ಕಾಂಗ್ರೆಸ್ ಪಕ್ಷ ಸೇರಿದ ನವಜ್ಯೋತ್ ಸಿಂಗ್ ಸಿಧು ಪತ್ನಿ ಕೌರ್

Posted By:
Subscribe to Oneindia Kannada

ನವದೆಹಲಿ, ನವೆಂಬರ್ 28: ಮಾಜಿ ಕ್ರಿಕೆಟರ್, ಕಾಮೆಂಟೆಟರ್, ಮಾಜಿ ಸಂಸದ ನವಜ್ಯೋತ್ ಸಿಂಗ್ ಸಿಧು ಅವರ ಪತ್ನಿ ನವಜ್ಯೋತ್ ಕೌರ್ ಹಾಗೂ ಮಾಜಿ ಒಲಿಂಪಿಯನ್ ಪರ್ಗತ್ ಸಿಂಗ್ ಅವರು ಕಾಂಗ್ರೆಸ್ ಪಕ್ಷವನ್ನು ನವೆಂಬರ್ 28ರಂದು ಅಧಿಕೃತವಾಗಿ ಸೇರಿದ್ದಾರೆ.

ಪಂಜಾಬ್ ಕಾಂಗ್ರೆಸ್ ಘಟಕದ ಮುಖ್ಯಸ್ಥ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸಿಧು ಪತ್ನಿ ಕೌರ್ ಸೇರ್ಪಡೆಯನ್ನು ಖಚಿತಪಡಿಸಿದ್ದಾರೆ.

Navjot Kaur Sidhu and Pargat Singh join Congress

ಸಿಧು ಅವರ ಪತ್ನಿ ಕೌರ್ ಅವರು ಪಂಜಾಬಿನ ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಂಸದೀಯ ಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳಿದು ಅಕ್ಟೋಬರ್ 8ರಂದು ಬಿಜೆಪಿಯನ್ನು ಅಧಿಕೃತವಾಗಿ ತೊರೆದಿದ್ದರು.

ಸಿಧು ಅವರು ಸೆಪ್ಟೆಂಬರ್ 08 ರಂದು ಹೊಸ ರಾಜಕೀಯ ಪಕ್ಷ ಅವಾಜ್ ಇ ಪಂಜಾಬ್ ಗೆ ನಾಂದಿ ಹಾಡಿದ್ದರು. ಮಾಜಿ ಹಾಕಿ ಕ್ಯಾಪ್ಟನ್ ಪರ್ಗತ್ ಸಿಂಗ್ ಅವರು ಸಿಧು ಬೆನ್ನಿಗೆ ನಿಂತಿದ್ದರು. ಆದರೆ, ಈಗ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cricketer-turned-politician Navjot Singh Sidhu's wife Navjot Kaur and Former Olympian Pargat singh formally joined the Congress at the party's headquarters in New Delhi today.
Please Wait while comments are loading...