ಆಮ್ ಆದ್ಮಿ ಕೇಜ್ರಿವಾಲ್‌ಗೆ ಮುಖಭಂಗ, ಎಬಿವಿಪಿ ಜಯದ ನಗೆ
ನವದೆಹಲಿ,ಸೆಪ್ಟೆಂಬರ್. 12: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಘಟಕದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಖಿಲ ಭಾರತ ವಿದ್ಯಾರ್ಥಿ ಪರಿಷದ್ (ಎಬಿವಿಪಿ ) ಕ್ಲೀನ್ ಭರ್ಜರಿ ಜಯ ದಾಖಲಿಸಿದೆ. ಆಡಳಿತಾರೂಢ ಆಮ್ ಆದ್ಮಿ ಪಾರ್ಟಿಗೆ ಸರಿಯಾದ ಆಘಾತ ನೀಡಿದ್ದು ಎಲ್ಲ ನಾಲ್ಕು ಸ್ಥಾನಗಳಲ್ಲಿ ಎಬಿವಿಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಆಮ್ ಆದ್ಮಿ ಮತ್ತು ಕಾಂಗ್ರೆಸ್ ಸೊನ್ನೆ ಸುತ್ತಿವೆ. ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಪ್ರಚಾರ, ವಿದ್ಯಾರ್ಥಿ ಸ್ನೇಹಿ ಯೋಜನೆಗಳ ಭರವಸೆಯ ನಡುವೆಯೂ ಆಲ್ ಆದ್ಮಿಗೆ ಬೆಂಬಲ ವ್ಯಕ್ತವಾಗಿಲ್ಲ.
ಎಬಿವಿಪಿಯ ಸತಿಂದರ್ ಅವಾನ ಅಧ್ಯಕ್ಷರಾಗಿ, ಸನ್ನಿ ದೆಧಾ ಉಪಾಧ್ಯಕ್ಷರಾಗಿ, ಅಂಜಲಿ ರಾಣಾ ಅವರು ಕಾರ್ಯದರ್ಶಿಯಾಗಿ ಹಾಗೂ ಚತ್ತರ್ ಪಾಲ್ ಯಾದವ್ ಅವರು ಸಹ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಕಮೆಂಟ್ ಗಳು ಹರಿದಾಡುತ್ತಿವೆ. ಶನಿವಾರ ಬೆಳಗ್ಗೆಯಿಂದಲೇ #ABVPRocks ಹೆಸರಿನಲ್ಲಿ ಜನರು ತಮ್ಮ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ.

ಗೆದ್ದ ಸಂಭ್ರಮದ ಮೆರವಣಿಗೆ
ಎಬಿವಿಪಿಯ ಸತಿಂದರ್ ಅವಾನ ಅಧ್ಯಕ್ಷರಾಗಿ, ಸನ್ನಿ ದೆಧಾ ಉಪಾಧ್ಯಕ್ಷರಾಗಿ, ಅಂಜಲಿ ರಾಣಾ ಅವರು ಕಾರ್ಯದರ್ಶಿಯಾಗಿ ಹಾಗೂ ಚತ್ತರ್ ಪಾಲ್ ಯಾದವ್ ಅವರು ಸಹ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ದೆಹಲಿಯ ಪ್ರಮುಖ ರಸ್ತೆಗಳಲ್ಲಿ ಶನಿವಾರ ಮೆರವಣಿಗೆ ನಡೆಸಿ ಸಂಭ್ರಮಾಚರಣೆ ಮಾಡಲಾಯಿತು.

ಪ್ರಣಾಳಿಕೆ ಹಾಗೆ ಕೆಲಸ
ಚುನಾವಣೆಗೂ ಮುನ್ನ ಎಬಿವಿಪಿ ಕಾರ್ಯಕರ್ತರು ಪ್ರಣಾಳಿಕೆಯೊಂದನ್ನು ಬಿಡುಗಡೆ ಮಾಡಿದ್ದರು,. ಈಗ ಸಂಪೂರ್ಣ ಬಹುಮತ ಪಡೆದುಕೊಂಡ ಹಿನ್ನೆಲೆಯಲ್ಲಿ ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
|
ಪಟಾಕಿ ಸಿಡಿಸಿ ಸಂಭ್ರಮ
ಬಿಜೆಪಿ ಬೆಂಬಲಿತ ಅಖಿಲ ಭಾರತ ವಿದ್ಯಾರ್ಥಿ ಪರಿಷದ್ (ಎಬಿವಿಪಿ ) ವಿಜಯವನ್ನು ದೆಹಲಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು.
|
ಸರಿಯಾದ ಹೊಡೆತ
ನವದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿಗೆ ಎಬಿವಿಪಿ ಮೂಲಕ ಬಿಜೆಪಿ ಸರಿಯಾದ ಹೊಡೆತವನ್ನೇ ನೀಡಿದೆ.
|
ಧರ್ಮೇಂದ್ರ ಪ್ರಧಾನ್ ಅಭಿನಂದನೆ
ದೆಹಲಿಯಲ್ಲಿ ಜಯಗಳಿಸಿದ ಎಬಿವಿಪಿ ವಿದ್ಯಾರ್ಥಿಗಳಿಗೆ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅಬಿನಂದನೆ ಸಲ್ಲಿಕೆ ಮಾಡಿದ್ದಾರೆ.
|
ಜಯದ ಕತೆ ಹೇಳುವ ವಿಡಿಯೋ
ನಾಘರಿಕರೊಬ್ಬರು ಎಬಿವಿಪಿ ವಿಜಯವನ್ನು ಟ್ವಿಟ್ಟರ್ ನಲ್ಲಿ ವಿಡಿಯೋ ವೊಂದರ ಮೂಲಕ ಹಂಚಿಕೊಂಡಿದ್ದಾರೆ.












Click it and Unblock the Notifications