Winter Session Day 6 Roundup:ಕಲಾಪದ ಪ್ರಮುಖಾಂಶಗಳು
ನವದೆಹಲಿ, ಡಿಸೆಂಬರ್ 06: ಸಂಸತ್ ಚಳಿಗಾಲದ ಅಧಿವೇಶನ ಆರನೇ ದಿನಕ್ಕೆ ಕಾಲಿಟ್ಟಿದೆ. ಇಂದೂ ಕೂಡ 12 ರಾಜ್ಯಸಭಾ ಸಂಸದರ ಅಮಾನತು ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ಮುಂದುವರೆಯಿತು.
ಇನ್ನು ಲೋಕಸಭೆಯಲ್ಲಿ, ನಾಗಾಲ್ಯಾಂಡ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ದಂಗೆ-ವಿರೋಧಿ ಕಾರ್ಯಾಚರಣೆಯಲ್ಲಿ ನಾಗರಿಕರ ಹತ್ಯೆ ಖಂಡಿಸಲಾಯಿತು ಹಾಗೂ ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಲಾಯಿತು.
ನಾಗಾಲ್ಯಾಂಡ್‌ನಲ್ಲಿ ಜಾರಿಗೊಳಿಸಲಾದ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ ರದ್ದುಗೊಳಿಸುವಂತೆ ಒತ್ತಾಯಿಸಲಾಯಿತು.

ನಾಗಾಲ್ಯಾಂಡ್ ಘಟನೆ ಸದನದಲ್ಲಿ ಅಮಿತ್ ಶಾ ಮಾತು: ನಾಗಾಲ್ಯಾಂಡ್‌ನಲ್ಲಿ ಭದ್ರತಾ ಪಡೆ ನಾಗರಿಕರ ಮೇಲೆ ನಡೆಸಿದ ದಾಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಷಾದ ವ್ಯಕ್ತಪಡಿಸಿದ್ದಾರೆ. ಭದ್ರತಾ ಪಡೆಯ ದಾಳಿಗೆ 14 ನಾಗರಿಕರ ಹತ್ಯೆ ಖಂಡಿಸಿ ವಿಪಕ್ಷಗಳು ಇಂದು ಸಂಸತ್ನಲ್ಲಿ ಪ್ರತಿಭಟನೆ ನಡೆಸಿದ್ದು, ಈ ಪ್ರಕರಣ ಸಂಬಂಧ ಕೇಂದ್ರ ಗೃಹ ಸಚಿವರು ಹೇಳಿಕೆ ನೀಡಬೇಕು ಎಂದು ಪಟ್ಟು ಹಿಡಿದರು.
ಈ ಹಿನ್ನಲೆ ಕೆಲ ಸಮಯ ಗದ್ಧಲದ ವಾತಾವರಣ ನಿರ್ಮಾಣವಾಗಿ ಸ್ಪೀಕರ್ ಅವರು ಸದನ ಮುಂದೂಡಿದ್ದು. ಮಧ್ಯಾಹ್ನದ ಬಳಿಕ ಆರಂಭದಾದ ಸದನದಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಘಟನೆ ಕುರಿತು ಬೇಸರ ವ್ಯಕ್ತಪಡಿಸಿದ್ದು, ರಾಜ್ಯಸಭೆಯಲ್ಲೂ ಈ ಕುರಿತು ಮಾತನಾಡಲಿದ್ದಾರೆ.
ತಿಂಗಳೊಳಗೆ ವರದಿ: ಸರ್ಕಾರವು ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತದೆ. ಸತ್ತವರಿಗೆ ಸಂತಾಪ ವ್ಯಕ್ತಪಡಿಸಿದ ಅವರು, ಇದೊಂದು ಅಚಾತುರ್ಯದ ಘಟನೆಯಾಗಿದೆ. ಈ ಕುರಿತು SIT ರಚಿಸಲಾಗಿದೆ. ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ವರದಿ ನೀಡುವಂತೆ ನಿರ್ದೇಶಿಸಲಾಗಿದೆ. ನಾಗಾಲ್ಯಾಂಡ್‌ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದರೂ ನಿಯಂತ್ರಣದಲ್ಲಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಎಲ್ಲಾ ಸಂಸ್ಥೆಗಳು ಖಚಿತಪಡಿಸಿಕೊಳ್ಳಬೇಕು ಎಂದರು
ಸಚಿವ ಅಮಿತ್ ಶಾ ಹೇಳಿಕ ಬಳಿಕವೂ ವಿರೋಧ ಪಕ್ಷದ ಸಂಸದರು ಪ್ರತಿಭಟನೆ ನಡೆಸಿದ ಘೋಷಣೆ ಕೂಗಿದರು. ಜೊತೆಗೆ ಈ ವಿಷಯದ ಕುರಿತು ವಿವರವಾದ ಚರ್ಚೆಗೆ ಬೇಡಿಕೆ ಇರಿಸಿದರು. ಅಲ್ಲದೇ, ಈ ವಿಚಾರ ಚರ್ಚೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಜರಿರಬೇಕೆಂದು ಕಾಂಗ್ರೆಸ್ ಕೂಡ ಒತ್ತಾಯಿಸಿತ್ತು. ಆದರೆ ಪ್ರಧಾನಿ ಮೋದಿ ಅವರು ಮಾತ್ರ ಅಧಿವೇಶನದಿಂದ ಅಂತರ ಕಾಯ್ದುಕೊಂಡರು.
ಘಟನೆ ಕುರಿತು ಪ್ರಧಾನಿ ಚರ್ಚೆ: ನಾಗಾಲ್ಯಾಂಡ್ ಘಟನೆ ಬಳಿಕ ಇಂದು ಬೆಳಿಗ್ಗೆ ಪ್ರಧಾನಿಯವರು ತಮ್ಮ ಸಂಪುಟದ ಹಿರಿಯ ಸದಸ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅಮಿತ್ ಶಾ ಮತ್ತು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹಲವು ನಾಯಕರ ಜೊತೆ ಪರಿಸ್ಥಿತಿ ಮತ್ತು ಕೇಂದ್ರದ ಪ್ರತಿಕ್ರಿಯೆಯನ್ನು ಚರ್ಚಿಸಿದರು. ನಾಗಾಲ್ಯಾಂಡ್ ಮತ್ತು ಮೇಘಾಲಯ ಮುಖ್ಯಮಂತ್ರಿಗಳು ಎಎಫ್‌ಎಸ್‌ಪಿಎ ರದ್ದುಗೊಳಿಸುವುದು ಸೇರಿದಂತೆ ಬಲವಾದ ಬೇಡಿಕೆಗಳ ಮಧ್ಯೆ ನಾಗರಿಕರ ಸಾವಿನ ಕುರಿತು ಕೇಂದ್ರದ ಮೇಲೆ ದಾಳಿ ಮಾಡಲಾಗಿದೆ.ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ವೈರಸ್ ಹರಡುವ ವೇಗಕ್ಕೆ ತಡೆ ಒಡ್ಡುತ್ತದೆ ಎನ್ನಲಾಗಿದೆ.
ಎನ್‌ಡಿಪಿಎಸ್ ಕಾಯ್ದೆ: ಎನ್‌ಡಿಪಿಎಸ್ ಕಾಯ್ದೆಯಲ್ಲಿನ ಕರಡು ದೋಷ ಸರಿಪಡಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು.
ಎನ್‌ಡಿಪಿಎಸ್ ಕಾಯ್ದೆ ಜಾರಿಗೆ ಬರುವ ಮೊದಲು ದೇಶದಲ್ಲಿ ಓಪಿಎಂ ಆಕ್ಟ್ 1878 ಜಾರಿಯಲ್ಲಿತ್ತು. ಜೊತೆಗೆ ಡೇಂಜರಸ್ ಡ್ರಗ್ಸ್ ಆಕ್ಟ್ ಹಾಗೂ ಅಬಕಾರಿ ಕಾಯ್ದೆಗಳು ಜಾರಿಯಲ್ಲಿದ್ದವು. ಡ್ರಗ್ಸ್ ಮಾರಾಟ, ಸೇವನೆ ವಿರುದ್ಧ ಈ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಾಗುತ್ತಿದ್ದವು. ಮಾದಕ ವ್ಯಸನದ ಹಾವಳಿ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ಇದನ್ನು ಕಟ್ಟುನಿಟ್ಟಾಗಿ ನಿಯಂತ್ರಣ ಮಾಡಲು ಪ್ರಬಲ ಕಾನೂನಿನ ಅವಷ್ಯಕತೆ ಇತ್ತು.
ಈ ನಿಟ್ಟಿನಲ್ಲಿ 1985 ರಲ್ಲಿ ಅಂದಿನ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಎನ್‌ಡಿಪಿಎಸ್ ಕಾಯ್ದೆಯನ್ನು ಜಾರಿಗೆ ತಂದರು. ಎನ್‌ಡಿಪಿಎಸ್ ಕಾಯ್ದೆ ಅತ್ಯಂತ ಪ್ರಬಲ ಕಾಯ್ದೆಯಾಗಿದೆ. ದೇಶದ ಪ್ರಮುಖ ತನಿಖಾ ಸಂಸ್ಥೆಗಳು ಇದರಲ್ಲಿ ಒಳಗೊಳ್ಳುತ್ತದೆ. ಗಡಿ ರಕ್ಷಣೆ ಮಾಡುವ ಬಿಎಸ್‌ಎಫ್ ಸೇರಿದಂತೆ ಕೇಂದ್ರ ಅಬಕಾರಿ ಇಲಾಖೆಗೂ ಇದರಲ್ಲಿ ಅಧಿಕಾರವಿದೆ. ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ಸಾಬೀತಾದರೆ ಆರೋಪಿಗೆ ಕನಿಷ್ಠ 1 ಲಕ್ಷ ದಂಡ ಹಾಗ 10 ವರ್ಷ ಜೈಲು ಶಿಕ್ಷೆ ಪಕ್ಕಾ.
ಸಂಸತ್ ಟಿವಿ ಶೋನಲ್ಲಿ ಭಾಗವಹಿಸುವುದಿಲ್ಲ ಎಂದ ತರೂರ್: 12 ಸಂಸದರ ಅಮಾನತು ಹಿಂಪಡೆಯುವವರೆಗೂ ಸಂಸದ್ ಟಿವಿ ಕಾರ್ಯಕ್ರಮದಲ್ಲಿ ಶಶಿ ತರೂರ್ ಪಾಲ್ಗೊಳ್ಳುವುದಿಲ್ಲ.
ಸದನದಿಂದ ಅಮಾನತುಗೊಂಡಿರುವ 12 ರಾಜ್ಯಸಭಾ ಸದನದೊಳಗೆ ಬರುವವರೆಗೂ ಸಂಸದ್ ಟಿವಿಯ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.
ಅಮಾನತುಗೊಂಡಿರುವ 12 ಮಂದಿ ಶಾಸಕರ ಪೈಕಿ ಒಬ್ಬರಾದ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಸಂಸದ್ ಟಿವಿಯ ಕಾರ್ಯಕ್ರಮದಿಂದ ಹೊರಬಂದು ಒಂದು ದಿನದ ಬಳಿಕ ಶಶಿ ತರೂರ್ ಈ ನಿರ್ಧಾರ ಘೋಷಿಸಿದ್ದಾರೆ.
ಟಾಕ್ ಶೋ ಟು ದಿ ಪಾಯಿಂಟ್ ಎನ್ನುವ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಲೋಕಸಭೆಯಲ್ಲಿ ನ್ಯಾಷಲಿಸ್ಟ್ ಪ್ರೊಗ್ರೆಸಿವ್ ಪಾರ್ಟಿ ಸದಸ್ಯ ತೊಖೆಹೋ ಯೆಪ್ತೋಮಿ ಮಾತನಾಡಿ'' ನಾಗಾಲ್ಯಾಂಡ್ ಘಟನೆ ಬಗ್ಗೆ ತನಿಖೆಯಾಗಬೇಕು, ರಾಜ್ಯ ಸರ್ಕಾರವು ಹತ್ಯೆಯಾದವ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಿಸಿದೆ. ಕೇಂದ್ರ ಸರ್ಕಾರವು ಕೂಡ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.












Click it and Unblock the Notifications