ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ಕದಿಯಲು ಬಂದವನಿಗೆ ಯುವತಿಯರಿಂದ ಸರಿಯಾಗೇ ಬಿತ್ತು!

|
Google Oneindia Kannada News

ಮೈಸೂರು, ಸೆಪ್ಟೆಂಬರ್. 10: ರಾಜಧಾನಿ ನವದೆಹಲಿಯ ಹೆಣ್ಣು ಮಕ್ಕಳು ಸ್ವಯಂ ರಕ್ಷಣೆ ವಿದ್ಯೆ ಕಲಿತುಕೊಂಡಿದ್ದಾರೆ, ಜತೆಗೆ ಅದನ್ನು ಪ್ರಯೋಗ ಮಾಡಿ ತಮ್ಮನ್ನು ಕಾಪಾಡಿಕೊಳ್ಳುವ ಸ್ಥೈರ್ಯವನ್ನು ಬೆಳೆಸಿಕೊಂಡಿದ್ದಾರೆ.

ಬ್ಯಾಗ್ ಮತ್ತು ಮೊಬೈಲ್ ಕಸಿದಿಕೊಳ್ಳಲು ಬಂದವನಿಗೆ ಯುವತಿ ಸರಿಯಾಗಿಯೇ ಗೂಸಾ ನೀಡಿದ್ದಾಳೆ. ಅಲ್ಲದೇ ಆತನನ್ನು ಅಟ್ಟಿಸಿಕೊಂಡು ಹೋಗಿ ಪಟೇಲ್ ನಗರದ ಲಾಕಪ್ ಗೆ ಹಾಕಿಸಿದ್ದಾಳೆ.[ಸೀಟಿಗಾಗಿ ಮಹಿಳೆಯರ ಕಿತ್ತಾಟ, ಉಟ್ಟ ಬಟ್ಟೆ ಚಿಂದಿ, ಚಿಂದಿ!]

delhi

ಬುಧವಾರ ರಾತ್ರಿ 9 ಗಂಟೆ ವೇಳೆಯಲ್ಲಿ ತನ್ನ ಸಹೋದರಿ ಸಿಮ್ರಾನ್ ರೊಂದಿಗೆ ತೆರಳುತ್ತಿದ್ದ 21 ವರ್ಷದ ಸುರಭಿ ರಾಲ್ಹನ್ ಮಹಿಳೆಯರಿಗೆ ಸ್ಫೂರ್ತಿ ನೀಡುವಂತ ಕೆಲಸ ಮಾಡಿದ್ದಾರೆ. ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಸುರಭಿ ಮೇಲೆ ದಾಳಿ ಮಾಡಿದ ಚೋರ ಸದ್ದಾಂ ಮೊಬೈಲ್ ಮತ್ತು ಬ್ಯಾಗ್ ಕಸಿದು ಪರಾರಿಯಾಗಲು ಯತ್ನಿಸಿದ್ದಾನೆ.[ಈ ಗುಣ ಗಂಡು ಹೆಣ್ಣು ಅರ್ಥ ಮಾಡಿಕೊಂಡರೆ!]

ತಕ್ಷಣ ಎಚ್ಚೆತ್ತುಕೊಂಡ ಸುರಭಿ ಆತನ ಹೊಟ್ಟೆಗೆ ಸರಿಯಾಗಿ ಒದೆದಿದ್ದಾಳೆ. ಆತನ ಮೇಲೆ ಕಾಳಿಯಂತೆ ದಾಳಿ ನಡೆಸಿ ನೆಲಕ್ಕೆ ಕೆಡವಿ ಹಿಗ್ಗಾ ಮುಗ್ಗಾ ಥಳಿಸಿದ್ದಾಳೆ. ಏಕಾಏಕಿ ದಾಳಿಯಿಂದ ಕಂಗಾಲಾದ ಕಳ್ಳ ಅಲ್ಲಿಂದ ಓಟಕ್ಕಿತ್ತಿದ್ದಾನೆ. ಆದರೆ ಸಹೋದರಿಯರಿಬ್ಬರು ಆತನ ಕುತ್ತಿಗೆ ಪಟ್ಟಿ ಹಿಡಿದು ಪೊಲೀಸರ ಕೈ ಗೆ ಒಪ್ಪಿಸಿದ್ದಾರೆ.

ದೆಹಲಿ ಪೊಲೀಸರು ಆಯೋಜಿಸಿದ್ದ ಸ್ವಯಂ ರಕ್ಷಣಾ ಶಿಬಿರದಲ್ಲಿ ಭಾಗವಹಿಸಿದ್ದ ಸುರಭಿ ವಕಲಿತ ವಿದ್ಯೆಯನ್ನು ಚೋರನ ಮೇಲೆ ಸರಿಯಾಗಿಯೇ ಬಳಸಿದ್ದಾರೆ. ಕಾನೂನು ವಿದ್ಯಾರ್ಥಿಯಾಗಿರುವ ಸುರಭಿ ಸಾಹಸವನ್ನು ದೆಹಲಿ ಪೊಲೀಸರು ಮತ್ತು ನಾಗರಿಕರು ಮೆಚ್ಚಿಕೊಂಡಿದ್ದು ಸಾಮಾಜಿಕ ತಾಣಗಳಲ್ಲೂ ಪ್ರಶಂಸೆ ಹರಿದು ಬರುತ್ತಿದೆ.

English summary
A law student Surabhi Rahan of New delhi kicked, punched, chased and dragged a robber and send him to jail. The Incident has taken place at Patel Nagar police station limits New Delhi on Tuesday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X