ದೆಹಲಿಯಲ್ಲಿ ಸಮುದಾಯ ಸೋಂಕು ಇಲ್ಲ: ಮನೀಶ್ ಸಿಸೊಡಿಯಾ
ನವದೆಹಲಿ, ಜೂನ್ 9: ದೆಹಲಿಯಲ್ಲಿ ಕೊರೊನಾ ವೈರಸ್ ಸಮುದಾಯಕ್ಕೆ ಹರಡಿಲ್ಲ ಎಂದು ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೊಡಿಯಾ ತಿಳಿಸಿದ್ದಾರೆ.
ದೆಹಲಿಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜೊತೆ ನಡೆದ ಸಭೆ ಬಳಿಕ ಮನೀಷ್ ಸಿಸೋಡಿಯಾ ಮಾತನಾಡಿ ಕೊರೊನಾ ವೈರಸ್ ಸಮುದಾಯಕ್ಕೆ ಹರಡಲು ಆರಂಭವಾಗಿಲ್ಲ ಎಂದು ತಿಳಿಸಿದ್ದಾರೆ.
ದಹಲಿಯಲ್ಲಿರುವ ಅರ್ಧದಷ್ಟು ಕೊರೊನಾ ಪ್ರಕರಣದ ಮೂಲವನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.

ಸಮುದಾಯಕ್ಕೆ ವೈರಸ್ ತಗುಲಿದರೆ ಹೇಗೆ ವೈರಸ್ ತಗುಲಿತು ಎಂಬುದನ್ನು ಅರಿಯಲು ಸಾಧ್ಯವಿಲ್ಲ.ಹಾಗೆಯೇ ದೆಹಲಿಯಲ್ಲಿ ಕೂಡ ಶೇ.50ರಷ್ಟು ಪ್ರಕರಣಗಳಲ್ಲಿ ಮೂಲವನ್ನು ಹುಡುಕಲು ಸಾಧ್ಯವಾಗುತ್ತಿಲ್ಲ ಎಂದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರ ಜೊತೆ ನಡೆದ ಸಭೆಗೂ ಮುನ್ನ ತಿಳಿಸಿದರು.
ಸಮುದಾಯ ಸೋಂಕು ಕೊರೊನಾ ವೈರಸ್‌ನ ಮೂರನೇ ಹಂತವಾಗಿದೆ. ಕೇಂದ್ರ ಸರ್ಕಾರ ಮಾತ್ರ ಸಮುದಾಯ ಸೋಂಕು ಎಂದು ಘೋಷಿಸಲು ಸಾಧ್ಯವಿದೆ.
ದಹಲಿಯಲ್ಲಿ ಸಮುದಾಯ ಸೋಂಕು ಇದೆ ಆದರೆ ಅದನ್ನು ಒಪ್ಪಿಕೊಳ್ಳಲು ಯಾರೂ ತಯಾರಿಲ್ಲ, ನಾವು ಅದನ್ನು ಘೋಷಿಸಲು ಸಾಧ್ಯವಿಲ್ಲ , ಕೇಂದ್ರ ಸರ್ಕಾರವೇ ಘೋಷಣೆ ಮಾಡಬೇಕು.
ಅವರು ಅದನ್ನು ಒಪ್ಪಿಕೊಳ್ಳುತ್ತಾರೋ ಬಿಡುತ್ತಾರೋ ಅವರಿಗೆ ಬಿಟ್ಟದ್ದು, ಕೊವಿಡ್ 19 ಅಲ್ಲಿ ನಾಲ್ಕು ಹಂತಗಳಿವೆ ಮೂರನೇ ಹಂತವೇ ಸಮುದಾಯ ಸೋಂಕು ಎಂದು ಏಮ್ಸ್ ನಿರ್ದೇಶಕ ರಣ್‌ದೀಪ್ ಗುಲೇರಿಯಾ ತಿಳಿಸಿದ್ದಾರೆ.












Click it and Unblock the Notifications