ಪ್ರಧಾನಿ ಮೋದಿಯ ಮೂರು ಘೋಷಣೆಗಳನ್ನು ಸ್ವಾಗತಿಸಿದ ಪಿ ಚಿದಂಬರಂ

ನವದೆಹಲಿ, ಆಗಸ್ಟ್ 16: ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯಲ್ಲಿ ನಿಂತು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಮೂರು ಘೋಷಣೆಯನ್ನು ಹಿರಿಯ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಸ್ವಾಗತಿಸಿದ್ದಾರೆ.

ಜನಸಂಖ್ಯಾ ನಿಯಂತ್ರಣ, ಪ್ಲಾಸ್ಟಿಕ್ ಬಳಕೆ ನಿಷೇಧ, ಸಂಪತ್ತು ಸೃಷ್ಟಿ ಮೋದಿ ಭಾಷಣದಲ್ಲಿದ್ದ ಈ ಮೂರು ಅಂಶಗಳನ್ನು ಪಿ ಚಿದಂಬರಂ ಸ್ವಾಗತಿಸಿದ್ದಾರೆ.

ಪಿ ಚಿದಂಬರಂ ಅವರು ಸರಣಿ ಟ್ವೀಟ್ ಮಾಡಿದ್ದು, ನಾವೆಲ್ಲರೂ ಮೋದಿಯವರು ಈ ಮೂರು ಘೋಷಣೆಯನ್ನು ಸ್ವಾಗತಿಸಲೇ ಬೇಕಿದೆ. ಸಣ್ಣ ಕುಟುಂಬ, ಆರ್ಥಿಕತೆ ಸೃಷ್ಟಿ ಹಾಗೂ ಸಿಂಗಲ್ ಯೂಸ್ ಪ್ಲಾಸ್ಟಿಕ್ ಈ ಮೂರು ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹೇಳಿದ್ದಾರೆ.

P Chidambaram Welcomes 3 Major Announcement By Modi

ಈ ಮೂರು ಘೋಷಣೆಗಳು ಜನರಲ್ಲಿ ಹೊಸ ಸಂಚಲನ ಮೂಡಿಸಿದೆ. ನೂರಾರು ಸಂಘಟನೆಗಳು ಸ್ಥಳೀಯ ಮಟ್ಟದಿಂದ ಈ ಯೋಜನೆ ಸಹಕಾರಗೊಳ್ಳುವಂತೆ ನೋಡಿಕೊಳ್ಳುತ್ತಾರೆ.

ಮೋದಿಯವರು ಭಾಷಣ ಮಾಡುತ್ತಾ, ಜನಸಂಖ್ಯಾ ಹೆಚ್ಚಳದಿಂದ ಆರ್ಥಿಕ ಪರಿಸ್ಥಿತಿ ಕುಂಠಿತವಾಗುತ್ತಿದೆ. ಮನೆಯಲ್ಲಿ ಮಗು ಬರುವ ಮುನ್ನ ಅದರ ಭವಿಷ್ಯ ಕುರಿತು ಯೋಚನೆ ಮಾಡಿ, ನಿಮ್ಮ ಮಕ್ಕಳಿಗೆ ಉತ್ತಮ ಆರೋಗ್ಯ, ಉತ್ತಮ ಶಿಕ್ಷಣವನ್ನು ನಿಗೆ ಕಲ್ಪಿಸಲು ಸಾಧ್ಯವಾಗುವುದೇ ಎಂದು ಒಮ್ಮೆ ಆಲೋಚಿಸಿ ಎಂದು ಮೋದಿ ಹೇಳಿದ್ದರು.

P Chidambaram Welcomes 3 Major Announcement By Modi

ಜನರಿಗೆ ಸಾಮಾಜಿಕ ಜಾಗ್ರತೆ ಮೂಡಿಸುವ ಅಗತ್ಯವಿದೆ. ಸಂಪತ್ತು ಸೃಷ್ಟಿ ಎನ್ನುವುದು ರಾಷ್ಟ್ರಕ್ಕೆ ಸಲ್ಲಿಸುವ ಉತ್ತಮ ಸೇವೆ. ಇನ್ನು ಪ್ಲಾಸ್ಟಿಕ್ ಬಳಕೆ ಬಗ್ಗೆ ಮಾತನಾಡಿ ಪ್ಲಾಸ್ಟಿಕ್ ಬಳಕೆಯು ಪರಿಸರವನ್ನು ನಾಶಮಾಡುತ್ತದೆ. ಬರುವ ಅಕ್ಟೋಬರ್ 2 ರಿಂದ ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ ಎಂದು ನೀವೇ ಶಪಥ ಮಾಡಿ ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+