ನಾಲ್ಕು ಪಟ್ಟು ದುಬಾರಿ ಆಗಲಿದೆ ದೆಹಲಿ ಪಾರ್ಕಿಂಗ್ ಶುಲ್ಕ

ನವದೆಹಲಿ, ನವೆಂಬರ್ 07 : ದಿನೇ ದಿನೇ ಹೆಚ್ಚುತ್ತಿರುವ ವಾಯುಮಾಲಿನ್ಯ ತಹಬದಿಗೆ ತರಲು ದೆಹಲಿಯಲ್ಲಿ ಒಂದಲ್ಲ ಒಂದು ಪ್ರಯತ್ನಗಳು ನಡೆಯುತ್ತಲೇ ಇವೆ . ಸಮ-ಬೆಸ ಪದ್ಧತಿ ಮಕಾಡೆ ಮಲಗಿದ ಮೇಲೆ ಇದೀಗ ಖಾಸಗಿ ವಾಹನಗಳ ಪಾರ್ಕಿಂಗ್ ಶುಲ್ಕ ಹೆಚ್ಚಿಸಿ ಆ ಮೂಲಕ ವಾಹನಗಳು ರಸ್ತೆಗಿಳಿಯದಂತೆ ತಡೆಯುವ ಕ್ರಮವನ್ನು ಜಾರಿ ಮಾಡಲು ನಿರ್ಧಾರ ತಳೆಯಲಾಗಿದೆ.

ವಾಯುಮಾಲಿನ್ಯ ನಿಯಂತ್ರಣ ಮಾಡುವಂತೆ ಸುಪ್ರೀಂ ಕೋರ್ಟ್ ರಚಿಸಿದ ಪರಿಸರಮಾಲಿನ್ಯ ನಿಯಂತ್ರಣ ಮತ್ತು ತಡೆ ಸಮಿತಿಯು ದೆಹಲಿಯಲ್ಲಿ ಖಾಸಗಿ ವಾಹನಗಳ ಪಾರ್ಕಿಂಗ್ ಶುಲ್ಕವನ್ನು ನಾಲ್ಕು ಪಟ್ಟು ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿದೆ.

Parking Fee Hiked By 4 Times In Delhi To Curb Air Pollution

ರಾಷ್ಟ್ರ ರಾಜಧಾನಿ ದೆಹಲಿ ಈ ವರ್ಷ ಅತ್ಯಂತ ಹೆಚ್ಚು ವಾಯುಮಾಲಿನ್ಯದಿಂದ ಬಲಳಿದೆ. ದೀಪಾವಳಿ ನಂತರದ ದಿನ ಉಂಟಾಗುವ ವಾಯುಮಾಲಿನ್ಯಕ್ಕಿಂತಲೂ ಹೆಚ್ಚಿನ ಮಾಲಿನ್ಯವನ್ನು ದೆಹಲಿ ಬಹುತೇಕ ಪ್ರತಿ ದಿನ ಅನುಭವಿಸಿದೆ ಎಂದು ಕೇಂದ್ರ ಪರಿಸರಮಾಲಿನ್ಯ ನಿಯಂತ್ರಣ ಮಂಡಳಿ ವರದಿಗಳು ಹೇಳಿವೆ. ಆದ್ದರಿಂದ ಜನರ ಆರೋಗ್ಯದ ದೃಷ್ಠಿಯಿಂದ ಈ ರೀತಿಯ ಕಠಿಣ ನಿರ್ಧಾರಗಳು ಅವಶ್ಯಕವಾಗಿವೆ ಎಂದು ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಹೇಳಿದ್ದಾರೆ.

ಪಾರ್ಕಿಂಗ್ ಶುಲ್ಕ ಹೆಚ್ಚಿಸುವ ಜೊತೆಗೆ ದೆಹಲಿ ಮೆಟ್ರೊದ ಟಿಕೆಟ್ ದರಗಳನ್ನು ಕನಿಷ್ಟ 10 ಗಂಟೆಗಳ ಕಾಲ ಇಳಿಸಿ ಜನರು ಖಾಸಗಿ ವಾಹನಗಳಿಗೆ ಬದಲಾಗಿ ಸಾರ್ವಜನಿಕ ಸಾರಿಗೆಗಳನ್ನು ಬಳಸುವಂತೆ ಪರೋಕ್ಷ ಒತ್ತಡ ಹೇರಲಾಗುತ್ತಿದೆ. ಇದರ ಜೊತೆಗೆ ಸಮ-ಬೆಸ ಸಂಖ್ಯೆ ಸಂಚಾರ ವ್ಯವಸ್ಥೆಯನ್ನು ಮತ್ತೆ ಪರಿಣಾಮಕಾರಿಯಾಗಿ ಜಾರಿಗೆ ತರುವ ಬಗ್ಗೆಯೂ ಸಮಿತಿ ಚಿಂತನೆ ನಡೆಸಿದೆ.

ನವೆಂಬರ್ 7, ಮಂಗಳವಾರ ಬೆಳಿಗ್ಗೆ 10 ಗಂಟೆಗೆ ದೆಹಲಿ ಇತ್ತೀಚಿನ ದಿನಗಳಲ್ಲೇ ಅತ್ಯಂತ ಕಲುಶಿತ ವಾತಾವರಣಕ್ಕೆ ಸಾಕ್ಷಿಯಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. ಇದೇ ಪರಿಸ್ಥಿತಿ ಮುಂದಿನ 48 ಗಂಟೆಗಳ ವರೆಗೂ ಮುಂದುವರೆದರೆ ಶಾಲೆಗಳನ್ನು ಮುಚ್ಚುವಂತೆ ಆದೇಶ ನೀಡಲಾಗುತ್ತದೆ ಹಾಗೂ ಸಮ-ಬೆಸ ಸಂಖ್ಯೆ ಪದ್ಧತಿಯನ್ನು ಪುನಃ ಜಾರಿ ಮಾಡಲೇ ಬೇಕಾದ ಅನಿವಾರ್ಯತೆ ಸೃಷ್ಠಿಯಾಗಲಿದೆ ಎಂದು ಸಮಿತಿ ಹೇಳಿದೆ.

ದೆಹಲಿಯ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟ್ವೀಟ್ ಮಾಡಿ "ಶಿಕ್ಷಣ ಸಚಿವ ಮನೀಷ್ ಸಿಸೋಡಿಯಾ ಅವರಿಗೆ ಕೆಲ ದಿನಗಳ ಕಾಲ ಶಾಲೆ ಮುಚ್ಚುವಂತೆ ಕೋರಿದ್ದೇನೆ. ಪ್ರತಿ ವರ್ಷ ಈ ತಿಂಗಳಿನಲ್ಲಿ ದೆಹಲಿ 'ಗ್ಯಾಸ್ ಚೇಂಬರ್' ಆಗಿ ಬದಲಾಗುತ್ತದೆ' ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+