ಮಾತುಕತೆಗೆ ಮುಂದಾದ ಪಾಕ್, ಮೋದಿಗೆ ಇಮ್ರಾನ್ ಖಾನ್ ಪತ್ರ
Recommended Video
ಇಸ್ಲಾಮಾಬಾದ್, ಜೂನ್ 08: ಹಲವು ದಿನಗಳಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಎದ್ದಿರುವ ವೈಮನಸ್ಯಕ್ಕೆ ತೆರೆ ಎಳೆಯಲು ಪಾಕ ಪ್ರಧಾನಿ ಇಮ್ರಾನ್ ಖಾನ್ ಮುಂದಾಗಿದ್ದು, ಈ ಸಂಬಮಧ ಭಾರತಕ್ಕೆ ಪತ್ರ ಬರೆದಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಎಲ್ಲಾ ವಿವಾದಗಳನ್ನೂ ಮಾತುಕತೆಯ ಮೂಲಕ ಪರಿಹರಿಸೋಣ ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.

ಕಿರ್ಗಿಸ್ತಾನದ ರಾಜಧಾನಿಯಾದ ಬಿಶ್ ಕೆಕ್ ನಲ್ಲಿ ಮುಂದಿನ ವಾರ ನಡೆಯಲಿರುವ ಶಾಂಘೈ ಕೋ ಆಪರೇಷನ್ ಆರ್ಗನೈಸೇಶನ್ (ಎಸ್ ಸಿಒ) ಸಮಾವೇಶದಲ್ಲೂ ಇಮ್ರಾನ್ ಖಾನ್ ಅವರನ್ನು ನರೇಂದ್ರ ಮೋದಿ ಭೇಟಿ ಮಾಡುವುದಿಲ್ಲ ಎನ್ನಲಾಗಿತ್ತು.
ಆದರೆ ಇದೀಗ ಇಮ್ರಾನ್ ಖಾನ್ ಪತ್ರ ಬರೆದಿದ್ದು, ಭಾರತ ನಡೆ ಏನಾಗಿರಲಿದೆ ಎಂಬುದು ಕುತೂಹಲದ ವಿಷಯವಾಗಿದೆ.
"ಎರಡೂ ದೇಶದ ಜನರು ಬಡತನದಿಂದ ಹೊರಬರುವುದಕ್ಕೆ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಮಾತುಕತೆ ನಡೆಸುವುದು ಅನಿವಾರ್ಯ. ಬೇರೆ ಯಾವುದರಿಂದಲೂ ಇದರ ಪರಿಹಾರ ಸಾಧ್ಯವಿಲ್ಲ" ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಕಾಶ್ಮೀರ ಸಮಸ್ಯೆ ಸೇರಿದಂತೆ ಎಲ್ಲ ಸಮಸ್ಯೆಗಳನ್ನೂ ಮಾತುಕತೆ ಮೂಲಕ ಪರಿಹರಿಸೋಣ ಎಂದು ಮೋದಿ ಪ್ರಧಾನಿಯಾಗಿ ಮತ್ತೊಮ್ಮೆ ಆಯ್ಕೆಯಾದ ನಂತರ ಎರಡನೇ ಬಾರಿಗೆ ಇಮ್ರಾನ್ ಖಾನ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಚುನಾವಣೆ ಫಲಿತಾಂಶದ ನಂತರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವುದಕ್ಕಾಗಿ ಬರೆದ ಪತ್ರದಲ್ಲೂ ಇಮ್ರಾನ್ ಖಾನ್ ಮಾತುಕತೆಯ ಮನವಿ ಮಾಡಿದ್ದರು ಎನ್ನಲಾಗಿದೆ.












Click it and Unblock the Notifications