• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಅಭಿನಂದನ್ ಬಿಡುಗಡೆಗೆ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಅಗಿಲ್ಲ'

|

ನವದೆಹಲಿ, ಮಾರ್ಚ್ 1: ಭಾರತೀಯ ವಾಯು ಸೇನೆಯು ಫೆಬ್ರವರಿ ಇಪ್ಪತ್ತಾರರಂದು ಪಾಕಿಸ್ತಾನದಲ್ಲಿನ ಭಯೋತ್ಪಾದಕರ ನೆಲೆಯ ಮೇಲೆ ದಾಳಿ ಮಾಡಲು ಗಡಿ ದಾಟಿತೇ ವಿನಾ ಪಾಕಿಸ್ತಾನದ ಮೇಲಿನ ದಾಳಿಗಲ್ಲ ಎಂಬುದನ್ನು ಅಂತರರಾಷ್ಟ್ರೀಯ ಸಮುದಾಯಕ್ಕೆ ಸ್ಪಷ್ಟವಾಗಿ ವಿವರಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ ಎಂದು ವರದಿ ಆಗಿದೆ.

ಕಾಂಗ್ರೆಸ್ ನಾಯಕ ಶಶಿ ತರೂರ್ ನೇತೃತ್ವದ ಸಮಿತಿ ಮುಂದೆ ಭಾರತ-ಪಾಕಿಸ್ತಾನ ಸಂಬಂಧದ ಬಗ್ಗೆ ಶುಕ್ರವಾರದಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ವಿವರ ನೀಡುವಾಗ ಈ ಸಲಹೆ ಕೇಳಿಬಂದಿದೆ. ಬಾಲಾಕೋಟ್ ಮೇಲೆ ಭಾರತೀಯ ವಾಯು ಸೇನೆ ದಾಳಿ ನಂತರ ನಡೆದ ಬೆಳವಣಿಗೆ ಬಗ್ಗೆ ಗೋಖಲೆ ಅವರು ಸಂಸದೀಯ ಸಮಿತಿ ಮುಂದೆ ವಿವರಣೆ ನೀಡಿದ್ದಾರೆ.

ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದಿಂದ ಭಾರೀ ಶೆಲ್ಲಿಂಗ್

ಆ ನಂತರ ಪಾಕಿಸ್ತಾನದ ಪ್ರತ್ಯುತ್ತರದ ಮಾಹಿತಿಯನ್ನು ಒದಗಿಸಿದ್ದಾರೆ. ಸಮಿತಿಯಲ್ಲಿರುವ ಎಲ್ಲ ಸದಸ್ಯರೂ ಭಾರತೀಯ ವಾಯು ಸೇನೆಯ ಈ ಕಾರ್ಯವನ್ನು ಮನಸಾರೆ ಶ್ಲಾಘಿಸಿದ್ದಾರೆ. ಬಾಲಾಕೋಟ್ ದಾಳಿಯ ಸಾಕ್ಷ್ಯಾಧಾರಗಳ ಬಗ್ಗೆ ಗೋಖಲೆ ಯಾವುದೇ ಮಾತನಾಡಿಲ್ಲ.

ಗುರುವಾರದಂದು ಮಾತನಾಡಿದ್ದ ಏರ್ ವೈಸ್ ಮಾರ್ಷಲ್ ಆರ್ ಜಿಕೆ ಕಪೂರ್, ಯುದ್ಧ ವಿಮಾನಗಳು ನಿರ್ದಿಷ್ಟ ಗುರಿಯತ್ತ ಪ್ರಹಾರ ನಡೆಸಿವೆ. ಎಷ್ಟು ಹಾನಿಯಾಗಿದೆ, ಯಾವ ಪ್ರಮಾಣದಲ್ಲಿ ಗಾಯಾಳುಗಳಿದ್ದಾರೆ ಎಂಬುದನ್ನು ನಿರ್ಧರಿಸುವುದಕ್ಕೆ ಇಷ್ಟು ಶೀಘ್ರವಾಗಿ ಆಗುವುದಿಲ್ಲ ಎಂದಿದ್ದರು.

ಭಾವುಕ ಕ್ಷಣಗಳು, ಜಯಘೋಷದ ಮಧ್ಯೆ ಭಾರತಕ್ಕೆ ವಾಪಸ್ ಆದ ಅಭಿನಂದನ್

ವಿಂಗ್ ಕಮ್ಯಾಂಡರ್ ಅಭಿನಂದನ್ ರನ್ನು ಪಾಕಿಸ್ತಾನದಿಂದ ವಾಪಸ್ ಕರೆಸಿಕೊಳ್ಳುವುದರಲ್ಲಿ ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಇಲ್ಲ ಎಂಬುದನ್ನು ಕೂಡ ವಿದೇಶಾಂಗ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ ಪೈಲಟ್ ಅಭಿನಂದನ್ ಶುಕ್ರವಾರ ರಾತ್ರಿ 9.20ಕ್ಕೆ ಬಿಡುಗಡೆ ಆಗಿದ್ದಾರೆ.

ವಿಂಗ್ ಕಮ್ಯಾಂಡರ್ ಅಭಿನಂದನ್ ಗೆ ಮನೆಗೆ ಸ್ವಾಗತ! ನಿಮ್ಮ ಅಪರಿಮಿತ ಶೌರ್ಯಕ್ಕೆ ದೇಶ ಹೆಮ್ಮೆ ಪಡುತ್ತದೆ. ನಮ್ಮ ಸಶಸ್ತ್ರ ಮೀಸಲು ಪಡೆ 130 ಕೋಟಿ ಭಾರತೀಯರಿಗೆ ಸ್ಫೂರ್ತಿ. ವಂದೇ ಮಾತರಂ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

English summary
The Parliamentary Standing Committee has told the External Affairs Ministry to "emphatically" assert before the international community that the Indian Air Force (IAF) crossed the border on February 26 not to attack Pakistan but terror camps on its territory: Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X