• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜನ ಬಡಿಗೆಯಲ್ಲಿ ಹೊಡೆಯುತ್ತಾರೆ ಎಂದ ರಾಹುಲ್ ಗಾಂಧಿಗೆ ಮೋದಿ ನೀಡಿದ ಉತ್ತರ ಇದು!

|

ನವದೆಹಲಿ, ಫೆಬ್ರವರಿ 6: ನಿರುದ್ಯೋಗದಿಂದ ಬೇಸೆತ್ತಿರುವ ಜನರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಡಿಗೆಯಿಂದ ಬಾರಿಸಲು ಶುರುಮಾಡುತ್ತಾರೆ. ಆರು ತಿಂಗಳ ಬಳಿಕ ಅವರು ಮನೆಯಿಂದ ಹೊರಹೋಗಲು ಸಾಧ್ಯವಾಗದಂತಹ ಪರಿಸ್ಥಿತಿ ಉಂಟಾಗಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ರಾಹುಲ್ ಹೇಳಿಕೆಗೆ ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿ ತೀಕ್ಷ್ಣ ಉತ್ತರ ನೀಡಿದ್ದಾರೆ. ಈ ರೀತಿಯ ಪ್ರದೋಚನಾಕಾರಿ ಹೇಳಿಕೆಗಳ ಮೂಲಕ ರಾಹುಲ್ ಗಾಂಧಿ, ದೇಶವನ್ನು ಶಹೀನ್ ಬಾಗ್ ಆಗಿ ಬದಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

LIVE: ಮೋದಿ ಭಾಷಣ: ರಾಮಜನ್ಮಭೂಮಿ, ಸಿಎಎ ಸದ್ದು, ವಿಪಕ್ಷಕ್ಕೆ ಗುದ್ದು

ದೆಹಲಿಯಲ್ಲಿ ಬುಧವಾರ ಚುನಾವಣಾ ಪ್ರಚಾರ ನಡೆಸಿದ ರಾಹುಲ್ ಗಾಂಧಿ, ನಿರುದ್ಯೋಗದ ಸಮಸ್ಯೆ ಬಗೆಹರಿದಿಲ್ಲ. ಹೀಗೆಯೇ ಪರಿಸ್ಥಿತಿ ಮುಂದುವರಿದರೆ ಪ್ರಧಾನಿ ವಿರುದ್ಧ ಯುವಜನರು ರೊಚ್ಚಿಗೆದ್ದು ಹೊಡೆಯುತ್ತಾರೆ ಎಂದು ಹೇಳಿದ್ದರು.

ಬಡಿಗೆಗಳಿಂದ ಹೊಡೆಯುತ್ತಾರೆ

ಬಡಿಗೆಗಳಿಂದ ಹೊಡೆಯುತ್ತಾರೆ

'ಪ್ರಧಾನಿ ಈಗ ಭಾಷಣಗಳನ್ನು ಮಾಡುತ್ತಿದ್ದಾರೆ. ಆದರೆ ಆರು ತಿಂಗಳ ಬಳಿಕ ಅವರಿಗೆ ಮನೆಯಿಂದ ಹೊರಬರಲು ಕೂಡ ಆಗದಂತಹ ಪರಿಸ್ಥಿತಿ ಎದುರಾಗಲಿದೆ. ಭಾರತದ ಯುವಜನರು ಅವರಿಗೆ ಬಡಿಗೆಗಳಿಂದ ಬಾರಿಸುತ್ತಾರೆ. ಮತ್ತು ಅವರಿಗೆ ಉದ್ಯೋಗ ಒದಗಿಸುವವರೆಗೂ ಈ ದೇಶ ಪ್ರಗತಿ ಹೊಂದಲು ಸಾಧ್ಯವಿಲ್ಲ ಎಂಬುದನ್ನು ಅವರಿಗೆ ಅರ್ಥ ಮಾಡಿಸುತ್ತಾರೆ' ಎಂದು ರಾಹುಲ್ ಗಾಂಧಿ ಹೇಳಿದ್ದರು.

ನಿರುದ್ಯೋಗದ ಬಗ್ಗೆ ಮಾತೇ ಆಡುತ್ತಿಲ್ಲ

ನಿರುದ್ಯೋಗದ ಬಗ್ಗೆ ಮಾತೇ ಆಡುತ್ತಿಲ್ಲ

'ದೇಶದಲ್ಲಿ ನಿರುದ್ಯೋಗದ ಸಮಸ್ಯೆ 45 ವರ್ಷಗಳಲ್ಲಿಯೇ ಅತ್ಯಧಿಕವಾಗಿದೆ. ಆದರೆ ಬಜೆಟ್‌ನಲ್ಲಾಗಲೀ ಅಥವಾ ನರೇಂದ್ರ ಮೋದಿ ಮತ್ತು ನಿರ್ಮಲಾ ಸೀತಾರಾಮನ್ ಅವರ ಭಾಷಣದಲ್ಲಾಗಲೀ ಅದರ ಬಗ್ಗೆ ಒಂದೇ ಒಂದು ಮಾತನಾಡಿಲ್ಲ. ಯುವಜನರು ಉದ್ಯೋಗ ಪಡೆಯುವುದನ್ನು ಪ್ರಧಾನಿ ಬಯಸಿಲ್ಲ. ಏಕೆಂದರೆ ಅದು ಅವರ ರಾಜಕೀಯಕ್ಕೆ ಆಮ್ಲಜನಕದಂತೆ ಕೆಲಸ ಮಾಡುತ್ತದೆ' ಎಂದು ರಾಹುಲ್ ವಾಗ್ದಾಳಿ ನಡೆಸಿದ್ದರು.

ಮೋದಿ ಒಂದು ದಿನ ತಾಜ್‌ಮಹಲನ್ನೂ ಮಾರುತ್ತಾರೆ: ರಾಹುಲ್ ಗಾಂಧಿ ವಾಗ್ದಾಳಿ

ಇದಕ್ಕೆ ಸಂಸತ್‌ನಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಸ್ಯಧಾಟಿಯಲ್ಲಿ ಪ್ರತಿಕ್ರಿಯೆ ನೀಡಿದರು.

ಹೆಚ್ಚು ಸೂರ್ಯ ನಮಸ್ಕಾರ ಮಾಡುತ್ತೇನೆ

ಹೆಚ್ಚು ಸೂರ್ಯ ನಮಸ್ಕಾರ ಮಾಡುತ್ತೇನೆ

'70 ವರ್ಷಗಳಲ್ಲಿ ಕಾಂಗ್ರೆಸ್‌ನ ಯಾವ ನಾಯಕರೂ ಬೌದ್ಧಿಕವಾಗಿ ಬೆಳೆಯಲಿಲ್ಲ. ಒಬ್ಬ ನಾಯಕರ ಪ್ರಣಾಳಿಕೆಯನ್ನು ಕೇಳಿದೆ- ಅವರು ಹೇಳುತ್ತಾರೆ, ಇನ್ನು ಆರು ತಿಂಗಳಲ್ಲಿ ಮೋದಿಯನ್ನು ಹೊಡೆಯುತ್ತಾರೆ ಎಂದು. ಅದು ಬಹಳ ಕಷ್ಟಕರ ಸ್ಥಿತಿ ಎಂದು ನಾನು ಊಹಿಸಬಲ್ಲೆ. ಹೀಗಾಗಿ ಅದಕ್ಕೆ ಸಿದ್ಧರಾಗಲು ಆರು ತಿಂಗಳ ಸಮಯ ಬೇಕಾಗುತ್ತದೆ. ಆದರೆ ನಾನು ಕೂಡ ಈ ಆರು ತಿಂಗಳಲ್ಲಿ ಅದಕ್ಕೆ ಸಿದ್ಧತೆ ನಡೆಸುತ್ತೇನೆ. ಇನ್ನಷ್ಟು ಸೂರ್ಯ ನಮಸ್ಕಾರ ಮಾಡುತ್ತೇನೆ. ಅದರಿಂದ ಪೆಟ್ಟು ತಿನ್ನಲು ಸನ್ನದ್ಧನಾಗಬಹುದು. ಕಳೆದ 20 ವರ್ಷಗಳಲ್ಲಿ ನಾನು ಅನುಭವಿಸಿದ ನಿಂದನೆಗಳಿಂದಾಗಿ ನನ್ನನ್ನು ನಾನು ನಿಂದನಾ ನಿರೋಧಕ ಮತ್ತು ಏಟು ನಿರೋಧಕವನ್ನಾಗಿ ಮಾಡಿಕೊಂಡಿದ್ದೇನೆ' ಎಂದರು.

'ನನಗೆ ಮುಂಚಿವಾಗಿಯೇ ಈ ಬಗ್ಗೆ ಸೂಚನೆ ನೀಡಿರುವುದಕ್ಕೆ ಅವರಿಗೆ ಕೃತಜ್ಞನಾಗಿರುತ್ತೇನೆ' ಎಂದು ವ್ಯಂಗ್ಯವಾಗಿ ಹೇಳಿದರು.

ರಾಹುಲ್ ಗಾಂಧಿ ಮತ್ತು ಟ್ಯೂಬ್‌ಲೈಟ್

ರಾಹುಲ್ ಗಾಂಧಿ ಮತ್ತು ಟ್ಯೂಬ್‌ಲೈಟ್

ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ವೇಳೆ ರಾಹುಲ್ ಗಾಂಧಿ ಅವರ ತಡವಾದ ಪ್ರತಿಕ್ರಿಯೆಯನ್ನು 'ಟ್ಯೂಬ್‌ಲೈಟ್‌'ಗೆ ಹೋಲಿಸುವ ಮೂಲಕ ಮೋದಿ ಅಣಕಿಸಿದರು.

'ಹಣಕಾಸು ಸಚಿವರೇ, ಪ್ರಶ್ನೆಗೆ ಹೆದರಬೇಡಿ, ಉತ್ತರ ಕೊಡಿ ಸಾಕು'

ಮೋದಿ ಅವರ ಭಾಷಣ ಭಾಷಣ ಮುಗಿಯುತ್ತಾ ಬಂದಾಗ ಮೇಲೆದ್ದ ರಾಹುಲ್ ಗಾಂಧಿ, ಸಂಸತ್‌ನಲ್ಲಿ ಗದ್ದಲದಿಂದಾಗಿ ಭಾಷಣ ಸರಿಯಾಗಿ ಕೇಳಿಸುತ್ತಿಲ್ಲ ಎಂದರು. ಅದಕ್ಕೆ ಮೋದಿ, 'ಕಳೆದ 30-40 ನಿಮಿಷಗಳಿಂದ ನಾನು ಮಾತನಾಡುತ್ತಿದ್ದೇನೆ. ಆದರೆ ಕರೆಂಟ್ ತಲುಪಲು ಇಷ್ಟು ಸಮಯ ಬೇಕಾಯಿತು. ಹೆಚ್ಚಿನ ಟ್ಯೂಬ್‌ಲೈಟ್‌ಗಳು ಹೀಗೆಯೇ ಇರುತ್ತವೆ' ಎಂದು ಮೋದಿ ಚಟಾಕಿ ಹಾರಿಸಿದಾಗ ಬಿಜೆಪಿ ಸದಸ್ಯರು ಜೋರಾಗಿ ನಗಲಾರಂಭಿಸಿದರು.

English summary
Congress leader Rahul Gandhi got witty reply by PM Narendra Modi, for his remark youth will beat Modi with sticks over the lack of jobs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X