ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್‌ಪಿಜಿ ಬೆಲೆ ಮತ್ತೆ 43.50 ರು. ಕಡಿತ, ಸಬ್ಸಿಡಿ ಸಹಿತಕ್ಕಲ್ಲ

By Kiran B Hegde
|
Google Oneindia Kannada News

ನವದೆಹಲಿ, ಜ. 1: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾದ ಕಾರಣ ಸಹಾಯಧನ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ ಮತ್ತೆ 43.50 ರು. ಕಡಿಮೆಯಾಗಿದೆ.

ಈ ಬಾರಿಯೂ ಸೇರಿದಂತೆ 2014ರ ಆಗಸ್ಟ್ ತಿಂಗಳಿನ ನಂತರ ಐದು ಬಾರಿ ಸಹಾಯಧನ ರಹಿತ ಸಿಲಿಂಡರ್ ಬೆಲೆ ಇಳಿದಿದೆ. ಇಂದಿನಿಂದ ನವದೆಹಲಿಯಲ್ಲಿ 14.2 ಕೆಜಿ ತೂಕದ ಸಹಾಯಧನ ರಹಿತ ಸಿಲಿಂಡರ್ ಬೆಲೆ 708.50 ರು. ಆಗಿದೆ. ಮೊದಲು ಈ ಮೊತ್ತ 752 ರು. ಇತ್ತು. [ಬಿಪಿಎಲ್ ಕುಟುಂಬಗಳಿಗೆ ಹೊಸ ವರ್ಷದ ಕೊಡುಗೆ]

ಆರು ತಿಂಗಳಲ್ಲಿ ಐದು ಬಾರಿ ದರ ಕಡಿತಗೊಂಡಿರುವ ಕಾರಣ ಸಹಾಯಧನ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ ಮೂರು ವರ್ಷಗಳ ಕನಿಷ್ಠ ದರಕ್ಕೆ ಇಳಿದಿದೆ.

lpg

ಪ್ರಸ್ತುತ ಸಹಾಯಧನ ಸಹಿತ ಸಿಲಿಂಡರ್ ಬೆಲೆ ನವದೆಹಲಿಯಲ್ಲಿ 417 ರು. ಇದ್ದು, ಗ್ರಾಹಕರು ವರ್ಷದ 12 ಸಿಲಿಂಡರ್ ಕೋಟಾ ಮುಗಿದ ನಂತರ ಸಹಾಯಧನ ರಹಿತ ಸಿಲಿಂಡರ್‌ ಪಡೆಯಬೇಕಾಗುತ್ತದೆ. [ಸಬ್ಸಿಡಿ ರಹಿತ ಎಲ್ ಪಿಜಿ ದರ ಇಳಿಕೆ]

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ದೇಶದ ಕೋಟ್ಯಧೀಶರಲ್ಲಿ ಸಹಾಯಧನದ ಗೃಹ ಬಳಕೆ ಅಡುಗೆ ಅನಿಲ ಸಂಪರ್ಕ ಬಿಟ್ಟು ಸ್ವಯಂಪ್ರೇರಿತವಾಗಿ ಸಹಾಯಧನ ರಹಿತ ಗ್ಯಾಸ್ ಸಂಪರ್ಕ ಪಡೆಯಲು ಕೋರಿತ್ತು. ದೇಶದಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಅಧಿಕೃತ ಕೋಟ್ಯಧೀಶರಿದ್ದರೂ ಸುಮಾರು 10 ಸಾವಿರ ಜನ ಮಾತ್ರ ಧನಾತ್ಮಕವಾಗಿ ಸ್ಪಂದಿಸಿದ್ದರು. [ಸಬ್ಸಿಡಿ ಸಹಿತ ಎಲ್ ಪಿಜಿ ದರ ಏರಿಕೆ]

ಯುಪಿಎ ಸರ್ಕಾರದಲ್ಲಿಯೇ ಈ ಯೋಚನೆ ಹೊಂದಿದ್ದ ಅಂದಿನ ವಿಚ್ಚ ಸಚಿವ ಪಿ. ಚಿದಂಬರಂ "ನನ್ನಂತಹ ಪ್ಯಾನ್ ಕಾರ್ಡ್ ಹೊಂದಿದವರಿಗೆ ಸಹಾಯಧನ ಸಹಿತ ಅಡುಗೆ ಅನಿಲ ಏಕೆ ಬೇಕು?" ಎಂದು ಪ್ರಶ್ನಿಸಿದ್ದರು. ಈ ಮೂಲಕ ಪ್ಯಾನ್ ಕಾರ್ಡ್ ಉಳ್ಳವರಿಗೆ ಸಹಾಯಧನದ ಅಡುಗೆ ಅನಿಲ ವಿತರಣೆ ನಿಲ್ಲಿಸುವ ಯೋಚನೆ ಹೊಂದಿದ್ದರೂ ಜಾರಿಗೆ ತರಲು ಸಾಧ್ಯವಾಗಿರಲಿಲ್ಲ. [ಗೃಹಬಳಕೆ ಅಡುಗೆ ಅನಿಲ 5 ಕೆಜಿಗೂ ಲಭ್ಯ]

English summary
Price of non-subsidised cooking gas (LPG) was Thursday cut by Rs 43.50 per cylinder as international oil rates slumped. A 14.2-kg cylinder LPG will now cost Rs 708.50, down from Rs 752 previously, in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X