ಆಸ್ಕರ್ ಫರ್ನಾಂಡಿಸ್ ಬಿಚ್ಚಿಟ್ಟ ಗೋ ಮೂತ್ರದಿಂದ ಕ್ಯಾನ್ಸರ್ ಗುಣವಾದ ಕಥೆ
ನವದೆಹಲಿ, ಮಾರ್ಚ್ 19: ಕಾಂಗ್ರೆಸ್‌ನ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ವ್ಯಕ್ತಿಯೊಬ್ಬರು ಗೋಮೂತ್ರದಿಂದ ಕ್ಯಾನ್ಸರ್ ಗುಣಪಡಿಸಿಕೊಂಡಿರುವ ಕಥೆಯನ್ನು ರಾಜ್ಯಸಭೆಯಲ್ಲಿ ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಗೋ ಮೂತ್ರದಿಂದಾಗುವ ಉಪಯೋಗದ ಬಗ್ಗೆ ಅವರು ಮಾತನಾಡಿದ್ದಾರೆ.
ಹೋಮಿಯೋಪತಿ ಮತ್ತು ಭಾರತೀಯ ವೈದ್ಯಕೀಯ ವ್ಯವಸ್ಥೆಗಳಿಗೆ ರಾಷ್ಟ್ರೀಯ ಆಯೋಗಗಳನ್ನು ಸ್ಥಾಪಿಸುವ ಎರಡು ಮಸೂದೆಗಳ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಮಾಜಿ ಕೇಂದ್ರ ಸಚಿವರು, ಒಮ್ಮೆ ಮೀರತ್ ಬಳಿಯ ಆಶ್ರಮಕ್ಕೆ ಭೇಟಿ ನೀಡಿದಾಗ ಗೋ ಮೂತ್ರ ಕುಡಿದು ಕ್ಯಾನ್ಸರ್ ಗುಣಪಡಿಸಿಕೊಂಡಿದ್ದಾಗಿ ವ್ಯಕ್ತಿಯೊಬ್ಬರು ತಮ್ಮದೊಂದಿಗೆ ಹೇಳಿಕೊಂಡಿದ್ದಾಗಿ ಫರ್ನಾಂಡಿಸ್ ತಿಳಿಸಿದ್ದಾರೆ.

ಅನೇಕ ಬಿಜೆಪಿ ನಾಯಕರು ಕೂಡ ಗೋಮೂತ್ರದ ಬಗ್ಗೆ ಮಾತನಾಡಿದ್ದಾರೆ
ಅನೇಕ ಬಾರಿ ಬಿಜೆಪಿ ಮುಖಂಡರು ಗೋಮೂತ್ರದ ಶಕ್ತಿಯ ಬಗ್ಗೆ ಮಾತನಾಡಿದ್ದರು. ಇಂತಹ ಹೇಳಿಕೆಗಳಿಗೆ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು.ಭಾರತೀಯ ವೈದ್ಯಕೀಯ ವ್ಯವಸ್ಥೆ ಉತ್ತಮ ಗುಣಗಳನ್ನು ಶ್ಲಾಘಿಸಿದರು.

ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಹೊರಗಿಡುವ ಬಗ್ಗೆ ಆಕ್ಷೇಪ
ಫರ್ನಾಂಡಿಸ್ ಮಸೂದೆಗಳನ್ನು ಬೆಂಬಲಿಸಿದರೂ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಹೊರಗಿಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.ಮಸೂದೆಯನ್ನು ತಿದ್ದುಪಡಿ ಮಾಡುವಂತೆ ಅಥವಾ ಯೋಗ ಮತ್ತು ಪ್ರಕೃತಿಚಿಕಿತ್ಸೆಯನ್ನು ಒಳಗೊಳ್ಳುವ ಪ್ರತ್ಯೇಕ ಶಾಸನವನ್ನು ತರುವುದಾಗಿ ಭರವಸೆ ನೀಡುವಂತೆ ಸಚಿವರನ್ನು ಒತ್ತಾಯಿಸುವುದಾಗಿ ಹೇಳಿದರು.

ಮೊಣಕಾಲಿನ ನೋವಿನಿಂದ ನರಳುತ್ತಿದ್ದೆ
ಮೊಣಕಾಲಿನ ತೀವ್ರ ನೋವು ಬಂದಾಗ ಬದಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ವೈದ್ಯರು ನೀಡಿದ ಸಲಹೆಗಳನ್ನು ನಿರಾಕರಿಸಿ, 'ವಜ್ರಾಸನ' ಮಾಡಲು ಪ್ರಾರಂಭಿಸಿದ್ದೆ. ಯೋಗ ವಜ್ರಾಸನ ಮಾಡಲು ಆರಂಭಿಸಿದ್ದು, ಸದ್ಯ ಯಾವುದೇ ತೊಂದರೆ ಇಲ್ಲದೆ ಕುಸ್ತಿ ಮಾಡುವಷ್ಟು ಸಮರ್ಥನಾಗಿದ್ದೇನೆ ಎಂದರು.

ವಾಜಪೇಯಿ ಅವರಿಗೂ ಹೇಳಿಕೊಡುತ್ತಿದ್ದೆ
ದಿವಂಗತ ಮಾಜಿ ಪ್ರಧಾನಿ ವಾಜಪೇಯಿ ಮೊಣಕಾಸಿನ ಶಸ್ತ್ರಚಿಕಿತ್ಸೆ ತಿಳಿದಿದ್ದರೆ ಅವರ ಬಳಿಗೆ ಹೋಗಿ ವಜ್ರಾಸನ ಆರಂಭಿಸುವಂತೆ ಕೇಳಿಕೊಳ್ಳುತ್ತಿದ್ದೆ. ಇದರಿಂದ ಅವರು ಖಂಡಿತವಾಗಿ ಗುಣಮುಖರಾಗುತ್ತಿದ್ದರು ಎಂದು ಹೇಳಿದರು.

ಯೋಗಾಭ್ಯಾಸ ಮಾಡಿದರೆ ಆರೋಗ್ಯ ಬಜೆಟ್ ಕಡಿಮೆ ಮಾಡಬಹುದು
ಅಮೆರಿಕಾದಲ್ಲಿ ಸುಮಾರು 104 ವರ್ಷ ವಯಸ್ಸಿನ ವ್ಯಕ್ತಿ ಯುವಕರನ್ನು ನಾಚಿಸುವಂತೆ ಓಡುತ್ತಾರೆ. ಯೋಗ ನಮ್ಮ ಸಂಪತ್ತು. ನೀವು ಯೋಗವನ್ನು ಅಭ್ಯಾಸ ಮಾಡಿದರೆ, ನಮ್ಮ ಆರೋಗ್ಯದ ಬಜೆಟ್ ವೆಚ್ಚವನ್ನು ಶೇಕಡಾ 50 ರಷ್ಟು ಕಡಿಮೆ ಮಾಡಬಹುದು. ಇದು ಜೀವನ ವಿಧಾನ ಎಂದು ಫರ್ನಾಂಡಿಸ್ ಹೇಳಿದರು.












Click it and Unblock the Notifications