ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋರಖ್ ಪುರ ದುರಂತದಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ: ಸುಪ್ರೀಂ

ಗೋರಖ್ ಪುರ ಬಾಬಾ ರಾಘವ ದಾಸ್ ಆಸ್ಪತ್ರೆಯಲ್ಲಿ ಮಕ್ಕಳ ಸಾವು ಪ್ರಕರಣದಲ್ಲಿ ತಾನು ಮಧ್ಯ ಪ್ರವೇಶಿಸುವುದಿಲ್ಲ ಎಂದ ಸುಪ್ರೀಂ ಕೋರ್ಟ್. ಕಳೆದ ವಾರ, ಆಸ್ಪತ್ರೆಯಲ್ಲಿನ ಆಮ್ಲಜನಕ ಸೌಲಭ್ಯ ಸಿಗದ ಕಾರಣ 70 ಮಕ್ಕಳ ಸಾವಾಗಿತ್ತು.

|
Google Oneindia Kannada News

ನವದೆಹಲಿ, ಆಗಸ್ಟ್ 14: ಗೋರಖ್ ಪುರ ಬಿಆರ್ ಡಿ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಸೌಲಭ್ಯದ ಕೊರತೆಯಿಂದಾಗಿ ನಡೆದ ಸುಮಾರು 70 ಮಕ್ಕಳ ದಾರುಣ ಸಾವಿನ ಪ್ರಕರಣದಲ್ಲಿ ತಾನು ಮಧ್ಯ ಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಆಗ್ರಹಿಸಿದೆ.

Recommended Video

Gorakhpur Tragedy : 30 children lost their lives in 48 hours | Oneindia Kannada

ಮಕ್ಕಳ ಮಾರಣಹೋಮ ನಡೆದಿದ್ದ ಗೋರಖಪುರ್ ಆಸ್ಪತ್ರೆಗೆ ಯೋಗಿ ಭೇಟಿಮಕ್ಕಳ ಮಾರಣಹೋಮ ನಡೆದಿದ್ದ ಗೋರಖಪುರ್ ಆಸ್ಪತ್ರೆಗೆ ಯೋಗಿ ಭೇಟಿ

ಗೋರಖ್ ಪುರ ವೈದ್ಯಕೀಯ ಆಸ್ಪತ್ರೆಯಲ್ಲಿ ಕಳೆದ ವಾರ ಆಮ್ಲಜನಕದ ಕೊರತೆಯುಂಟಾಗಿದ್ದ ಹಿನ್ನೆಲೆಯಲ್ಲಿ ಆರು ದಿನಗಳಲ್ಲಿ ಸುಮಾರು 70 ಮಕ್ಕಳು ಸಾವನ್ನಪ್ಪಿದ್ದವು.

On Gorakhpur Child Deaths, Supreme Court Refuses To Intervene

ಆದರೆ, ಇದನ್ನು ಆಮ್ಲಜನಕದ ಕೊರತೆ ಎಂದು ಹೇಳಲು ಸಿದ್ಧವಿರದ ಸರ್ಕಾರ, ಆಸ್ಪತ್ರೆಯ ಸಿಬ್ಬಂದಿಯ ವೈದ್ಯಕೀಯ ನಿರ್ಲಕ್ಷ್ಯದಿಂದಲೇ ಮಕ್ಕಳು ಸಾವನ್ನಪ್ಪಿರುವುದಾಗಿ ಹೇಳಿ, ಆ ಆಸ್ಪತ್ರೆಯ ಉಸ್ತುವಾರಿ ಹೊಂದಿರುವ ಬಿಆರ್ ಡಿ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಹಾಗೂ ಅಲ್ಲಿನ ವೈದ್ಯರೊಬ್ಬರನ್ನು ಅಮಾನತುಗೊಳಿಸಿದೆ.

ಗೋರಖ್ ಪುರ ದುರಂತ: ಶನಿವಾರ ಸಂಜೆ ನಂತರದ ಪ್ರಮುಖ 5 ಬೆಳವಣಿಗೆಗೋರಖ್ ಪುರ ದುರಂತ: ಶನಿವಾರ ಸಂಜೆ ನಂತರದ ಪ್ರಮುಖ 5 ಬೆಳವಣಿಗೆ

ಈ ಹಿನ್ನೆಲೆಯಲ್ಲಿ, ವಕೀಲರೊಬ್ಬರು ಸುಪ್ರೀಂ ಕೋರ್ಟ್ ಗೆ ಈ ಕುರಿತಂತೆ ಮನವಿ ಸಲ್ಲಿಸಿ, ಸರ್ವೋಚ್ಛ ನ್ಯಾಯಾಲಯವು ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ, ಉತ್ತರ ಪ್ರದೇಶ ರಾಜ್ಯ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಆಗ್ರಹಿಸಿದ್ದರು.

ಆದರೆ, ಈ ಮನವಿಯನ್ನು ಸುಪ್ರೀಂ ಕೋರ್ಟ್ ನಯವಾಗಿ ತಿರಸ್ಕರಿಸಿದೆ. ಈಗಾಗಲೇ, ಈ ಪ್ರಕರಣದ ಅಲಹಾಬಾದ್ ಹೈಕೋರ್ಟ್ ನಲ್ಲಿದೆ. ಅಲ್ಲದೆ, ಉತ್ತರ ಪ್ರದೇಶ ಸರ್ಕಾರವೂ ಈ ಪ್ರಕರಣದ ಕುರಿತಂತೆ ಕೆಲವಾರು ಕ್ರಮಗಳನ್ನು ಕೈಗೊಂಡಿದೆ ಹಾಗಾಗಿ, ಈ ಸಂದರ್ಭದಲ್ಲಿ ತಾನು ಮಧ್ಯಪ್ರವೇಶಿಸುವುದು ಅನವಶ್ಯಕ ಎನಿಸುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.

English summary
The matter of hospital deaths in Gorakhpur is being handled by the Uttar Pradesh government and any grievances about it should be raised before the Allahabad High Court, the Supreme Court told a lawyer who raised the issue before it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X