ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯದಲ್ಲಿ ವೈರತ್ವ ಸಾಂದರ್ಭಿಕವಷ್ಟೆ ಎನ್ನಲು ಮೋದಿಯ ಈ ಚಿತ್ರ ಸಾಕ್ಷಿ

By Manjunatha
|
Google Oneindia Kannada News

Recommended Video

ನರೇಂದ್ರ ಮೋದಿ ಹಾಗು ಮಲ್ಲಿಕಾರ್ಜುನ ಖರ್ಗೆ ಫೋಟೋ ವೈರಲ್ | Onendia Kannada

ನವದೆಹಲಿ, ಜುಲೈ 18: ರಾಜಕೀಯದಲ್ಲಿ ವೈರತ್ವ ಎನ್ನುವುದು ಕೇವಲ ಸಾಂದರ್ಭಿಕವಷ್ಟೆ ಎಂಬುದಕ್ಕೆ ಸಾಕ್ಷಿ ನರೇಂದ್ರ ಮೋದಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಈ ಚಿತ್ರ.

ಸಂಸತ್ ಅಧಿವೇಶನಕ್ಕೂ ಮುನ್ನಾ ಸಂಪ್ರದಾಯದಂತೆ ನಿನ್ನೆ ನಡೆಯುವ ಸರ್ವ ಪಕ್ಷ ಸಭೆಗೆ ತೆರಳುವಾಗ ಪ್ರಧಾನ ಮೋದಿ ಹಾಗೂ ಸಂಸತ್‌ನಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಕೈ ಹಿಡಿದುಕೊಂಡು ನಗುತ್ತಾ ಬಂದಿದ್ದು ಎಲ್ಲರ ಗಮನ ಸೆಳೆದರು.

ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ

ಸಂಸತ್‌ನಲ್ಲಿಯೇ ಆಗಲಿ ಹೊರಗೆ ಆಗಲಿ ರಾಜಕೀಯದ ವಿಚಾರ ಬಂದಾಗ ಇಬ್ಬರ ನಡುವಿನ ವೈರತ್ವ ಕಂಠಮಟ್ಟದಲ್ಲಿರುತ್ತದೆ. ಅವಕಾಶ ಸಿಕ್ಕಾಗೆಲ್ಲಾ ಖರ್ಗೆ ಅವರು ಮೋದಿ ವಿರುದ್ಧ ಹರಿಹಾಯುವುದು ಸರ್ವೆ ಸಾಮಾನ್ಯ. ಮೋದಿ ಸಹ ಕಾಂಗ್ರೆಸ್ ಪಕ್ಷವನ್ನು ಜರಿಯುತ್ತಾ ಬಂದಿರುವುದು ತಿಳಿದದ್ದೆ.

Narendra Modi sharing a lighter moment with Mallikarjun Kharge

ಆದರೆ ರಾಜಕೀಯದ ಹೊರತಾಗಿ ಮಾನವೀಯ ನೆಲೆಯಲ್ಲಿ ಎಲ್ಲರೂ ಸ್ನೇಹಿತರಷ್ಟೆ ಎಂಬುದನ್ನು ಈ ಚಿತ್ರ ತೋರುತ್ತಿದೆ. ಚಿತ್ರದಲ್ಲಿ ಕೇಂದ್ರ ಮಂತ್ರಿ ಅನಂತ್‌ಕುಮಾರ್ ಅವರು ಸಹ ಇದ್ದು, ಎಲ್ಲರೂ ನಗುತ್ತಾ ಸಭೆಗೆ ತೆರಳುತ್ತಿರುವ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಮೋದಿ ನೇತೃತ್ವದ ಸರ್ವಪಕ್ಷಗಳ ಸಭೆ ಸಕಾರಾತ್ಮಕ: ಅನಂತಕುಮಾರ್ಮೋದಿ ನೇತೃತ್ವದ ಸರ್ವಪಕ್ಷಗಳ ಸಭೆ ಸಕಾರಾತ್ಮಕ: ಅನಂತಕುಮಾರ್

ಇನ್ನು ನಿನ್ನೆ ನಡೆದ ಸರ್ವಪಕ್ಷ ಸಭೆಯಲ್ಲಿ ಸಕಾರಾತ್ಮಕ ಅಂಶಗಳು ಹೊರಬಂದಿವೆ ಎಂದು ಸಂಸದೀಯ ವ್ಯವಹಾರಗಳ ಸಚಿವರೂ ಆಗಿರುವ ಅನಂತ್‌ಕುಮಾರ್ ಹೇಳಿದ್ದಾರೆ. ಅಧಿವೇಶನವು ಸುಗಮವಾಗಿ ನಡೆಯುವಂತೆ ಅವಕಾಶ ನೀಡುವುದಾಗಿ ವಿರೋಧ ಪಕ್ಷಗಳು ಭರವಸೆ ನೀಡಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

Narendra Modi sharing a lighter moment with Mallikarjun Kharge

ಸಂಸತ್ ಮುಂಗಾರು ಅಧಿವೇಶನವು ಇಂದಿನಿಂದ ಆಗಸ್ಟ್ 10ರ ವರೆಗೆ ನಡೆಯಲಿದೆ. ಉಪಾಧ್ಯಕ್ಷರ ಆಯ್ಕೆ ಸೇರಿದಂತೆ ಹಲವು ಪ್ರಮುಖ ಮಸೂದೆಗಳು ಸಂಸತ್‌ನಲ್ಲಿ ಮಂಡನೆಯಾಗಲಿವೆ.

English summary
Prime minister Narendra Modi sharing a lighter moment with Congress leader Mallikarjun Kharge in Parliament. This photo went viral in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X