• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಯಲ್ಲಿ ಪೆಟ್ರೋಲ್ , ಡೀಸೆಲ್ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ

|

ನವದೆಹಲಿ, ಮೇ 5: ಮದ್ಯದ ಮೇಲೆ ಶೇ.70ರಷ್ಟು ವಿಶೇಷ ಕೊರೊನಾ ಸುಂಕ ಹೆಚ್ಚಿಸಿದ ಬೆನ್ನಲ್ಲೇ ದೆಹಲಿ ಸರ್ಕಾರ ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಮೌಲ್ಯ ವರ್ಧಿತ ತೆರಿಗೆ ಹೆಚ್ಚಿಸಿದೆ. ಡೀಸೆಲ್ ಬೆಲೆ ಲೀಟರ್​ಗೆ 7.1 ರೂಪಾಯಿಯಷ್ಟು ಹೆಚ್ಚಳವಾಗಿದೆ. ಪೆಟ್ರೋಲ್ ಬೆಲೆ 1.67 ರೂಪಾಯಿ ಹೆಚ್ಚಳವಾಗಿದೆ.

ಆದರೆ, ಕೊರೊನಾ ವಿರುದ್ಧದ ಹೋರಾಟಕ್ಕೆ ಬೇಕಾಗಿರುವ ಹಣವನ್ನು ಸೇರಿಸಲು ವ್ಯಾಟ್ ಹೆಚ್ಚಿಸಲಾಗಿದೆ. ಇದು ತಾತ್ಕಾಲಿಕ ಮಾತ್ರ. ಸರ್ಕಾರಕ್ಕೆ ಅಗತ್ಯ ಆದಾಯ ಬರತೊಡಗಿದರೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ತೆರಿಗೆಯನ್ನು ಇಳಿಸಲಾಗುವುದು ಎಂದು ದೆಹಲಿ ಸರ್ಕಾರ ತಿಳಿಸಿದೆ.

ಶಾಕಿಂಗ್ ಸುದ್ದಿ: ಪೆಟ್ರೋಲ್ ದರದಲ್ಲಿ 10, ಡೀಸೆಲ್ 13 ರೂಪಾಯಿ ಏರಿಕೆ!

ವ್ಯಾಟ್ ಹೇರಿಕೆಯಿಂದಾಗಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 71.26 ರೂಪಾಯಿ ತಲುಪಿದೆ. 62.29 ರೂಪಾಯಿ ಇದ್ದ ಡೀಸೆಲ್ ಬೆಲೆ 69.39 ರೂಪಾಯಿ ಮುಟ್ಟಿದೆ. ದೆಹಲಿಯಲ್ಲಿ ಮಾತ್ರ ವ್ಯಾಟ್ ಹೆಚ್ಚಳದಿಂದ ಆಗಿರುವ ಬದಲಾವಣೆಯಾಗಿದ್ದು, ದೇಶದ ಬೇರೆಡೆ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಯಾವುದೇ ವ್ಯತ್ಯಯವಾಗಿಲ್ಲ.

ದೆಹಲಿಯಲ್ಲಿ ಈವರೆಗೂ ಬೇರೆ ನಗರಗಳಿಗೆ ಹೋಲಿಸಿದರೆ ವ್ಯಾಟ್ ತೆರಿಗೆ ಕಡಿಮೆ ಇತ್ತು. ಇದರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳೂ ಕಡಿಮೆ ಇದ್ದವು. ಡೀಸೆಲ್ ಬೆಲೆಯಲ್ಲಿ ದೆಹಲಿ ಬೇರೆಲ್ಲಾ ನಗರಗಳಿಗಿಂತ ದುಬಾರಿಯಾದಂತಾಗಿದೆ

ಇದು ದೆಹಲಿಯಲ್ಲಿ ಮಾತ್ರ ವ್ಯಾಟ್ ಹೆಚ್ಚಳದಿಂದ ಆಗಿರುವ ಬದಲಾವಣೆ. ದೇಶದ ಬೇರೆಡೆ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 73.55 ರೂಪಾಯಿಯಲ್ಲೇ ಮುಂದುವರಿದಿದೆ. ಡೀಸೆಲ್ ಬೆಲೆ 65.96 ರೂಪಾಯಿ ಇದೆ.

English summary
Petrol and diesel became more expensive in the national capital on Tuesday, after the Delhi government hiked the value-added tax (VAT) on auto fuels. The increase in fuel prices was to the tune of Rs 1.67 for petrol and Rs 7.10 per litre for diesel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X