ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೂಟಲ್ಲಿ ಕ್ಯಾಮೆರಾ ಇಟ್ಟು ರಹಸ್ಯವಾಗಿ ಶೂಟ್ ಮಾಡುತ್ತಿದ್ದ ಕಿಲಾಡಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್. 28: ಮಾಲ್ ನ ಟ್ರಾಯಲ್ ರೂಂ ನಲ್ಲಿ, ರೆಸ್ಟೋರೆಂಟ್ ನ ಟಾಯ್ಲೆಟ್ ನಲ್ಲಿ ಕಳ್ಳ ಕಣ್ಣುಗಳು ಇಣುಕಿದ್ದ ಕತೆಯನ್ನು ಕೇಳಿದ್ದೀರಿ, ಓದಿದ್ದೀರಿ. ಕೇಂದ್ರ ಸಚಿವೆ ಸ್ಮೃತಿ ಇರಾನಿಯೇ ಹಿಂದೊಮ್ಮೆ ಗೋವಾದಲ್ಲಿ ಕಳ್ಳ ಕ್ಯಾಮರಾ ಕಂಡು ಹೌಹಾರಿದ್ದರು.

ಆದರೆ ನವದೆಹಲಿಯ ವಕೀಲ ಮಹಾಶಯನೊಬ್ಬ ಇದೆಲ್ಲವನ್ನು ಮೀರಿಸಿದ ಯೋಜನೆ ರೂಪಿಸಿದ್ದ. ದಕ್ಷಿಣ ದೆಹಲಿಯ ಮಾಲ್ ವೊಂದರಲ್ಲಿ ಓಡಾಡಿಕೊಂಡಿದ್ದ ಭೂಪ ತನ್ನ ಶೂ ಗಳಿಗೆ ಕಳ್ಳ ಕ್ಯಾಮರಾ ಅಳವಡಿಕೆ ಮಾಡಿಕೊಂಡು ಮಹಿಳೆಯರ ಚಿತ್ರ ತೆಗೆಯುತ್ತಿದ್ದ. ಮಾಲ್ ಸೆಕ್ಯೂರಿಟಿಗಳ ಕೈಗೆ ಸಿಕ್ಕಿ ಬಿದ್ದಿರುವ ಈತನ ಬಲಗಾಲಿನ ಲೇಸ್ ಬಳಿ ವಿಡೀಯೋ ರೇಕಾರ್ಡಿಂಗ್ ಮೂಡ್ ನಲ್ಲಿದ್ದ ಕ್ಯಾಮರಾ ಪತ್ತೆಯಾಗಿದೆ.

man

ಕ್ಯಾಮರಾ ಪರಿಶಿಲನೆ ಮಾಡಿದಾಗ 10ಕ್ಕೂ ಅಧಿಕ ಅಶ್ಲೀಲ ಮಾದರಿಯ ವಿಡಿಯೋಗಳು ಪತ್ತೆಯಾಗಿದೆ. ಇದು ಮಾಲ್ ನಲ್ಲಿ ಆತ ತಿರುಗಾಡುತ್ತ ಮಾಡಿದ ವಿಡಿಯೋಗಳಾಗಿವೆ ಎಂದು ಮಾಲ್ ನ ಮ್ಯಾನೇಜರ್ ಸುನೀಲ್ ಅರೋರಾ ತಿಳಿಸಿದ್ದಾರೆ. [ಫ್ಯಾಬ್ ಇಂಡಿಯಾ ಮಳಿಗೆಯಲ್ಲಿ ಸ್ಮೃತಿ ಇರಾನಿ ಕಂಡಿದ್ದೇನು?]

ಹೇಗೆ ವಿಡಿಯೋ ತೆಗೆಯುತ್ತಿದ್ದ

ಮಿನಿ ಸ್ಕರ್ಟ್, ಶಾರ್ಟ್ ಗಳನ್ನು ಹಾಕಿಕೊಂಡು ಮಾಲ್ ಗೆ ಬಂದ ಮಹಿಳೆ ಮತ್ತು ಯುವತಿಯರೇ ಈತನ ಟಾರ್ಗೆಟ್. ಅವರನ್ನು ಹಿಂಬಾಲಿಸುತ್ತ, ಅವರು ಶಾಪಿಂಗ್ ಮಾಡುವತ್ತ ತೆರಳುತ್ತಿದ್ದ, ಅಲ್ಲಿಯೇ ಕೆಲ ಕಾಲ ನಿಂತು ಬಲಗಾಲನ್ನು ಹಿಂದೆ ಮುಂದೆ ಸಂಚರಿಸಿ ವಿಡಿಯೋ ರೇಕಾರ್ಡಿಂಗ್ ಮಾಡಿಕೊಳ್ಳುತ್ತಿದ್ದ.

ಸಿಕ್ಕಿಬಿದ್ದಿದ್ದು ಹೇಗೆ?

ಈತನ ಚಲನ ವಲನಗಳ ಮೇಲೆ ಅನುಮಾನಗೊಂಡ ಮಾಲ್ ನ ಡಿಎಲ್ ಎಫ್ ನ ಮ್ಯಾನೇಜರ್ ಸೂಕ್ಷ್ಮವಾಗಿ ಗಮನಿಸಿದ್ದಾರೆ. ನಂತರ ಹಿಂಬಾಲಿಸಿ ಪರಿಶೀಲನೆ ನಡೆಸಿದಾಗ ಶೂದಲ್ಲಿದ್ದ ಕಳ್ಳ ಕ್ಯಾಮರಾ ಸಿಕ್ಕಿದೆ.[ಸಿಸಿಟಿವಿ ದೃಶ್ಯ: ತಡರಾತ್ರಿಯಲ್ಲಿ ಆಟಗಾರ್ತಿ ಎಳೆದಾಡಿದ ಕೋಚ್]

ಹರಿಯಾಣದ ಆಹಾರ ನಿಗಮದ ಮಾಜಿ ಅಧ್ಯಕ್ಷರ ಮಗ 34 ವರ್ಷದ ಶರ್ಮಾನನ್ನು ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.ಈತನ ಲ್ಯಾಪ್ ಟಾಪ್ ಮತ್ತು ಮೊಬೈಲ್ ಪರಿಶೀಲಿಸಿದಾಗ ಈ ಬಗೆಯ ಅನೇಕ ವಿಡಿಯೋಗಳು ಪತ್ತೆಯಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

English summary
A 34-year-old corporate lawyer has been arrested for allegedly taking obscene pictures of women with a spy cam fitted to one of his shoes at a prominent South Delhi mall. He was caught by security guards who found a spy camera between the lace of the man's right shoe in video-recording mode.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X