ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಚ್ಛತೆ ಬೋಧಿಸಿದವರು ವಿಷಬೀಜ ಬಿತ್ತುತಿಹರು: ರಾಹುಲ್

By Kiran B Hegde
|
Google Oneindia Kannada News

ನವದೆಹಲಿ, ನ. 13: ಲೋಕಸಭೆ ಚುನಾವಣೆಯಲ್ಲಿ ಉಂಟಾದ ಹೀನಾಯ ಸೋಲಿನ ಆಘಾತದಿಂದ ಇನ್ನೂ ಹೊರಬರದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಎನ್‌ಡಿಎ ಸರ್ಕಾರ ದೇಶದಲ್ಲಿ ವಿಷಬೀಜ ಬಿತ್ತುತ್ತಿದೆ ಎಂದು ಆರೋಪಿಸಿದ್ದಾರೆ.

ಹೀಗೆ ಹೇಳಲು ಅವರು ಆಯ್ದುಕೊಂಡಿದ್ದು ತನ್ನ ಮುತ್ತಾತ, ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ 125ನೇ ಜನ್ಮದಿನಾಚರಣೆ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದ ವೇದಿಕೆಯನ್ನು.

rahulnew

'ಸ್ವಚ್ಛ ಭಾರತ ಅಭಿಯಾನ' ಆರಂಭಿಸಿದವರೇ ದೇಶದಲ್ಲಿ ವಿಷ ಹರಡುತ್ತಿದ್ದಾರೆ. ಪ್ರೀತಿಯಿಂದ ಸ್ವಾತಂತ್ರ್ಯ ಗಳಿಸಿದ ಜಗತ್ತಿನ ಏಕೈಕ ದೇಶವಾದ ಭಾರತವನ್ನು ಇಂದು ಉಗ್ರ ಮನಸ್ಥಿತಿಯವರು ಆಳುತ್ತಿದ್ದಾರೆ ಎಂದು ರಾಹುಲ್ ಕಿಡಿಕಾರಿದ್ದಾರೆ. [ಗಾಂಧಿ ಹೇಳಿಕೊಟ್ಟ ಮಂತ್ರ ಬೋಧಿಸಿದ ಮೋದಿ]

ಇಂದು ಅನೇಕರು ಕಚೇರಿಯಲ್ಲಿ ಕೆಲಸ ಮಾಡುವುದು ಬಿಟ್ಟು ಛಾಯಾಚಿತ್ರಕ್ಕಾಗಿ ಬೀದಿಯನ್ನು ಗುಡಿಸುತ್ತಿದ್ದಾರೆಂದು ಟೀಕಿಸಿದರು.

ಅಲ್ಲದೆ, ಕಾಂಗ್ರೆಸ್ ಹಲವು ತಪ್ಪುಗಳನ್ನು ಮಾಡಿದೆ ಎಂಬುದನ್ನು ಒಪ್ಪಿಕೊಂಡ ರಾಹುಲ್, ನಮ್ಮ ಪಕ್ಷ ಯಾವತ್ತೂ ಸಿದ್ಧಾಂತ ಬಿಟ್ಟು ಹೋಗಿಲ್ಲ ಎಂದು ಸಮರ್ಥಿಸಿಕೊಂಡರು.

ದನಿಗೂಡಿಸಿದ ಸೋನಿಯಾ: ಮಗನ ಮಾತಿಗೆ ದನಿಗೂಡಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, "ಎಲ್ಲ ವರ್ಗಗಳನ್ನೂ ಜತೆಯಲ್ಲಿ ಕರೆದೊಯ್ಯಲು ಇಚ್ಛಿಸಿದ್ದ ಜವಾಹರಲಾಲ್ ನೆಹರು ಅವರ ಸಿದ್ಧಾಂತವನ್ನು ನಾಶಪಡಿಸುವ ಯತ್ನ ನಡೆದಿದೆ" ಎಂದು ಆರೋಪಿಸಿದರು. [ಗಾಂಧೀಜಿ ಸ್ವಚ್ಛ ಭಾರತ ಕನಸು ನನಸಾಗಿಸೋಣ]

ಭಾರತದಲ್ಲಿರುವ ಔದಾರ್ಯ ಹಾಗೂ ಪ್ರಗತಿಪರತೆಯ ಸೌಧವನ್ನು ನಾಶಪಡಿಸುವ ಯತ್ನದ ವಿರುದ್ಧ ನಾವು ಹೋರಾಡಲೇಬೇಕು ಎಂದು ಕರೆ ನೀಡಿದರು.

ಬಿಜೆಪಿ ವ್ಯಂಗ್ಯ: ಸೋನಿಯಾ ಹಾಗೂ ರಾಹುಲ ಅವರ ಆರೋಪಕ್ಕೆ ಬಿಜೆಪಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದೆ.
ರಾಹುಲ ಗಾಂಧಿ ಅವರ ಸಂಪೂರ್ಣ ರಾಜಕೀಯ ಜೀವನ ಫೋಟೊ ತೆಗೆಸಿಕೊಳ್ಳುವುದು, ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುವುದು, ದಲಿತರ ಮನೆಗೆ ಭೇಟಿ ನೀಡುವುದು ಹಾಗೂ ಸುಗ್ರೀವಾಜ್ಞೆಯನ್ನು ಹರಿಯುವುದರಲ್ಲಿಯೇ ಕಳೆದಿದೆ ಎಂದು ಬಿಜೆಪಿ ಮುಖಂಡ ನಳಿನ್ ಕೊಯ್ಲಿ ಟೀಕಿಸಿದ್ದಾರೆ.

English summary
Congress vice-president Rahul Gandhi slammed the NDA government that, those who have launched 'Swachh Bharat Abhiyan' are spreading poison in society. He admitted that the party had made mistakes but has never swayed from its ideology. Congress president Sonia Gandhi also supported Rahul.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X