ದೆಹಲಿ ಚುನಾವಣೆ : ನಾಮಪತ್ರ, ಪ್ರಚಾರದ ರಂಗೀನ್ ಚಿತ್ರಗಳು

ನವದೆಹಲಿ, ಜ. 21: ರಾಷ್ಟ್ರದ ರಾಜಧಾನಿಯಲ್ಲಿ ವಿಧಾನಸಭೆ ಚುನಾವಣೆ ರಂಗೇರಿದೆ. ಚಿಕ್ಕ ರಾಜ್ಯವಾದರೂ ಇಡೀ ದೇಶದ ಗಮನ ಸೆಳೆದಿದೆ. ಕೇಂದ್ರದಲ್ಲಿ ಈಗಾಗಲೇ ಅಧಿಕಾರದಲ್ಲಿರುವ ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆಯಾಗಿದ್ದರೆ, ಪ್ರಮುಖ ಪ್ರತಿಸ್ಪರ್ಧಿ ಆಮ್ ಆದ್ಮಿಗೆ ಅಳಿವು ಉಳಿವಿನ ಪ್ರಶ್ನೆ.

ಈಗಾಗಲೇ ಹಲವು ಮಾಧ್ಯಮಗಳು ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, ಕೆಲವೆಡೆ ಬಿಜೆಪಿ, ಇನ್ನು ಕೆಲವೆಡೆ ಆಮ್ ಆದ್ಮಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತವಾಗಿದೆ. ಕಾಂಗ್ರೆಸ್ ಪಕ್ಷ ಈಗಾಗಲೇ ಗೆಲುವಿನ ವಿಶ್ವಾಸ ಕಳೆದುಕೊಂಡಿದ್ದರೂ ತನ್ನ ಘಟಾನುಘಟಿಗಳನ್ನು ಕಣಕ್ಕಿಳಿಸಿದೆ. [ದೆಹಲಿ ಚುನಾವಣೆ : ಅಂಕಿ ಅಂಶ ಪಕ್ಷಿನೋಟ]

ನಾಮಪತ್ರ ಸಲ್ಲಿಕೆ ಜ. 14ರಂದು ಆರಂಭವಾಗಿದ್ದು, 21ರಂದು ಅಂತ್ಯಗೊಂಡಿದೆ. ಜ. 24ರೊಳಗೆ ನಾಮಪತ್ರ ವಾಪಸ್ ಪಡೆಯಬಹುದು. ಫೆಬ್ರವರಿ 7ರಂದು ಚುನಾವಣೆ ನಡೆಯಲಿದ್ದು, 10ರಂದು ಮತಎಣಿಕೆ ನಡೆಸಿ ಫಲಿತಾಂಶ ಘೋಷಿಸಲಾಗುತ್ತದೆ.

ಒಟ್ಟು 70 ಮತಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಸರ್ಕಾರ ರಚಿಸಲು ಯಾವುದೇ ಪಕ್ಷ 36 ಸೀಟುಗಳನ್ನು ಗೆಲ್ಲಬೇಕಾಗಿದೆ. [ದೆಹಲಿ ಸಿಎಂ ಹುದ್ದೆಗೆ ಯಾರು ಬೆಸ್ಟ್?]

ಎಲ್ಲ ಪಕ್ಷಗಳೂ ತಮ್ಮದೇ ಶೈಲಿಯಲ್ಲಿ ಉತ್ಸಾಹದಿಂದಲೇ ಪ್ರಚಾರಕ್ಕಿಳಿದಿವೆ. ಬುಧವಾರ ಹಲವರು ನಾಮಪತ್ರ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಕಂಡುಬಂದ ಹಲವು ದೃಷ್ಯಗಳು ಇಲ್ಲಿವೆ.

ಆಪ್‌ನ ಪ್ರಮೀಳಾ ನಾಮಪತ್ರ

ಆಪ್‌ನ ಪ್ರಮೀಳಾ ನಾಮಪತ್ರ

ನವದೆಹಲಿಯ ಆರ್.ಕೆ. ಪುರಂನಲ್ಲಿ ನಾಮಪತ್ರ ಸಲ್ಲಿಸಿದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಪ್ರಮೀಳಾ ಟೋಕಾಸ್.

ಬೆಂಬಲಿಗರ ಕೈಕುಲುಕಿದ ಕೇಜ್ರಿವಾಲ್

ಬೆಂಬಲಿಗರ ಕೈಕುಲುಕಿದ ಕೇಜ್ರಿವಾಲ್

ನವದೆಹಲಿಯ ಕೃಷ್ಣ ನಗರ ಪ್ರದೇಶದಲ್ಲಿ ಬೆಂಬಲಿಗರ ಕೈ ಕುಲುಕಿದ ಆಪ್ ಮುಖ್ಯಮಂತ್ರಿ ಅಭ್ಯರ್ಥಿ ಅರವಿಂದ ಕೇಜ್ರಿವಾಲ್.

ಕಿರಣ್ ಬೇಡಿ ಏನಂತಾರೆ?

ಕಿರಣ್ ಬೇಡಿ ಏನಂತಾರೆ?

ನವದೆಹಲಿಯ ಕೃಷ್ಣ ನಗರದಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿರುವ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ.

ಕಿರಣ್ ಬೇಡಿಗೆ ಗೆಲುವಿನ ವಿಶ್ವಾಸ

ಕಿರಣ್ ಬೇಡಿಗೆ ಗೆಲುವಿನ ವಿಶ್ವಾಸ

ನವದೆಹಲಿಯ ಕೃಷ್ಣನಗರದಲ್ಲಿ ಪ್ರಚಾರ ನಡೆಸಿದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಹಾಗೂ ಕೇಂದ್ರ ಸಚಿವ ಹರ್ಷ ವರ್ಧನ್.

ರಾಷ್ಟ್ರಪತಿ ಮಗಳು ಗೆಲ್ತಾರಾ?

ರಾಷ್ಟ್ರಪತಿ ಮಗಳು ಗೆಲ್ತಾರಾ?

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಗಳು ಶರ್ಮಿಷ್ಠಾ ಮುಖರ್ಜಿ ಅವರು ನವದೆಹಲಿಯ ಜಾಮ್‌ನಗರದಲ್ಲಿ ನಾಮಪತ್ರ ಸಲ್ಲಿಸಿದ ನಂತರ ಅಭಿಮಾನಿಗಳತ್ತ ಕೈ ಬೀಸಿದರು.

ನೂಪುರ್ ಶರ್ಮಾ ವಿಶ್ವಾಸದ ಹೆಜ್ಜೆ

ನೂಪುರ್ ಶರ್ಮಾ ವಿಶ್ವಾಸದ ಹೆಜ್ಜೆ

ನವದೆಹಲಿಯ ಜಾಮ್‌ನಗರ ಹೌಸ್‌ನಲ್ಲಿ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ನೂಪುರ್ ಶರ್ಮಾ ಉತ್ಸಾಹದಿಂದ ಹೊರಬಂದಿದ್ದು ಹೀಗೆ.

ಕಾಂಗ್ರೆಸ್‌ನ ಅಜಯ್ ಮಾಕೇನ್‌ಗೆ ಗೆಲುವಿನ ವಿಶ್ವಾಸ

ಕಾಂಗ್ರೆಸ್‌ನ ಅಜಯ್ ಮಾಕೇನ್‌ಗೆ ಗೆಲುವಿನ ವಿಶ್ವಾಸ

ನವದೆಹಲಿಯ ಸದರ್ ಬಾಝಾರ್‌ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಜಯ್ ಮಾಕೇನ್ ಅವರು ನಾಮಪತ್ರ ಸಲ್ಲಿಕೆಗೆ ಆಗಮಿಸಿದಾಗ ಕಾರ್ಯಕರ್ತರ ಎದುರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ಈ ಬಾರಿಯೂ ಗೆಲ್ತಾರಾ ಕೇಜ್ರಿವಾಲ್‌?

ಈ ಬಾರಿಯೂ ಗೆಲ್ತಾರಾ ಕೇಜ್ರಿವಾಲ್‌?

ನವದೆಹಲಿಯ ಜಾಮ್‌ನಗರ ಹೌಸ್‌ನಲ್ಲಿ ನಾಮಪತ್ರ ಸಲ್ಲಿಸಿದ ನಂತರ ಬೆಂಬಲಿಗರ ಜೊತೆ ರ್ಯಾಲಿ ನಡೆಸಿದರು.

ಕಾಂಗ್ರೆಸ್ ಅಭ್ಯರ್ಥಿ ಕಿರಣ್ ವಾಡಿಯಾ

ಕಾಂಗ್ರೆಸ್ ಅಭ್ಯರ್ಥಿ ಕಿರಣ್ ವಾಡಿಯಾ

ಕಾಂಗ್ರೆಸ್ ಅಭ್ಯರ್ಥಿ ಕಿರಣ್ ವಾಲಿಯಾ ಅವರು ನವದೆಹಲಿಯ ಜಾಮ್ ನಗರದಲ್ಲಿ ನಾಮಪತ್ರ ಸಲ್ಲಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+