ದೇಶದ ಒಳಿತಿಗಾಗಿ ಅನ್ನದಾತರ ಶಾಂತಿಯುತ ಹೋರಾಟ: ರಾಹುಲ್ ಗಾಂಧಿ
ನವದೆಹಲಿ,ಫೆಬ್ರವರಿ 06: ದೇಶದ ಒಳಿತಿಗಾಗಿ ರೈತರು ಶಾಂತಿಯುತ ಹೋರಾಟ ಮಾಡುತ್ತಿದ್ದಾರೆ, ಈ ಮೂರು ಕಾನೂನುಗಳು ಕೇವಲ ರೈತರಿಗೆ ಮಾತ್ರವಲ್ಲ ಇಡೀ ದೇಶದ ಜನತೆಗೆ ಇದರಿಂದ ಅಪಾಯವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಮೊದಲು ಕೇಂದ್ರ ಸರ್ಕಾರದ ಬಜೆಟ್ ವಿರುದ್ಧವೂ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.ನರೇಂದ್ರ ಮೋದಿ ಸರ್ಕಾರವು ದೇಶ ಹಾಗೂ ಮನೆಯನ್ನು ಹಾಳು ಮಾಡಿದೆ ಎಂದು ಆರೋಪಿಸಿದರು.
ಬಜೆಟ್ ಬಳಿಕ ಇಂಧನ ಬೆಲೆ ಹಾಗೂ ಎಲ್‌ಪಿಜಿ ಬೆಲೆ ಏರಿಕೆಯಾಗಿದೆ ಎಂಬುದನ್ನು ರಾಹುಲ್ ಗಾಂಧಿ ಹೇಳಿದರು.

ದೇಶದ ಹಿತಕ್ಕಾಗಿ ರೈತರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ, ಈ ಮೂರು ಕೃಷಿ ಕಾಯ್ದೆಗಳು ರೈತರು ಹಾಗೂ ಕಾರ್ಮಿಕರಷ್ಟೇ ಅಲ್ಲದೆ ದೇಶಕ್ಕೆ ಅಪಾಯಕಾರಿಯಾಗಿದೆ ಎಂದು ಹೇಳಿದರು.
ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರು ಫೆಬ್ರವರಿ 6ರಂದು ದೇಶವ್ಯಾಪಿ ಛಕ್ಕಾ ಜಾಮ್‌ಗೆ ಕರೆ ನೀಡಿದ್ದಾರೆ. ಅಲ್ಲದೆ ಹೆದ್ದಾರಿಗಳಲ್ಲಿ ವಾಹನಗಳನ್ನು ತಡೆಗಟ್ಟುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಕೃಷಿ ಕಾಯ್ದೆಗಳು ಕೇವಲ ರೈತರಿಗೆ ಮಾತ್ರವಲ್ಲದೆ ಇಡೀ ದೇಶಕ್ಕೆ ಮಾರಕವಾದದ್ದು ಎಂದು ಅವರು ಒತ್ತಿ ಹೇಳಿದ್ದಾರೆ.












Click it and Unblock the Notifications