• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

75ನೇ ಸ್ವಾತಂತ್ರ್ಯ ದಿನಾಚರಣೆಗೆ ಹೊಸ ಸಂಸತ್ ಕಟ್ಟಡವು ಸಿದ್ಧವಾಗಲಿದೆ: ಹರ್ದೀಪ್ ಸಿಂಗ್ ಪುರಿ

|

ನವದೆಹಲಿ, ಜನವರಿ 05: ನರೇಂದ್ರ ಮೋದಿ ಸರ್ಕಾರದ ಕನಸಿನ ಯೋಜನೆಯಾಗಿರುವ ಕೇಂದ್ರ ವಿಸ್ಟಾ ಪುನರಾಭಿವೃದ್ಧಿ ಯೋಜನೆಗೆ ಸುಪ್ರೀಂಕೋರ್ಟ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿರುವ ತೀರ್ಪನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಸ್ವಾಗತಿಸಿದ್ದಾರೆ.

ಈ ಯೋಜನೆಯ ಅಡಿಯಲ್ಲಿ ಹೊಸ ಸಂಸತ್ತಿನ ಕಟ್ಟಡ ನಿರ್ಮಾಣವಾಗಲಿದ್ದು, ಹೊಸ ಸಂಸತ್ ಭವನ ನಿರ್ಮಾಣದ ವಿರುದ್ಧ ಹಲವಾರು ಅರ್ಜಿಗಳು ದಾಖಲಾಗಿದ್ದವು. ಆದರೆ ಪರಿಸರ ಸಮಿತಿ ಸಲ್ಲಿಸಿರುವ ವರದಿ ನಿಯಮಗಳ ಪ್ರಕಾರವೇ ಇದೆ ಎಂದು ಸುಪ್ರೀಂ ಕೋರ್ಟ್‌ ಪುರಸ್ಕರಿಸಿದೆ.

''ಸರ್ಕಾರವು ಯಾವಾಗಲೂ ಪರಿಸರ ಕಾಳಜಿಯ ಬಗ್ಗೆ ಸೂಕ್ಷ್ಮವಾಗಿ ಗಮನಹರಿಸಿದೆ. ಮಹತ್ವಾಕಾಂಕ್ಷೆಯ ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರು, ನಿರ್ಮಾಣದ ಅವಧಿಯಲ್ಲಿ ಸರ್ಕಾರವು ಉನ್ನತ ಮಾನದಂಡಗಳಿಗೆ ಬದ್ಧವಾಗಿ ಮುಂದುವರಿಯುತ್ತದೆ'' ಎಂದು ಹೇಳಿದರು.

"ದೆಹಲಿ ವಿಶ್ವ ದರ್ಜೆಯ ರಾಜಧಾನಿಯಾಗುವ ಹಾದಿಯಲ್ಲಿದೆ ಮತ್ತು 2022 ರ 75 ಸ್ವಾತಂತ್ರ್ಯ ದಿನಾಚರಣೆ ಹೊತ್ತಿಗೆ ಹೊಸ ಭಾರತದ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ ಹೊಸ ಸಂಸತ್ತಿನ ಕಟ್ಟಡವು ಸಿದ್ಧವಾಗಲಿದೆ" ಎಂದು ಪುರಿ ಟ್ವೀಟ್ ಮಾಡಿದ್ದಾರೆ.

ಬಹುಮತದ ತೀರ್ಪಿನಲ್ಲಿ, ಕೇಂದ್ರ ವಿಸ್ಟಾ ಯೋಜನೆಗೆ ಭೂ ಬಳಕೆಯಲ್ಲಿ ಬದಲಾವಣೆಗಾಗಿ ಪರಿಸರ ಅನುಮತಿ ಮತ್ತು ಅಧಿಸೂಚನೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ.

"ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ಟಾ ಯೋಜನೆಗೆ ಮುಂದುವರಿಯಲು ಮಾನ್ಯ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಕೇಂದ್ರ ಸರ್ಕಾರವು ಪರಿಸರ ಕಾಳಜಿಯ ಬಗ್ಗೆ ಯಾವಾಗಲೂ ಸೂಕ್ಷ್ಮವಾಗಿರುತ್ತದೆ ಮತ್ತು ನಿರ್ಮಾಣದ ಅವಧಿಯಲ್ಲಿ ಅತ್ಯುನ್ನತ ಮಾನದಂಡಗಳಿಗೆ ಬದ್ಧವಾಗಿ ಮುಂದುವರಿಯುತ್ತದೆ" ಎಂದು ಪುರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಹೊಸ ತ್ರಿಕೋನ ಆಕಾರದ ಸಂಸತ್ತಿನ ಕಟ್ಟಡದ ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ) ಅಂದಾಜು ವೆಚ್ಚವನ್ನು 11,794 ಕೋಟಿಯಿಂದ 13,450 ಕೋಟಿ ರೂ.ಗಳಿಗೆ ಪರಿಷ್ಕರಿಸಿದೆ.

English summary
75 years of its Independence in 2022 a new Parliament building will be ready reflecting the aspirations of new India says Hardeep Singh Puri
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X