದಲಿಗಿಂತ ಅಲ್ಪ ಸುಧಾರಿಸಿದೆ.

ಪಾತಾಳಕ್ಕೆ ಕುಸಿದಿದ್ದ ರೂಪಾಯಿ ಮೌಲ್ಯ ಚೇತರಿಸಿದ್ದರೂ, ಜನತೆಗೆ ಬೆಲೆ ಏರಿಕೆ ಆಘಾತ ಬಂದೊದಗಿದೆ. ವಾಡಿಕೆಯಂತೆ ಬೆಲೆ ಪರಿಷ್ಕರಣೆಯಾಗಬೇಕಿದ್ದ 15ನೇ ತಾರೀಖೀನ ಬದಲು 14ನೇ ದಿನಾಂಕದಿಂದಲೇ ಜಾರಿಗೆ ಬರುವಂತೆ ದರ ಏರಿಸಲಾಗಿದೆ.

ಅಂದಹಾಗೆ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 83.35 ರೂ.ಗಳಾಗಿದೆ. ಪರಿಷ್ಕರಣೆಗೆ ಮೊದಲು 81.31 ಇತ್ತು. ನಗರದಲ್ಲಿ ಪೆಟ್ರೋಲ್ ಬೆಲೆ 2.14 ರೂ. ನಷ್ಟು ಏರಿಕೆಯಾದಂತಾಗಿದೆ.

English summary
Petrol prices were on Friday, September 13 hiked by Rs 1.63 per liter. this is the seventh increase since June. on the back of rising oil rates and the falling rupee prices hiked. The increase excludes local sales tax or VAT and will come into effect from Friday midnight said oil firms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X