• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಬ್ಲಿಘಿ ಜಮಾತ್ ಮಸೀದಿಗೆ ಹೋಗಿದ್ದ 9 ಸಾವಿರ ಮಂದಿಗೆ ಕೊರೊನಾ ಅಪಾಯ

|

ನವದೆಹಲಿ, ಏಪ್ರಿಲ್ 2: ನವದೆಹಲಿಯ ತಬ್ಲಿಘಿ ಜಮಾತ್ ಮಸೀದಿಯ ಕಾರ್ಯಕ್ರಮದಲ್ಲಿ 7,600 ಭಾರತೀಯರು ಹಾಗೂ 1,300 ಮಂದಿ ವಿದೇಶಿಯರು ಪಾಲ್ಗೊಂಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

   ನಿಜಾಮುದ್ದೀನ್ ಪ್ರಕರಣದ , ವಿಜಯಪುರದ 13 ಜನರ ಪರೀಕ್ಷೆ ನಡೆಯುತ್ತಿದೆ | Oneindia Kannada

   ಹೀಗಾಗಿ ಸುಮಾರು 9 ಸಾವಿರ ಮಂದಿಗೆ ಕೊರೊನಾ ಅಪಾಯವಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ದೇಶದಲ್ಲಿ ಕೊರೊನಾ ವೈರಸ್ ಹರಡಲು ದೊಡ್ಡ ಹಾಟ್‌ಸ್ಪಾಟ್ ಇದಾಗಿದೆ.

   ತಬ್ಲಿಘಿ ಜಮಾತ್ ಕಾರ್ಯಕರ್ತರನ್ನು ಗುರುತಿಸಿದ್ದು ಅವರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

   ಎಚ್ಚೆತ್ತುಕೊಳ್ಳದ ಜನ: ರಾಜಸ್ಥಾನದ ದರ್ಗಾ ಸಭೆಯಲ್ಲಿ ನೂರಾರು ಮಂದಿ ಭಾಗಿ

   ಒಟ್ಟು 23 ರಾಜ್ಯಗಳು ನಾಲ್ಕು ಕೇಂದ್ರಾಡಳಿತ ಪ್ರದೇಶ ಇಡೀ ದಿನ ಕೆಲಸ ಮಾಡಿ 1306 ಮಂದಿಯನ್ನು ಹುಡುಕಿದೆ. ಮಾರ್ಚ್ ತಿಂಗಳಲ್ಲಿ ನಡೆದಿದ್ದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಪೈಕಿ ರಾಜ್ಯಾವಾರು ಅಂಕಿ-ಅಂಶ ಲಭ್ಯವಾಗಿದೆ. ಈ ಪೈಕಿ ತಮಿಳುನಾಡಿನಿಂದ ಅತಿ ಹೆಚ್ಚು ಜನರು ಈ ಮಸೀದಿಯಲ್ಲಿ ಕಾಣಿಸಿಕೊಂಡಿದ್ದರಂತೆ.

   ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ತಮಿಳುನಾಡಿನಿಂದ 501 ಜನರು ಭಾಗವಹಿಸಿದ್ದರು ಎಂಬ ಅಂಕಿ ಅಂಶ ಬಹಿರಂಗವಾಗಿದೆ. ರಾಜ್ಯವಾರು ನೋಡುವುದಾರೇ ತಮಿಳುನಾಡಿನವರೇ ಹೆಚ್ಚು. ತಮಿಳುನಾಡು ಬಿಟ್ಟರೆ ಅಸ್ಸಾಂ ಮೂಲದವರು 216 ಜನ ಹಾಗೂ ಉತ್ತರ ಪ್ರದೇಶದ 156 ಜನರು ಹೋಗಿದ್ದರು

   ಗೃಹ ಸಚಿವಾಲಯ ನೀಡಿದ ಮಾಹಿತಿ ಏನು?

   ಗೃಹ ಸಚಿವಾಲಯ ನೀಡಿದ ಮಾಹಿತಿ ಏನು?

   ಗೃಹ ಸಚಿವಾಲಯವು ಏಪ್ರಿಲ್ 1 ರಂದು ನೀಡಿರುವ ಮಾಹಿತಿ ಪ್ರಕಾರ ಮಸೀದಿಯಲ್ಲಿ ಪ್ರಾರ್ಥನೆಗೆ ತೆರಳಿದ್ದ 1051 ಮಂದಿಯನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ. ಅದರಲ್ಲಿ 21 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಇಬ್ಬರು ಮೃತಪಟ್ಟಿದ್ದಾರೆ.

   7600 ಮಂದಿ ಹುಡುಕುವ ಪ್ರಯತ್ನ

   7600 ಮಂದಿ ಹುಡುಕುವ ಪ್ರಯತ್ನ

   ಮಸೀದಿಯ ಸಭೆಯಲ್ಲಿ ಪಾಲ್ಗೊಂಡಿದ್ದ 7600 ಮಂದಿ ಭಾರತೀಯರನ್ನು ಹುಡುಕುವ ಪ್ರಯತ್ನ ಮುಂದುವರೆದಿದೆ. ವಿದೇಶಿಯರನ್ನು ಪತ್ತೆಹಚ್ಚಲಾಗಿದೆ ಎನ್ನುವ ಮಾಹಿತಿ ದೊರೆತಿದೆ.

   400 ಮಂದಿಗೆ ಕೊರೊನಾ ಪಾಸಿಟಿವ್

   400 ಮಂದಿಗೆ ಕೊರೊನಾ ಪಾಸಿಟಿವ್

   ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗುರುತಿಸಲ್ಪಟ್ಟಿರುವ ಮಂದಿಯಲ್ಲಿ 400 ಜನರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ತಮಿಳುನಾಡಿನ 90, ಆಂಧ್ರಪ್ರದೇಶದ 70, ದೆಹಲಿಯ 53, ತೆಂಗಾಣದ 28, ಅಸ್ಸಾಂಮಿನ 13, ಮಹಾರಾಷ್ಟ್ರದ 12, 10 ಮಂದಿ ಅಂಡಮಾನ್, ಆರು ಮಂದಿ ಜಮ್ಮು ಮತ್ತು ಕಾಶ್ಮೀರ, ಪುದುಚೆರಿ ಹಾಗೂ ಗುಜರಾತ್‌ ತಲಾ ಇಬ್ಬರು ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ.

   ವೈದ್ಯರ ಮೇಲೆ ಉಗುಳಿದ ಜಮಾತ್ ಕಾರ್ಯಕರ್ತರು

   ವೈದ್ಯರ ಮೇಲೆ ಉಗುಳಿದ ಜಮಾತ್ ಕಾರ್ಯಕರ್ತರು

   ಈಗಾಗಲೇ ದೇಶದಲ್ಲಿ ಕೊರೊನಾ ವೈರಸ್ ಹರಡಲು ಮುಖ್ಯ ಕಾರಣವಾದ ಜಮಾತ್ ಮಸೀದಿಯ ಕಾರ್ಯಕರ್ತರನ್ನು ಕ್ವಾರಂಟೈನ್‌ಗೆ ಕರೆದುಕೊಂಡು ಹೋಗುವಾಗ ವೈದ್ಯರ ಮೇಲೆ ಉಗುಳಿದ್ದಷ್ಟೇ ಅಲ್ಲದೆ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ.

   English summary
   At least 7,600 Indians and 1,300 foreigners have been identified with links to an Islamic missionary group that organised a religious congregation in Delhi last month and has emerged as India's biggest hotspot in the coronavirus pandemic.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X