ಸಂಸತ್ ಕ್ಯಾಂಟೀನ್ ಸಹ ಖಾಸಗೀಕರಣ: ನಾನ್ ವೆಜ್‌ಗೆ ಬ್ರೇಕ್?
ನವದೆಹಲಿ, ಜನವರಿ 14: ಹಲವು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಯವರಿಗೆ ಒಪ್ಪಿಸಿ ಕೆಂಗಣ್ಣಿಗೆ ಗುರಿ ಆಗಿರುವ ಮೋದಿ ಸರ್ಕಾರ ಈಗ ಸಂಸತ್‌ನ ಕ್ಯಾಂಟೀನ್ ಅನ್ನೂ ಸಹ ಖಾಸಗಿ ಅವರಿಗೆ ಒಪ್ಪಿಸುತ್ತಿದೆ.
ಸಂಸತ್‌ನಲ್ಲಿ ರೈಲ್ವೆ ಇಲಾಖೆಯ ಅಂಗಸಂಸ್ಥೆ ಐಆರ್‌ಸಿಟಿಸಿ ಇಷ್ಟು ವರ್ಷಗಳಿಂದ ಆಹಾರ ಪೂರೈಕೆ ಮಾಡುತ್ತಿತ್ತು. ಕಡಿಮೆ ವೆಚ್ಚಕ್ಕೆ ಆಹಾರ ಪೂರೈಕೆ ಮಾಡುತ್ತಿದ್ದು, ದೇಶದ ಕೆಲವೇ ಕಡಿಮೆ ದರದ ಹೋಟೆಲ್‌ಗಳಲ್ಲಿ ಸಂಸತ್‌ನ ಕ್ಯಾಂಟೀನ್ ಸಹ ಒಂದಾಗಿತ್ತು. ಆದರೆ ಈಗ ಐಆರ್‌ಸಿಟಿಸಿ ಯನ್ನು ಬದಲಾವಣೆ ಮಾಡಿ ಆ ಜಾಗಕ್ಕೆ ಖಾಸಗಿ ಅವರನ್ನು ಕರೆದುಕೊಂಡು ಬರುವ ಯೋಜನೆ ಸರ್ಕಾರ ಹಾಕಿದೆ.
ಐಎಸ್‌ಆರ್‌ಟಿಸಿ ಬದಲಿಗೆ ಖ್ಯಾತ ಸಿದ್ಧ ಆಹಾರ ತಯಾರಿಕೆಗೆ ಹೆಸರಾಗಿರುವ ಹಲದಿರಾಮ್ಸ್ ಅಥವಾ ಬಿಕಾನೆರ್‌ವಾಲಾ ಅವರುಗಳಲ್ಲಿ ಒಬ್ಬರಿಗೆ ಕ್ಯಾಂಟೀನ್ ಕ್ಯಾಟರಿಂಗ್ ಜವಾಬ್ದಾರಿ ನೀಡುವ ಬಗ್ಗೆ ಸಿದ್ಧತೆ ನಡೆದಿದೆ.

ಹಲದಿರಾಮ್ಸ್ ಮತ್ತು ಬಿಕನೇರ್‌ವಾಲಾ ಗಳು ಸಂಸತ್‌ನಲ್ಲಿ ಆಹಾರ ತಯಾರಿಸಿ ಮಾರಾಟ ಮಾಡಲು ಉತ್ಸುಕವಾಗಿದ್ದು, ಆಹಾರ ಸಮಿತಿ ಸದ್ಯಕ್ಕೆ ಇಲ್ಲವಾಗಿರುವ ಕಾರಣ, ಸ್ಪೀಕರ್ ಓಂ ಬಿರ್ಲಾ ಅವರು ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಿದ್ದಾರೆ.
ಆದರೆ ಆಹಾರ ಗುತ್ತಿಗೆಯನ್ನು ಹಲದಿರಾಮ್ಸ್ ಅಥವಾ ಬಿಕಾನೆರ್‌ಗೆ ನೀಡಿದರೆ ಸಂಸತ್‌ನಲ್ಲಿ ಈಗ ದೊರಕುತ್ತಿರುವ ಮಾಂಸಾಹಾರ ಊಟಕ್ಕೆ ಬ್ರೇಕ್ ಬೀಳಲಿದೆ. ಹಲದಿರಾಮ್ಸ್ ಮತ್ತು ಬಿಕಾಬೆರ್‌ವಾಲಾ ಎರಡೂ ಸಂಸ್ಥೆಗಳು ಸಸ್ಯಹಾರವನ್ನು ಮಾತ್ರವೇ ನೀಡುತ್ತವೆ.
ಐಆರ್‌ಸಿಟಿಸಿಯು ನೀಡುತ್ತಿರುವ ಹಣಕ್ಕೆ ತಕ್ಕುದಾದ ಆಹಾರ ಪೂರೈಕೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿರುವ ಕಾರಣ ಬದಲಾವಣೆ ಮಾಡಲಾಗುತ್ತಿದೆ.












Click it and Unblock the Notifications