ಈ ರಾಶಿಯವರನ್ನು ಕಷ್ಟಗಳಿಂದ ಮುಕ್ತಿಗೊಳಿಸಲಿದ್ದಾನೆ ಶನೀಶ್ವರ: ಮುಂದಿನ ತಿಂಗಳಿಂದ ನೆಮ್ಮದಿಯ ಬದುಕು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜುಲೈ 27 ರಿಂದ ಶನಿಯ ವಕ್ರ ಸಂಚಾರ ಆರಂಭವಾಗುತ್ತದೆ. ಇದಾದ ನಂತರ ಡಿಸೆಂಬರ್ 11, 2026 ರವರೆಗೆ ಶನಿಯು ಹಿಮ್ಮುಖವಾಗಿಯೇ ಸಂಚಾರದಲ್ಲಿರುತ್ತಾನೆ. ಈ 138 ದಿನಗಳ ಅವಧಿಯಲ್ಲಿ, ಕೆಲವು ರಾಶಿಯವರು ಮಾನಸಿಕ ಒತ್ತಡ, ಆರ್ಥಿಕ ಸಮಸ್ಯೆಗಳು ಮತ್ತು ಕೆಲಸದ ತೊಂದರೆಗಳಿಂದ ಪರಿಹಾರವನ್ನು ಪಡೆಯುವ ಸಾಧ್ಯತೆಯಿದೆ. ಶನಿಯ ಸಾಡೇ ಸಾತಿಯ ಪ್ರಭಾವದಲ್ಲಿರುವವರಿಗೂ ಈ ಸಮಯ ನೆಮ್ಮದಿಯನ್ನು ತರುತ್ತಾನೆ. ಮಾನಸಿಕ ಒತ್ತಡ, ಆರ್ಥಿಕ ಸಮಸ್ಯೆಗಳು ಮತ್ತು ಕೆಲಸದ ತೊಂದರೆಗಳಿಂದ ಸ್ವಲ್ಪ ಪರಿಹಾರವನ್ನು ಪಡೆಯಬಹುದು.

ಜ್ಯೋತಿಷ್ಯದಲ್ಲಿ ಶನಿಗೆ ವಿಶೇಷ ಸ್ಥಾನವಿದೆ. ಶನಿಯನ್ನು ಕರ್ಮಕ್ಕೆ ತಕ್ಕ ಫಲ ನೀಡುವವನು. ಹಾಗಾಗಿಯೇ ಅವನನ್ನು ನ್ಯಾಯದ ದೇವರು ಎಂದು ಕರೆಯುತ್ತಾರೆ. ಶನಿಯ ಪಥದಲ್ಲಿನ ಪ್ರತಿಯೊಂದು ಸಂಚಾರ, ಅಸ್ತ, ಉದಯ ಎಲ್ಲವೂ ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ. ವಿಶೇಷವಾಗಿ ಸಾಡೇ ಸಾತಿ ಮತ್ತು ಅರ್ಧಷ್ಟಮ ಶನಿಯಂತಹ ಹಂತಗಳು ವ್ಯಕ್ತಿಯ ಜೀವನದಲ್ಲಿ ಅನೇಕ ಸವಾಲುಗಳು ಮತ್ತು ಪರೀಕ್ಷೆಗಳನ್ನು ಒಡ್ಡುತ್ತವೆ. ಆದರೆ, 2026ರಲ್ಲಿ ಶನಿಯ ಚಲನೆಯಲ್ಲಿನ ಬದಲಾವಣೆಯು ಕೆಲವು ರಾಶಿಯವರ ಜೀವನದಲ್ಲಿನ ಕಷ್ಟಗಳನ್ನು ಕೊನೆಯಾಗಿಸಬಹುದು. ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ ನೀಡಬಹುದು.

Saturn Retrograde 2026

ಇನ್ನು ಈ ಅವಧಿಯಲ್ಲಿ ಶನಿ ದೇವರಿಗೆ ಸಂಬಂಧಿಸಿದ ಪೂಜೆಯನ್ನು ಮಾಡಿಸುವುದರಿಂದ ಇನ್ನೂ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

ಕುಂಭ ರಾಶಿ:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕುಂಭ ರಾಶಿಯವರು ಪ್ರಸ್ತುತ ಶನಿಯ ಸಾಡೇ ಸಾತಿಯ ಅಂತಿಮ ಹಂತವನ್ನು ಅನುಭವಿಸುತ್ತಿದ್ದಾರೆ. ಈ ಹಂತದಲ್ಲಿ, ಕೆಲವು ಸಮಯದಿಂದ ಎದುರಿಸುತ್ತಿರುವ ಒತ್ತಡಗಳು, ಅನಿಶ್ಚಿತತೆಗಳು, ಕೆಲಸದಲ್ಲಿನ ಅಡೆತಡೆಗಳು ಮತ್ತು ಭವಿಷ್ಯದ ಬಗ್ಗೆ ಚಿಂತೆಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗುವ ಸೂಚನೆಗಳಿವೆ. ಶನಿಯ ವಕ್ರ ಚಲನೆಯ ಆರಂಭದ ನಂತರ, ಪರಿಸ್ಥಿತಿಯಲ್ಲಿ ಕ್ರಮೇಣ ಬದಲಾವಣೆಯಾಗಬಹುದು ಎನ್ನಲಾಗಿದೆ.

ಈ ರಾಶಿಯವರ ಮೇಲೆ ಗುರು, ಶನಿಯ ಕೃಪೆ : ಕಷ್ಟ ಕಳೆಯುವ ಕಾಲ, ಸಾಲದಿಂದ ಸಿಗುವುದು ಮುಕ್ತಿ
ಈ ರಾಶಿಯವರ ಮೇಲೆ ಗುರು, ಶನಿಯ ಕೃಪೆ : ಕಷ್ಟ ಕಳೆಯುವ ಕಾಲ, ಸಾಲದಿಂದ ಸಿಗುವುದು ಮುಕ್ತಿ

ದೀರ್ಘಕಾಲದಿಂದ ಬಾಕಿ ಉಳಿದಿರುವ ಹಣಕಾಸಿನ ಸಮಸ್ಯೆಗೆ ಪರಿಹಾರ ಸಿಗುವ ಸಾಧ್ಯತೆ ಇದೆ. ಕೈ ಸೇರದೆ ಬಾಕಿ ಉಳಿದಿರುವ ಹಣ ಮತ್ತೆ ನಿಮ್ಮದಾಗುವುದು. ವ್ಯಾಪಾರ ವಲಯದಲ್ಲಿರುವವರ ಆದಾಯ ಹೆಚ್ಚಾಗುವುದು. ಉದ್ಯೋಗಿಗಳಿಗೆ ಕಚೇರಿ ರಾಜಕೀಯ ಮತ್ತು ಅನಗತ್ಯ ಒತ್ತಡಗಳಿಂದ ಸ್ವಲ್ಪ ಪರಿಹಾರ ಸಿಗಬಹುದು. ನಿಮ್ಮ ಕಾರ್ಯಕ್ಷಮತೆಗೆ ಮನ್ನಣೆ ಸಿಗುವ ಸಾಧ್ಯತೆಗಳಿವೆ.

ಮೀನ ರಾಶಿ:

ಮೀನರಾಶಿಯವರು ಪ್ರಸ್ತುತ ಶನಿ ಸಾಡೇ ಸತಿಯ ಎರಡನೇ ಹಂತದಲ್ಲಿದ್ದಾರೆ. ಈ ಹಂತವನ್ನು ಸಾಮಾನ್ಯವಾಗಿ ಅತ್ಯಂತ ತೀವ್ರ ಹಂತವೆಂದು ಪರಿಗಣಿಸಲಾಗುತ್ತದೆ. ಆದರೆ, ಶನಿಯ ಹಿಮ್ಮುಖ ಚಲನೆಯ ಸಮಯದಲ್ಲಿ ಪರಿಣಾಮವು ಸ್ವಲ್ಪಮಟ್ಟಿಗೆ ಕಡಿಮೆಯಾಗಬಹುದು. ಇತ್ತೀಚಿನವರೆಗೂ ವಿಳಂಬವಾಗಿದ್ದ ಕೆಲಸವು ಚುರುಕು ಪಡೆಯುವ ಸಾಧ್ಯತೆಯಿದೆ. ಪದೇ ಪದೇ ಮುಂದೂಡಲ್ಪಟ್ಟ ಯೋಜನೆಗಳು ಅಥವಾ ವೈಯಕ್ತಿಕ ಕಾರ್ಯಕ್ರಮಗಳು ಪೂರ್ಣಗೊಳ್ಳುವತ್ತ ಸಾಗಬಹುದು.ವ್ಯಾಪಾರ, ಮಾಧ್ಯಮ ಮತ್ತು ಸಂವಹನ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಹೊಸ ಅವಕಾಶಗಳು, ಜವಾಬ್ದಾರಿಗಳು ಸಿಗುವ ಸಾಧ್ಯತೆಯಿದೆ. ಹಿಂದೆ ಉಂಟಾದ ಆರ್ಥಿಕ ನಷ್ಟಗಳನ್ನು ಸರಿದೂಗಿಸಲು ಅವಕಾಶವೂ ಇರಬಹುದು.

ಶುಕ್ರ ಮತ್ತು ಚ೦ದ್ರ ಪರಿವರ್ತನ ಯೋಗದಿಂದ 6 ರಾಶಿಯವರಿಗೆ ಅದೃಷ್ಟ : ಒಲಿಯುವುದು ಸಿರಿ ಸಂಪತ್ತು, ಕೂಡಿ ಬರುವುದು ಮದುವೆ ಭಾಗ್ಯ
ಶುಕ್ರ ಮತ್ತು ಚ೦ದ್ರ ಪರಿವರ್ತನ ಯೋಗದಿಂದ 6 ರಾಶಿಯವರಿಗೆ ಅದೃಷ್ಟ : ಒಲಿಯುವುದು ಸಿರಿ ಸಂಪತ್ತು, ಕೂಡಿ ಬರುವುದು ಮದುವೆ ಭಾಗ್ಯ

ಆರೋಗ್ಯದ ದೃಷ್ಟಿಯಿಂದಲೂ ಕೆಲವು ಸಕಾರಾತ್ಮಕ ಬದಲಾವಣೆಗಳು ಕಂಡುಬರುವ ನಿರೀಕ್ಷೆಯಿದೆ. ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕೊನೆಯಾಗುವುದು. ದೈಹಿಕ ಮತ್ತು ಮಾನಸಿಕ ಉತ್ಸಾಹ ಹೆಚ್ಚಾಗುವುದು. ಇದು ಆತ್ಮವಿಶ್ವಾಸವನ್ನು ಹೆಚ್ಚಿಸುವ ಸಾಧ್ಯತೆಯಿದೆ.

ಜ್ಯೋತಿಷ್ಯ ಫಲಿತಾಂಶಗಳು ವೈಯಕ್ತಿಕ ಜನ್ಮ ಜಾತಕ, ಗ್ರಹಗಳ ಸ್ಥಾನಗಳು, ಹಂತಗಳು ಮತ್ತು ಸಂಚಾರಗಳನ್ನು ಆಧರಿಸಿ ಬದಲಾಗಬಹುದು ಎಂಬುದು ನೆನಪಿರಲಿ. ಆದ್ದರಿಂದ, ಇವುಗಳನ್ನು ಸಾಮಾನ್ಯ ಜ್ಯೋತಿಷ್ಯ ವಿಶ್ಲೇಷಣೆಗಳೆಂದು ಪರಿಗಣಿಸಬೇಕು.ಆದರೂ 2026 ರ ಶನಿಯ ಹಿಮ್ಮುಖ ಚಲನೆಯು ಕುಂಭ ಮತ್ತು ಮೀನ ರಾಶಿಯಲ್ಲಿ ಜನಿಸಿದವರಿಗೆ ಸ್ವಲ್ಪ ಪರಿಹಾರವನ್ನು ನೀಡುವ ಹಂತವಾಗಿದೆ ಎನ್ನಲಾಗಿದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+