ಉತ್ತರಪ್ರದೇಶ ಮಕ್ಕಳು ಬರೆದ ಪತ್ರಕ್ಕೆ ಸ್ಪಂದಿಸಿದ ಮೋದಿ

Posted By:
Subscribe to Oneindia Kannada

ನವದೆಹಲಿ,ಮಾರ್ಚ್,05: ಕುಟುಂಬದ ಆರ್ಥಿಕ ಸಬಲೀಕರಣಕ್ಕಾಗಿ ಹಾಗೂ ತಂದೆಗೆ ಬಾಧಿಸಿದ್ದ ಕಾಯಿಲೆ ನಿವಾರಣೆಗಾಗಿ ಪ್ರಧಾನಿ ನರೇಂದ್ರ ಮೋದಿಗೆ ಮಕ್ಕಳು ಬರೆದ ಪತ್ರಕ್ಕೆ ಪ್ರಧಾನಿ ಕಚೇರಿಯಿಂದ ಸ್ಪಂದನೆ ದೊರೆತಿದ್ದು, ಸಹಾಯ ಮಾಡುವುದಾಗಿ ಭರವಸೆ ನೀಡಿದೆ. ಇದೀಗ ಕುಟುಂಬದಲ್ಲಿ ಸಂತಸ ಮೂಡಿದೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಸುಶಾಂತ್ ಮಿಶ್ರಾ ಮತ್ತು ಈತನ ತಮ್ಮ ತನ್ಮಯ್ ತಮ್ಮ ಕುಟುಂಬ ಎದುರಿಸುತ್ತಿರುವ ಕಷ್ಟಗಳು, ಖಾಯಿಲೆಗೆ ತುತ್ತಾದ ತಂದೆ ಬಗ್ಗೆ ಹೀಗೆ ಸವಿವರವಾಗಿ ಬರೆದು ಸಹಕಾರ ನೀಡಬೇಕೆಂದು ಕೋರಿ ಪ್ರಧಾನಿಗೆ ಪತ್ರ ಬರೆದಿದ್ದರು.[ಪ್ರಧಾನಿ ನರೇಂದ್ರ ಮೋದಿಗೆ ಮಕ್ಕಳು ಬರೆದ ಪತ್ರದಲ್ಲೇನಿದೆ?]

Narendra modi responds to letter by Uttar pradesh Children

ಸುಶಾಂತ್ ಮಿಶ್ರಾ ಮತ್ತು ಈತನ ತಮ್ಮ ತನ್ಮಯ್ ಮೂಲತಃ ಉತ್ತರ ಪ್ರದೇಶದ ಕಾನ್ಪುರದವರು. ಇವರ ತಂದೆ ಸರೋಜ್ ಮಿಶ್ರಾ. ಇವರು ಟೈಲರಿಂಗ್ ವೃತ್ತಿ ಮಾಡುತ್ತಿದ್ದರು. ಆದರೆ ಇವರು ಎರಡು ವರ್ಷದಿಂದ ಅಸ್ತಮಾ ಖಾಯಿಲೆಯಿಂದ ನರಳುತ್ತಿದ್ದು, ಟೈಲರಿಂಗ್ ವೃತ್ತಿಯನ್ನು ಮುಂದುವರೆಸಲು ಸಾಧ್ಯವಾಗುತ್ತಿಲ್ಲ.

ಸರೋಜ್ ಮಿಶ್ರಾ ಅವರ ದುಡಿಮೆಯೇ ಬದುಕಿಗೆ ಆಧಾರವಾಗಿತ್ತು. ತಂದೆಯ ಪರಿಸ್ಥಿತಿ ಆರು ತಿಂಗಳಿಂದ ತೀರಾ ಬಿಗಾಡಿಸಿದ ಪರಿಣಾಮ, ಟೈಲರಿಂಗ್ ವೃತ್ತಿ ಕೈಬಿಟ್ಟಿದ್ದಾರೆ. ಇದರಿಂದ ಮಕ್ಕಳಿಗೆ ಶಾಲಾ ಶುಲ್ಕ ಕಟ್ಟಿಲ್ಲವಾದ್ದರಿಂದ ಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ. ಅಲ್ಲದೇ ಇತ್ತೀಚೆಗೆ ಮನೆ ನಿರ್ವಹಣೆಯೂ ತೀರಾ ಕಷ್ಟವಾಗುತ್ತಿತ್ತು.[ಮಂಗಳೂರು ವಿದ್ಯಾರ್ಥಿ ಪ್ರಧಾನಿ ಮೋದಿ ಪತ್ರ ಬರೆದಿದ್ದೇಕೆ?]

ನೆರೆಹೊರೆಯವರ ಹಾಗೂ ಸಂಬಂಧಿಕರ ಸಹಾಯದಿಂದ ಜೀವನ ಸಾಗಿಸುತ್ತಿದ್ದರೂ ದಿನದಿಂದ ದಿನಕ್ಕೆ ಕಷ್ಟಗಳು ಹೆಚ್ಚಾಗುತ್ತಲೇ ಇವೆ ಎಂಬುದನ್ನು ಮನಗಂಡ ಮಕ್ಕಳು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ಇದೀಗ ಅವರಿಂದ ದೊರೆತ ಪ್ರತಿಕ್ರಿಯೆಯಿಂದ ಮಕ್ಕಳು ಸಂತೋಷವಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi has responded to the letter written by Uttarpradesh's Kanpur Children Sushanth Mishra and Tanmay regarding pathetic situation of home. His father suffering from Astama
Please Wait while comments are loading...